IND vs ENG: 193 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ; ಲಾರ್ಡ್ಸ್ ಟೆಸ್ಟ್ ಗೆಲ್ಲಿಸುವ ಭಾರ ರಾಹುಲ್ ಹೆಗಲಿಗೆ! ಕೊನೆಯ ದಿನ ಮತ್ತಷ್ಟು ರೋಚಕ | India’s Fate in Rahul’s Hands: 3 Wickets Down in 193-Run Chase at Lord’s

IND vs ENG: 193 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ; ಲಾರ್ಡ್ಸ್ ಟೆಸ್ಟ್ ಗೆಲ್ಲಿಸುವ ಭಾರ ರಾಹುಲ್ ಹೆಗಲಿಗೆ! ಕೊನೆಯ ದಿನ ಮತ್ತಷ್ಟು ರೋಚಕ | India’s Fate in Rahul’s Hands: 3 Wickets Down in 193-Run Chase at Lord’s

Last Updated:

193 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿರುವ ಟೀಮ್ ಇಂಡಿಯಾ 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು ರನ್​ಗಳಿಸಿದೆ. 5ನೇ ದಿನ ಶುಭ್​ಮನ್ ಗಿಲ್ ಪಡೆ ಐತಿಹಾಸಿಕ ಪಂದ್ಯ ಗೆಲ್ಲಲು ಭಾರತಕ್ಕೆ ಇನ್ನೂ 135 ರನ್​ಗಳ ಅಗತ್ಯವಿದೆ.

ಕೆಎಲ್ ರಾಹುಲ್ಕೆಎಲ್ ರಾಹುಲ್
ಕೆಎಲ್ ರಾಹುಲ್

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ರೋಚಕ ಘಟ್ಟಕ್ಕೆ ತಲುಪಿದೆ. ನಾಲ್ಕನೇ ದಿನ ಒಟ್ಟು 13 ವಿಕೆಟ್ ಪತನವಾಗಿದ್ದು, ಕೊನೆಯ ದಿನ ಭಾರತ ತಂಡ ಪಂದ್ಯವನ್ನ ತನ್ನದಾಗಿಸಿಕೊಳ್ಳಲು 135 ರನ್​ಗಳಿಸಬೇಕಿದೆ. 193 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿರುವ ಟೀಮ್ ಇಂಡಿಯಾ 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 58 ರನ್​ಗಳಿಸಿದೆ. 5ನೇ ದಿನ ಶುಭ್​ಮನ್ ಗಿಲ್ ಪಡೆ ಐತಿಹಾಸಿಕ ಪಂದ್ಯ ಗೆಲ್ಲಲು ಇನ್ನೂ 135 ರನ್​ಗಳ ಅಗತ್ಯವಿದೆ. ಕೈಯಲ್ಲಿ ಇನ್ನೂ6 ವಿಕೆಟ್ ಬಾಕಿ ಉಳಿದಿದ್ದು, 5ನೇ ದಿನ ಪಂದ್ಯ ಮತ್ತಷ್ಟು ರೋಚಕವಾಗಿರಲಿದೆ. 

193 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೇ ಜೋಫ್ರಾ ಆರ್ಚರ್​ ಬೌಲಿಂಗ್​​ನಲ್ಲಿ ಕೀಪರ್ ಜೇಮಿ ಸ್ಮಿತ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕರುಣ್ ನಾಯರ್ ಹಾಗೂ ಕೆಎಲ್ ರಾಹುಲ್ 2ನೇ ವಿಕೆಟ್ ಜೊತೆಯಾಟದಲ್ಲಿ 36 ರನ್​ ಸೇರಿಸಿದರು. ಕರುಣ್ ನಾಯರ್ ಕೇವಲ 14 ರನ್​ಗಳಿಸಿ ಬೆನ್ ಕಾರ್ಸ್ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ಇದು ಅವರ ಸತತ 6ನೇ ಇನ್ನಿಂಗ್ಸ್ ವೈಫಲ್ಯವಾಗಿದೆ. ಇಡೀ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನಾಡಿ ಭಾರತದ ಪರ ಅರ್ಧಶತಕ ಸಿಡಿಸದ ಏಕೈಕ ಟಾಪ್ ಆರ್ಡರ್ ಬ್ಯಾಟರ್ ಎಂಬ ಕಳಪೆ ದಾಖಲೆಗೆ ಪಾತ್ರರಾದರು.

