Last Updated:
ತಂಡದಲ್ಲಿ ನಾಯಕ ಬೆನ್ ಸ್ಟೋಕ್ಸ್ ಸೇರಿ 4 ಪ್ರಮುಖ ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯಲಿದೆ. ಮಾತ್ರವಲ್ಲ, ಆರ್‌ಸಿಬಿ ತಂಡದ ಬಿಗ್ ಹಿಟ್ಟರ್ ಒಬ್ಬರಿಗೂ ಪ್ಲೇಯಿಂಗ್ 11 ನಲ್ಲಿ ಅವಕಾಶ ನೀಡಿದ್ದಾರೆ.
ಭಾರತ-ಇಂಗ್ಲೆಂಡ್ (India vs England) ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಕೊನೆಯ ಪಂದ್ಯಕ್ಕೆ ಮ್ಯಾಚ್ ಆರಂಭಕ್ಕೆ ಒಂದು ದಿನ ಮೊದಲೇ ಪ್ಲೇಯಿಂಗ್ 11 ಅನ್ನು ಘೋಷಿಸಿದೆ. ತಂಡದಲ್ಲಿ ನಾಯಕ ಬೆನ್ ಸ್ಟೋಕ್ಸ್ (Ben Stokes) ಸೇರಿ 4 ಪ್ರಮುಖ ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯಲಿದೆ. ಮಾತ್ರವಲ್ಲ, ಆರ್‌ಸಿಬಿ (RCB) ತಂಡದ ಬಿಗ್ ಹಿಟ್ಟರ್ ಒಬ್ಬರಿಗೂ ಪ್ಲೇಯಿಂಗ್-11 ನಲ್ಲಿ ಅವಕಾಶ ನೀಡಿದ್ದಾರೆ.
ಗುರುವಾರ (ಜುಲೈ 23) ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಓಲಿ ಪೋಪ್ ಮುನ್ನಡೆಸಲಿದ್ದು, ಬೆನ್ ಸ್ಟೋಕ್ಸ್ ಅವರು ತಂಡದಿಂದ ಹೊರಗುಳಿಯಲಿದ್ದಾರೆ. ತಂಡದಲ್ಲಿ ಬೆನ್ ಸ್ಟೋಕ್ಸ್ ಸ್ಥಾನವನ್ನು ಆರ್‌ಸಿಬಿ ಆಟಗಾರ ಜಾಕೋಬ್ ಬೆಥೆಲ್ ಆಕ್ರಮಿಸಿಕೊಂಡಿದ್ದಾರೆ. ಅವರು ಕಳೆದ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆದ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಭಾವ ಬೀರಿದ್ದರು.
ಕಳೆದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಲಿಯಾಮ್ ಡಾಸನ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಜೇಮೀ ಓವರ್ಟನ್ ಅವರಿಗೆ ಪ್ಲೇಯಿಂಗ್-11 ನಲ್ಲಿ ಅವಕಾಶ ಸಿಕ್ಕಿದ್ದಾರೆ. ಕಾರಣ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ 4 ವೇಗಿಗಳನ್ನು ಕಣಕ್ಕಿಳಿಸಲಿದೆ. ಸ್ಪಿನ್ ವಿಭಾಗಕ್ಕೆ ಸಂಬಂಧಿಸಿದಂತೆ, ಜೋ ರೂಟ್ ಮತ್ತು ಬೆಥೆಲ್ ಇಬ್ಬರೂ ಕೊಡುಗೆ ನೀಡಲಿದ್ದಾರೆ.
ಇಂಗ್ಲೆಂಡ್ ಪ್ಲೇಯಿಂಗ್ XI: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಜೇಮೀ ಓವರ್ಟನ್ ಪ್ಲೇಯಿಂಗ್-11ನಲ್ಲಿ ಅವಕಾಶ ಪಡೆದಿದ್ದಾರೆ.
July 30, 2025 8:01 PM IST
IND vs ENG: ಭಾರತ ವಿರುದ್ಧದ 5ನೇ ಟೆಸ್ಟ್‌ನಿಂದ ನಾಯಕ ಸ್ಟೋಕ್ಸ್ ಔಟ್, RCB ಪವರ್ ಹಿಟ್ಟರ್‌ಗೆ ಚಾನ್ಸ್! ಹೇಗಿದೆ ಗೊತ್ತಾ ಇಂಗ್ಲೆಂಡ್ ಪ್ಲೇಯಿಂಗ್-XI?