Last Updated:
ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಅಂತಿಮ ಸೆಷನ್ನಲ್ಲಿ, ಇಂಗ್ಲೆಂಡ್ ಆರಂಭಿಕರಾದ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರಾಲಿ ಬ್ಯಾಟಿಂಗ್ ಮಾಡಲು ಬಂದರು. ಈ ಜೋಡಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತದಿಂದ ಜಯವನ್ನು ಕಸಿದುಕೊಂಡಿತ್ತು. ಅದಕ್ಕಾಗಿಯೇ ಅವರ ವಿಕೆಟ್‌ಗಳನ್ನು ಪಡೆಯುವುದು ಬಹಳ ಮುಖ್ಯವಾಗಿತ್ತು.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಶುಭ್ಮನ್ ಗಿಲ್ (Shubman Gill) ತಮ್ಮ ಬ್ಯಾಟಿಂಗ್ ಮತ್ತು ನಾಯಕತ್ವದ ಮೂಲಕ ಅದ್ಭುತವನ್ನೇ ಸೃಷ್ಟಿಸುತ್ತಿದ್ದಾರೆ. ಈ ಪಂದ್ಯದ ನಾಲ್ಕನೇ ದಿನದಂದು ಒಂದು ವಿಶೇಷ ದೃಶ್ಯ ಎಲ್ಲರ ಗಮನ ಸೆಳೆಯಿತು. ಗಿಲ್ ತಮ್ಮ ಅತ್ಯುತ್ತಮ ನಾಯಕತ್ವದಿಂದ ಪಂದ್ಯದಲ್ಲಿ ಭಾರತಕ್ಕೆ ಯಶಸ್ಸು ಸಿಗುವಂತೆ ಮಾಡಿದರು. ಶುಭ್ಮನ್ ಗಿಲ್ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್‌ಗೆ (Mohammed Siraj) ನೀಡಿದ ಒಂದು ಸಲಹೆ 4ನೇ ದಿನವೇ ಭಾರತಕ್ಕೆ ಪ್ರಮುಖ ಯಶಸ್ಸು ಸಿಗುವಂತೆ ಮಾಡಿದರು.
ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಅಂತಿಮ ಸೆಷನ್ನಲ್ಲಿ, ಇಂಗ್ಲೆಂಡ್ ಆರಂಭಿಕರಾದ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರಾಲಿ ಬ್ಯಾಟಿಂಗ್ ಮಾಡಲು ಬಂದರು. ಈ ಜೋಡಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತದಿಂದ ಜಯವನ್ನು ಕಸಿದುಕೊಂಡಿತ್ತು. ಅದಕ್ಕಾಗಿಯೇ ಅವರ ವಿಕೆಟ್‌ಗಳನ್ನು ಪಡೆಯುವುದು ಬಹಳ ಮುಖ್ಯವಾಗಿತ್ತು. ಈ ಸಮಯದಲ್ಲಿ, ನಾಯಕ ಶುಭ್ಮನ್ ಗಿಲ್ ಅವರ ಮಾಸ್ಟರ್ ಸ್ಟ್ರೋಕ್ ಕೆಲಸ ಮಾಡಿತ್ತು. ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ಇನ್ನಿಂಗ್ಸ್‌ನ ಎರಡನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಸಿರಾಜ್ ಫೀಲ್ಡರ್ಗಳನ್ನ ಬದಲಾಯಿಸಲು ಬಯಸಿದ್ದರು. ಆದರೆ ಲೀಡ್ಸ್ ಪಿಚ್‌ನಂತಲ್ಲ ಎಂದು ಶುಭ್ಮನ್ ಗಿಲ್ ಹೇಳಿದರು. ಗಿಲ್ ಅದೇ ಫೀಲ್ಡ್ ಸೆಟ್ಟಿಂಗ್ನೊಂದಿಗೆ ಸಾಮಾನ್ಯ ಔಟ್ ಸ್ವಿಂಗ್ ಬಾಲ್ ಅನ್ನು ಬೌಲ್ ಮಾಡಲು ಹೇಳಿದರು. ಅದರಂತೆ ಸಿರಾಜ್ ಬೌಲಿಂಗ್ ಮಾಡಿದರು, ಕ್ರಾಲೆ ಔಟ್ ಆದರು.
ಶುಭ್ಮನ್ ಗಿಲ್ ಸಿರಾಜ್ ಗೆ, ” ಕ್ಯಾಚ್ ಅಲ್ಲಿಗೆ ಹೋಗುತ್ತದೆ, ಅವನು ಮೊದಲು ಇದೇ ರೀತಿ ಔಟ್ ಆಗಿದ್ದಾನೆ. ನನ್ನನ್ನು ನಂಬಿ, ಇದು ಲೀಡ್ಸ್ ವಿಕೆಟ್ ಅಲ್ಲ, ಕಾಮನ್ ಔಟ್ಸ್ವಿಂಗ್ ಬೌಲಿಂಗ್ ಮಾಡಿ ” ಎಂದು ಹೇಳಿದರು. ಮೊಹಮ್ಮದ್ ಸಿರಾಜ್ ಶುಭ್ಮನ್ ಗಿಲ್ ಅವರ ಮಾತುಗಳನ್ನು ಕೇಳಿ ಆಫ್-ಸ್ಟಂಪ್ ಬಳಿಯಿಂದ ಔಟ್-ಸ್ವಿಂಗಿಂಗ್ ಚೆಂಡನ್ನು ಎಸೆದರು. ಕ್ರಾಲಿ ಡ್ರೈವ್ ಮಾಡಲು ಪ್ರಯತ್ನಿಸಿದರು. ಚೆಂಡು ಕ್ರಾಲಿಯ ಬ್ಯಾಟ್‌ನ ಅಂಚಿಗೆ ತಗುಲಿ ನೇರವಾಗಿ ಸಾಯಿ ಸುದರ್ಶನ್ ಅವರ ಕೈ ಸೇರಿತು.
ಶುಭ್ಮನ್ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಗಿಲ್ ಅವರ 161 ರನ್‌ಗಳ ಇನ್ನಿಂಗ್ಸ್‌ನ ಸಹಾಯದಿಂದ, ಭಾರತವು ಇಂಗ್ಲೆಂಡ್‌ಗೆ 608 ರನ್‌ಗಳ ಗುರಿಯನ್ನು ನೀಡಿತು. ನಾಲ್ಕನೇ ದಿನದ ಅಂತ್ಯಕ್ಕೆ, ಇಂಗ್ಲೆಂಡ್ 72 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ಇನ್ನೂ 536 ರನ್‌ಗಳ ಅಗತ್ಯವಿತ್ತು. ಇದೀಗ 5ನೇ ದಿನ ಭಾರತ ಪೋಪ್ (24) ಹಾಗೂ ಬ್ರೂಕ್ (23) ವಿಕೆಟ್‌ಗಳನ್ನು ಪಡೆಯಬೇಕಾಗಿದೆ. ಮೊದಲ ದಿನ ಕ್ರಾಲೆ (0), ಜೋ ರೂಟ್ (6) ಹಾಗೂ ಬೆನ್ ಡಕೆಟ್ (25) ವಿಕೆಟ್ ಪಡೆದಿತ್ತು.
ಭಾರತದ ಪರ ಆಕಾಶ್ ದೀಪ್ 4 ವಿಕೆಟ್ ಪಡೆದಿದ್ದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದಿದ್ದಾರೆ. ಭಾರತದ ಗೆಲುವಿಗೆ ಇನ್ನು 5 ವಿಕೆಟ್ ಅಗತ್ಯವಿದೆ
July 06, 2025 6:52 PM IST