ಯಾಮಾರಿದ ಶುಭ್​ಮನ್ ಗಿಲ್

ಕರುಣ್ ನಾಯರ್ ನಂತರ ಬಂದ ನಾಯಕ ಶುಭ್​ಮನ್ ಗಿಲ್ ಕೇವಲ 9 ಎಸೆತಗಳಲ್ಲಿ 6 ರನ್​ ಸಿಡಿಸಿ ಕಾರ್ಸ್​ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. 3-4 ಓವರ್​ಗಳಿದ್ದರೂ ಗಿಲ್ ಬ್ಯಾಟಿಂಗ್ ಮಾಡಲು ಬಂದಿದ್ದು ಅಚ್ಚರಿಗೆ ಕಾರಣವಾಯಿತು. ನೈಟ್​ ವಾಚ್​ಮನ್ ಆಗಿ ಬಂದ ಆಕಾಶ್ ದೀಪ್ ಕೂಡ ವಿಕೆಟ್ ಉಳಿಸಿಕೊಳ್ಳಲು ವಿಫಲರಾದರು.  11 ಎಸೆತಗಳಲ್ಲಿ ಕೇವಲ 1 ರನ್​ ಸಿಡಿಸಿ ಬೆನ್​ ಸ್ಟೋಕ್ಸ್ ಬೌಲಿಂಗ್​​ನಲ್ಲಿ ಬೌಲ್ಡ್ ಇದ್ದಾರೆ.

ಸಿರಾಜ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್

3ನೇ ದಿನ 2 ರನ್​ಗಳಿಸಿದ್ದ ಇಂಗ್ಲೆಂಡ್ ತಂಡ 4ನೇ ದಿನ ಆಟ ಮುಂದುವರಿಸಿ 22 ರನ್​ಗಳಾಗುಷ್ಟರಲ್ಲಿ ಬೆನ್ ಡಕೆಟ್ ವಿಕೆಟ್ ಕಳೆದುಕೊಂಡಿತು.  ಮೊಹಮ್ಮದ್ ಸಿರಾಜ್ 12 ರನ್​ಗಳಿಸಿದ್ದ ಬೆನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್‌ಗೆ ಮೊದಲ ಹೊಡೆತ ನೀಡಿದರು.  3ನೇ ಕ್ರಮಾಂಕದಲ್ಲಿ ಬಂದ ಒಲ್ಲಿ ಪೋಪ್ ಕೂಡ ಕೇವಲ 4 ರನ್​ಗಳಿಸಿ  ಸಿರಾಜ್ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು.

ನಿತೀಶ್ ರೆಡ್ಡಿ ಜ್ಯಾಕ್ ಕ್ರಾಲಿಯನ್ನು ಪೆವಿಲಿಯನ್‌ಗೆ ಕಳುಹಿಸಿದರು. ಕ್ರಾಲೆ 22 ರನ್ ಗಳಿಸಿದರು. ಹ್ಯಾರಿ ಬ್ರೂಕ್ ಅವರನ್ನು ಆಕಾಶ್‌ದೀಪ್  ಕ್ಲೀನ್ ಬೌಲ್ಡ್ ಮಾಡಿದರು. ನಂತರ ಬಂದ ಸ್ಫೋಟಕ ಬ್ಯಾಟರ್​ ಬ್ರೂಕ್ 19 ಎಸೆತಗಳಲ್ಲಿ 23 ರನ್ ಗಳಿಸಿದರು.  ಈ ಹಂತದಲ್ಲಿ ಒಂದಾದ ರೂಟ್-ಬೆನ್ ಸ್ಟೋಕ್ಸ್  128 ಎಸೆತಗಳಲ್ಲಿ 67 ರನ್ ಸೇರಿಸಿದರು. ಇದು ಇಡೀ ಇನ್ನಿಂಗ್ಸ್​ನಲ್ಲಿ ಗರಿಷ್ಠ ಜೊತೆಯಾಟವಾಯಿತು.  ಈ ಹಂತದಲ್ಲಿ ಬೌಲಿಂಗ್ ಇಳಿದ ವಾಷಿಂಗ್ಟನ್ ಸುಂದರ್ ರೂಟ್ ವಿಕೆಟ್ ಪಡೆದು ಭಾರತಕ್ಕೆ ಭರ್ಜರಿ ಬ್ರೇಕ್ ನೀಡಿದರು. ರೂಟ್ 96 ಎಸೆತಗಳಲ್ಲಿ  1 ಸಿಕ್ಸರ್ ಸಹಿತ 40 ರನ್​ಗಳಿಸಿದರು.

