Last Updated:
ಮೊದಲ ದಿನ ಟೀಮ್ ಇಂಡಿಯಾ 83 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 264 ರನ್ಗಳಿಸಿದೆ. ಕನ್ನಡಿಗ ಕೆಎಲ್ ರಾಹುಲ್ 46 ರನ್ಗಳಿಸಿದರೆ, ಯುವ ಆಟಗಾರ ಜೈಸ್ವಾಲ್ 58 ಹಾಗೂ ಸಾಯಿ ಸುದರ್ಶನ್ 61 ರನ್ಗಳಿಸಿ ಮೊದಲ ದಿನ ಭಾರತಕ್ಕೆ ನೆರವಾದರು. ಪ್ರಸ್ತುತ ರವೀಂದ್ರ ಜಡೇಜಾ ಅಜೇಯ 19, ಶಾರ್ದೂಲ್ ಠಾಕೂರ್ ಅಜೇಯ 19 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಭಾರತದ ಸರಣಿ ಜಯದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ನಿರ್ಣಾಯಕವಾಗಿರುವ 4ನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನ ಮೈದಾನದಲ್ಲಿ ಆರಂಭವಾಗಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರು ಟೀಮ್ ಇಂಡಿಯಾ ಮೊದಲ ದಿನ ಅತ್ಯುತ್ತಮ ಪ್ರದರ್ಶನ ತೋರಿದೆ. ಮೊದಲ ದಿನ ಟೀಮ್ ಇಂಡಿಯಾ 83 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 264 ರನ್ಗಳಿಸಿದೆ. ಕನ್ನಡಿಗ ಕೆಎಲ್ ರಾಹುಲ್ 46 ರನ್ಗಳಿಸಿದರೆ, ಯುವ ಆಟಗಾರ ಜೈಸ್ವಾಲ್ 58 ಹಾಗೂ ಸಾಯಿ ಸುದರ್ಶನ್ 61 ರನ್ಗಳಿಸಿ ಮೊದಲ ದಿನ ಭಾರತಕ್ಕೆ ನೆರವಾದರು. ಪ್ರಸ್ತುತ ರವೀಂದ್ರ ಜಡೇಜಾ ಅಜೇಯ 19, ಶಾರ್ದೂಲ್ ಠಾಕೂರ್ ಅಜೇಯ 19 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ದುರಾದೃಷ್ಟವಶಾತ್ ಅದ್ಭುತವಾಗಿ ಆಡುತ್ತಿದ್ದ ಸ್ಫೋಟಕ ಆಟಗಾರ ರಿಷಭ್ ಪಂತ್ ಕಾಲಿನ ಗಾಯಕ್ಕೆ ಒಳಗಾಗಿ ಪಂದ್ಯದಿಂದ ಹೊರ ನಡೆದಿದಿರುವು ಭಾರತ ತಂಡಕ್ಕೆ ಆಂತಕವನ್ನುಂಟು ಮಾಡಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ತಂಡ ಮೊದಲ ವಿಕೆಟ್ಗೆ 94 ರನ್ಗಳ ಭರ್ಜರಿ ಜೊತೆಯಾಟ ನಡೆಸಿದರು. ಮೊದಲ ಸೆಷನ್ನಲ್ಲಿ ಆಂಗ್ಲ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಿದ ರಾಹುಲ್- ಜೈಸ್ವಾಲ್ ವಿಕೆಟ್ ಕಳೆದುಕೊಳ್ಳದೆ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿದರು. ಕನ್ನಡಿಗ ರಾಹುಲ್ 98 ಎಸೆತಗಳಲ್ಲಿ 4 ಬೌಂಡರಿ ಸಹಿತ 46 ರನ್ಗಳಿಸಿ ಅರ್ಧಶತಕಕ್ಕೆ ಕೇವಲ 4 ರನ್ಗಳ ಅಗತ್ಯವಿದ್ದಾಗ ಕ್ರಿಸ್ ವೋಕ್ಸ್ ಬೌಲಿಂಗ್ನಲ್ಲಿ ಜ್ಯಾಕ್ ಕ್ರಾಲೆಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ 3ನೇ ಕ್ರಮಾಂಕದಲ್ಲಿ ಬಂದ ಸಾಯಿ ಸುದರ್ಶನ್ 2ನೇ ವಿಕೆಟ್ ಜೊತೆಯಾಟದಲ್ಲಿ ಜೈಸ್ವಾಲ್ ಜೊತೆಗೂಡಿ 26 ರನ್ ಸೇರಿಸಿದರು.107 ಎಸೆತಗಳನ್ನೆದುರಿಸಿದ ಜೈಸ್ವಾಲ್ 10 ಬೌಂಡರಿ, 1 ಸಿಕ್ಸರ್ ಸಹಿತ 58 ರನ್ಗಳಿಸಿ ಸರಣಿಯಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಡಾಸೆನ್ಗೆ ವಿಕೆಟ್ ಒಪ್ಪಿಸಿದರು. 4ನೇ ಕ್ರಮಾಂಕದಲ್ಲಿ ಬಂದ ನಾಯಕ ಗಿಲ್ ಕೇವಲ 12 ರನ್ಗಳಿಸಿ ಔಟ್ ಆದರು.
4ನೇ ವಿಕೆಟ್ಗೆ ಸಾಯಿ ಸುದರ್ಶನ್ ಹಾಗೂ ರಿಷಭ್ ಪಂತ್ 72 ರನ್ಗಳ ಜೊತೆಯಾಟ ನಡೆಸಿದ್ದರು. ಆದರೆ 48 ಎಸೆತಗಳಲ್ಲಿ 37 ರನ್ಗಳಿಸಿದ್ದ ಪಂತ್ ಗಾಯಗೊಂಡು ಪೆವಿಲಿಯನ್ ತೊರೆದರು. ಇದರ ಬೆನ್ನಲ್ಲೇ ಸಾಯಿ ಸುದರ್ಶನ್ ಕೂಡ ವಿಕೆಟ್ ಒಪ್ಪಿಸಿದರು. 151 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ ಬೆನ್ ಸ್ಟೋಕಸ್ ಬೌಲಿಂಗ್ನಲ್ಲಿ ಬೆನ್ ಕಾರ್ಸ್ಗೆ ಕ್ಯಾಚ್ ನೀಡಿ ಔಟ್ ಆದರು.
ಪ್ರಸ್ತುತ ರವೀಂದ್ರ ಜಡೇಜಾ ಅಜೇಯ 19, ಶಾರ್ದೂಲ್ ಠಾಕೂರ್ ಅಜೇಯ 19 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 47ಕ್ಕೆ2, ಕ್ರಿಸ್ ವೋಕ್ಸ್ ಹಾಗೂ ಲಿಯಾಮ್ ಡಾಸನ್ ತಲಾ 1 ವಿಕೆಟ್ ಪಡೆದಿದ್ದಾರೆ.
July 23, 2025 11:27 PM IST