Last Updated:
ಭಾರತ ತಂಡವು ಲಾರ್ಡ್ಸ್‌ನಲ್ಲಿ ಇದುವರೆಗೆ 19 ಟೆಸ್ಟ್ ಪಂದ್ಯಗಳನ್ನು ಆಡಿದೆ, ಅದರಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ. 1986 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಮೊದಲ ಪಂದ್ಯವನ್ನು ಗೆದ್ದಿತ್ತು.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಟೆಸ್ಟ್‌ಗಳ ಸರಣಿಯ ಎರಡು ಪಂದ್ಯಗಳು ಮುಗಿದಿವೆ. ಇಂಗ್ಲೆಂಡ್ ಲೀಡ್ಸ್ ಟೆಸ್ಟ್ ಪಂದ್ಯವನ್ನ ಗೆದ್ದರೆ, ಭಾರತ ಎಡ್ಜ್‌ಬಾಸ್ಟನ್ ಟೆಸ್ಟ್ 336 ರನ್‌ಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಇದೀಗ ಸರಣಿ 1-1 ರಲ್ಲಿ ಸಮಬಲಗೊಂಡಿದೆ. ಈಗ ಮೂರನೇ ಪಂದ್ಯ ಜುಲೈ 10 ರಿಂದ ನಡೆಯಲಿದೆ. ಈ ಪಂದ್ಯವು ಲಾರ್ಡ್ಸ್‌ನ (Lord’s Stadium) ಐತಿಹಾಸಿಕ ಮೈದಾನದಲ್ಲಿ ನಡೆಯಲಿದೆ. ಲಾರ್ಡ್ಸ್ ಅನ್ನು ಕ್ರಿಕೆಟ್‌ನ ಮೆಕ್ಕಾ ಎಂದು ಕರೆಯಲಾಗುತ್ತದೆ ಮತ್ತು ಯಾವುದೇ ವಿದೇಶಿ ತಂಡಕ್ಕೆ ಇಲ್ಲಿ ಗೆಲ್ಲುವುದು ಸುಲಭವಲ್ಲ. ಹಾಗಾದರೆ ಮೂರನೇ ಟೆಸ್ಟ್‌ಗೆ ಮೊದಲು, ಲಾರ್ಡ್ಸ್‌ನಲ್ಲಿ ಟೀಮ್ ಇಂಡಿಯಾದ ಟೆಸ್ಟ್ ದಾಖಲೆ ಹೇಗಿದೆ ಎಂದು ತಿಳಿಯೋಣ.
ಭಾರತ ತಂಡವು ಲಾರ್ಡ್ಸ್‌ನಲ್ಲಿ ಇದುವರೆಗೆ 19 ಟೆಸ್ಟ್ ಪಂದ್ಯಗಳನ್ನು ಆಡಿದೆ, ಅದರಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ. 1986 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಮೊದಲ ಪಂದ್ಯವನ್ನು ಗೆದ್ದಿತು ಮತ್ತು 2014 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಎರಡನೇ ಪಂದ್ಯವನ್ನು ಗೆದ್ದಿತು. 2021 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೂರನೇ ಪಂದ್ಯವನ್ನು 151 ರನ್‌ಗಳಿಂದ ಗೆದ್ದಿತು. ಆ ಪಂದ್ಯದಲ್ಲಿ ಕೆಎಲ್ ರಾಹುಲ್ ಭಾರತಕ್ಕಾಗಿ 129 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮೊಹಮ್ಮದ್ ಸಿರಾಜ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು.
ಭಾರತವು 1932 ರಲ್ಲಿ ಲಾರ್ಡ್ಸ್‌ನಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಆ ಸಮಯದಲ್ಲಿ ಭಾರತವನ್ನು ಸಿಕೆ ನಾಯ್ಡು ಮುನ್ನಡೆಸಿದ್ದರು. ಇಂಗ್ಲೆಂಡ್ ಅನ್ನು ಡೌಗ್ಲಾಸ್ ಜಾರ್ಡಿನ್ ಮುನ್ನಡೆಸಿದರು. ಆ ಪಂದ್ಯವನ್ನು ಭಾರತ 158 ರನ್‌ಗಳಿಂದ ಸೋತಿತು. ಆ ನಂತರ ಲಾರ್ಡ್ಸ್‌ನಲ್ಲಿ ಮೊದಲ ಟೆಸ್ಟ್ ಗೆಲುವಿಗಾಗಿ ಭಾರತ 54 ವರ್ಷಗಳ ಕಾಲ ಕಾಯಬೇಕಾಯಿತು. 1986ರಲ್ಲಿ ಕಪಿಲ್ ದೇವ್ ನೇತತ್ವದಲ್ಲಿ ಮೊದಲ ಗೆಲುವು ಪಡೆದಿತ್ತು.
ಇದರ ನಂತರ, ಭಾರತ ಲಾರ್ಡ್ಸ್‌ನಲ್ಲಿ ಒಟ್ಟು 19 ಟೆಸ್ಟ್ ಪಂದ್ಯಗಳನ್ನು ಆಡಿದೆ, ಅದರಲ್ಲಿ ಕೇವಲ 3 ಪಂದ್ಯಗಳನ್ನು ಗೆದ್ದರೆ, 4 ಪಂದ್ಯಗಳು ಡ್ರಾ ಆಗಿವೆ ಮತ್ತು 12 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ.
ಶುಭ್ಮನ್ ಗಿಲ್ ಅವರಿಗೆ ಈಗ ದಾಖಲೆಗಳಲ್ಲಿ ತಮ್ಮ ಹೆಸರನ್ನು ಬರೆಯಲು ಒಂದು ಸುವರ್ಣಾವಕಾಶ ಸಿಕ್ಕಿದೆ. ಲಾರ್ಡ್ಸ್‌ನಲ್ಲಿ ಟೆಸ್ಟ್ ಗೆದ್ದ ನಾಲ್ಕನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಬಹುದು. ಗಿಲ್ ಮೊದಲ ಬಾರಿಗೆ ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯ ಆಡಲಿದ್ದಾರೆ. ಅವರು ಪ್ರಸ್ತುತ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. 25 ವರ್ಷದ ಭಾರತದ ನಾಯಕ ಎರಡು ಪಂದ್ಯಗಳಲ್ಲಿ 585 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಅದ್ಭುತ ಶತಕಗಳು ಮತ್ತು ಒಂದು ದ್ವಿಶತಕ ಸೇರಿವೆ. ಎಡ್ಜ್‌ಬಾಸ್ಟನ್‌ನಲ್ಲಿ ಅವರನ್ನು ಪಂದ್ಯಶ್ರೇಷ್ಠ ಎಂದು ಹೆಸರಿಸಲಾಯಿತು.
ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ದಾಖಲೆಯ ಬಗ್ಗೆ ಮಾತನಾಡಿದರೆ, ತಂಡವು ಇಲ್ಲಿ 145 ಪಂದ್ಯಗಳನ್ನು ಆಡಿದೆ, ಅದರಲ್ಲಿ 59 ಪಂದ್ಯಗಳನ್ನು ಗೆದ್ದಿದೆ ಮತ್ತು 35 ಪಂದ್ಯಗಳಲ್ಲಿ ಸೋತಿದೆ. 51 ಪಂದ್ಯಗಳು ಇಲ್ಲಿ ಡ್ರಾ ಆಗಿವೆ.
July 09, 2025 2:36 PM IST