ಇಂಗ್ಲೆಂಡ್ ಪತನಕ್ಕೆ ಕಾರಣರಾದ ಸುಂದರ್-ಬುಮ್ರಾ

ರೂಟ್ ವಿಕೆಟ್ ಬೀಳುತ್ತಿದ್ದಂತೆ ಇಂಗ್ಲೆಂಡ್ ಪತನ ಆರಂಭವಾಯಿತು. 154ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ದಿಢೀರ್ ಕುಸಿತ ಕಂಡು 192ಕ್ಕೆ ಆಲೌಟ್ ಆಯಿತು.  ಕೇವಲ  38 ರನ್​ಗಳಾಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಇದರಲ್ಲಿ 4 ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾದರೆ, ಬುಮ್ರಾ 2 ವಿಕೆಟ್ ಪಡೆದರು.

ರೂಟ್ ಔಟ್ ಆದ ನಂತರ ಬಂದ ಜೇಮೀ ಸ್ಮಿತ್ ಕೂಡ ಸುಂದರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸ್ಮಿತ್ 14 ಎಸೆತಗಳಲ್ಲಿ 8 ರನ್ ಗಳಿಸಿದರು. ಬೆನ್ ಸ್ಟೋಕ್ಸ್ 96 ಎಸೆತಗಳಲ್ಲಿ 33 ರನ್ ಗಳಿಸಿ  ಸುಂದರ್ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.  ಬ್ರೈಡನ್ ಕಾರ್ಸ್ ಕೇವಲ ಒಂದು ರನ್ ಹಾಗೂ 10 ರನ್​ಗಳಿಸಿದ್ದ ಕ್ರಿಸ್ ವೋಕ್ಸ್​ರನ್ನ ಬುಮ್ರಾ  ಬೌಲ್ಡ್  ಮಾಡಿ ಪೆವಿಲಿಯನ್​​ ಸೇರಿಸಿದರು.   ವಾಷಿಂಗ್ಟನ್ ಸುಂದರ್ ಕೊನೆಯ 11ನೇ ಬ್ಯಾಟರ್ ಶೋಯಿಬ್ ಬಶೀರ್ (2) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಂಗ್ಲೆಂಡ್‌ನ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಜೋಫ್ರಾ 5 ರನ್ ಗಳಿಸಿ ಅಜೇಯರಾಗಿ ಮರಳಿದರು.

ಭಾರತದ ಪರ ವಾಸಿಂಗ್ಟನ್ ಸುಂದರ್ 22 ರನ್​ ನೀಡಿ 4 ವಿಕೆಟ್ ಪಡೆದು ಟಾಪ್ ಬೌಲರ್ ಆದರೆ, ಸಿರಾಜ್ 31ಕ್ಕೆ2, ಬುಮ್ರಾ 38ಕ್ಕೆ1, ನಿತೀಶ್ ಕುಮಾರ್ ರೆಡ್ಡಿ 20ಕ್ಕೆ1, ಆಕಾಶ್ ದೀಪ್ 30ಕ್ಕೆ1 ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನ 62 ಓವರ್​ಗಳಲ್ಲಿ ಆಲೌಟ್ ಮಾಡಲು ನೆರವಾದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs ENG: 193 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ; ಲಾರ್ಡ್ಸ್ ಟೆಸ್ಟ್ ಗೆಲ್ಲಿಸುವ ಭಾರ ರಾಹುಲ್ ಹೆಗಲಿಗೆ! ಕೊನೆಯ ದಿನ ಮತ್ತಷ್ಟು ರೋಚಕ