IND vs ENG: ರೋಚಕ ಘಟ್ಟದಲ್ಲಿ 5ನೇ ಟೆಸ್ಟ್! ಇಂಗ್ಲೆಂಡ್​ಗೆ ಬೇಕು 35 ರನ್, ಸರಣಿ ಸಮಬಲ ಸಾಧಿಸಲು ಭಾರತಕ್ಕೆ ಬೇಕು 3 ವಿಕೆಟ್ | Thrilling Finale: England 35 Runs Away from Victory, India 4 Wickets from Series Equalization | ಕ್ರೀಡೆ

IND vs ENG: ರೋಚಕ ಘಟ್ಟದಲ್ಲಿ 5ನೇ ಟೆಸ್ಟ್! ಇಂಗ್ಲೆಂಡ್​ಗೆ ಬೇಕು 35 ರನ್, ಸರಣಿ ಸಮಬಲ ಸಾಧಿಸಲು ಭಾರತಕ್ಕೆ ಬೇಕು 3 ವಿಕೆಟ್ | Thrilling Finale: England 35 Runs Away from Victory, India 4 Wickets from Series Equalization | ಕ್ರೀಡೆ

Last Updated:


374 ರನ್​ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ 3ನೇ ದಿನ 50ಕ್ಕೆ1 ವಿಕೆಟ್ ಕಳೆದುಕೊಂಡಿತ್ತು. 4ನೇ ದಿನ ಚೇಸಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡ ಬಹುಬೇಗನೇ ಬೆನ್ ಡಕೆಟ್ ವಿಕೆಟ್ ಕಳೆದುಕೊಂಡಿತು.

ಭಾರತ vs ಇಂಗ್ಲೆಂಡ್ ತಂಡ ಭಾರತ vs ಇಂಗ್ಲೆಂಡ್ ತಂಡ
ಭಾರತ vs ಇಂಗ್ಲೆಂಡ್ ತಂಡ

ಕೆನ್ನಿಂಗ್ಟನ್ ಓವಲ್​​ನಲ್ಲಿ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್ (India vs England) ತಂಡ ಗೆಲುವಿನ ಸನಿಹ ಬಂದು ನಿಂತಿದೆ. 374 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಮಳೆಯ ಕಾರಣ ಪಂದ್ಯ ಸ್ಥಗಿತಗೊಳ್ಳುವ ಮುನ್ನ 6 ವಿಕೆಟ್ ಕಳೆದುಕೊಂಡು 339 ರನ್​ಗಳಿಸಿದೆ. ಕೊನೆಯ ದಿನ ಇಂಗ್ಲೆಂಡ್ ತಂಡ ಗೆಲ್ಲಲು ಇನ್ನು35 ರನ್​ಗಳಿಸಿದರೆ, ಇತ್ತ ಭಾರತ ತಂಡ ಕೊನೆಯ 3 ವಿಕೆಟ್ ಪಡೆದರೆ ಗೆಲುವು ಸಾಧಿಸಲಿದೆ. ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಶತಕ ಸಿಡಿಸಿ ಅಸಾಧ್ಯ ಗುರಿಯನ್ನ ಬೆನ್ನಟ್ಟಲು ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ಜೇಮಿ ಸ್ಮಿತ್ ಅಜೇಯ 2 ಹಾಗೂ ಜೇಮಿ ಓವರ್ಟನ್ ಇನ್ನು ಖಾತೆ ತೆರೆಯದೇ ಮೈದಾನದಲ್ಲಿದ್ದಾರೆ.

ಭಾರತಕ್ಕೆ ಆರಂಭಿಕ ಯಶಸ್ಸು

374 ರನ್​ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ 3ನೇ ದಿನ 50ಕ್ಕೆ1 ವಿಕೆಟ್ ಕಳೆದುಕೊಂಡಿತ್ತು. 4ನೇ ದಿನ ಚೇಸಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡ ಬಹುಬೇಗನೇ ಬೆನ್ ಡಕೆಟ್ ವಿಕೆಟ್ ಕಳೆದುಕೊಂಡಿತು. ಪ್ರಸಿಧ್ ಕೃಷ್ಣ ಬೌಲಿಂಗ್​​ನಲ್ಲಿ 83 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 54 ರನ್​ಗಳಿಸಿದ್ದ ಡಕೆಟ್ ಕೆಎಲ್ ರಾಹುಲ್​ಗೆ ಕ್ಯಾಚ್​ ನೀಡಿ ಔಟ್ ಆದರು. ನಂತರ ಬಂದ ನಾಯಕ ಒಲಿ ಪೋಪ್ 27 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಭಾರತದ ಆಸೆಗೆ ಭಂಗ ತಂದ ರೂಟ್-ಬ್ರೂಕ್

ಭಾರತ ಆರಂಭಿಕವಾಗಿ ವಿಕೆಟ್ ಪಡೆದು ಗೆಲುವು ಪಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಇಬ್ಬರು 195 ರನ್​ಗಳ ಜೊತೆಯಾಟ ನೀಡಿ ಭಾರತದ ಗೆಲುವಿನ ಆಸೆಗೆ ತಡೆಯಾದರು. ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಬ್ರೂಕ್ 98 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್​ಗಳ ಸಹಿತ 111 ರನ್​ಗಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. 19 ರನ್​ ಆಗಿದ್ದ ವೇಳೆ ಸಿರಾಜ್ ಬ್ರೂಕ್ ನೀಡಿದ್ದ ಕ್ಯಾಚ್​ ಹಿಡಿದು ಬೌಂಡರಿ ಗೆರೆ ತುಳಿದರು. ಆ ಅವಕಾಶ ಪಡೆದ ಬ್ರೂಕ್ ಭಾರತೀಯ ಬೌಲರ್​ಗಳನ್ನ ಬೆಂಡೆತ್ತಿದ್ದರು.

ಇದನ್ನೂ ಓದಿ: Joe Root: ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಗರಿಷ್ಠ ಶತಕ! ಸಂಗಕ್ಕಾರ ಹಿಂದಿಕ್ಕಿ ಹಲವು ಮೈಲುಗಲ್ಲು ನಿರ್ಮಿಸಿದ ರೂಟ್

ಬ್ರೂಕ್ ತಂಡದ ಮೊತ್ತ 301 ರನ್​ ಇದ್ದಾಗ ಆಕಾಶ್​ ದೀಪ್ ಬೌಲಿಂಗ್​​ನಲ್ಲಿ ಸಿರಾಜ್​ಗೆ ಕ್ಯಾಚ್ ನೀಡಿ ಔಟ್ ಆದರು. ಈ ವಿಕೆಟ್ ಕಳೆದುಕೊಂಡ ತಕ್ಷಣ ಇಂಗ್ಲೆಂಡ್ ತಂಡ ರನ್​ಗಳಿಸಲು ಪರದಾಡಿತು. ಜಾಕೋಬ್ ಬೆಥೆಲ್ 31 ಎಸೆತಗಳಲ್ಲಿ 5 ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ ಆದರು. ನಂತರ ಕೇವಲ 5 ರನ್​ಗಳ ಅಂತರದಲ್ಲಿ ರೂಟ್ ಕೂಡ ಔಟ್ ಆದರು. ರೂಟ್ 152 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 105 ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​​ನಲ್ಲಿ ಧ್ರುವ್ ಜುರೆಲ್​ಗೆ ಕ್ಯಾಚ್ ನೀಡಿ ಔಟ್ ಆದರು.

ಪ್ರಸ್ತುತ ಜೇಮಿ ಸ್ಮಿತ್ ಹಾಗೂ ಜೇಮಿ ಓವರ್​ಟನ್ ಮೈದಾನದಲ್ಲಿದ್ದಾರೆ. ಇಂಗ್ಲೆಂಡ್​ಗೆ ಗೆಲ್ಲಲು ಇನ್ನೂ 35 ರನ್​ಗಳ ಅಗತ್ಯವಿದೆ. ಜೇಮಿ ಸ್ಮಿತ್ ತಂಡದಲ್ಲಿರುವ ಏಕೈಕ ಸ್ಪೆಷಲಿಸ್ಟ್ ಬ್ಯಾಟರ್ ಆಗಿದ್ದಾರೆ. ಒಂದು ವೇಳೆ 5ನೇ ದಿನ ಆರಂಭದಲ್ಲಿ ಅವರ ವಿಕೆಟ್ ಪಡೆಯಲು ಭಾರತ ಸಫಲರಾದರೆ ಪಂದ್ಯ ಭಾರತದ ಪರ ತಿರುಗುವ ಅವಕಾಶ ಇದೆ. ಇಂಗ್ಲೆಂಡ್ ತಂಡದಲ್ಲಿ ಇನ್ನು 4 ವಿಕೆಟ್ ಬಾಕಿ ಇದ್ದರೂ ಕ್ರಿಸ್ ವೋಕ್ಸ್ ಗಾಯಗೊಂಡಿರುವುದರಿಂದ ಬ್ಯಾಟಿಂಗ್ ಇಳಿಯುವುದು ಅನುಮಾನವಾಗಿದೆ. ಹಾಗಾಗಿ ಇನ್ನು 3 ವಿಕೆಟ್ ಮಾತ್ರ ಭಾರತ ಪಡೆಯಬೇಕಿದೆ.

ಭಾರತದ ಪರ ಪ್ರಸಿಧ್ ಕೃಷ್ಣ 109ಕ್ಕೆ 3, ಅಕಾಶ್ ದೀಪ್ 85ಕ್ಕೆ1, ಮೊಹಮ್ಮದ್ ಸಿರಾಜ್ 95ಕ್ಕೆ 2 ವಿಕೆಟ್ ಪಡೆದಿದ್ದಾರೆ.