Last Updated:
ಮೊದಲ ಇನ್ನಿಂಗ್ಸ್ 180 ರನ್ಗಳ ಮುನ್ನಡೆ ಸೇರಿ ಇಂಗ್ಲೆಂಡ್ಗೆ ಗೆಲ್ಲಲು 608 ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ. ಈ ಮೈದಾನದಲ್ಲಿ 378 ರನ್ಗಳೇ ಅತ್ಯಂತ ಯಶಸ್ವಿ ಚೇಸ್ ಆಗಿದೆ. ಹಾಗಾಗಿ ಈ ಮೊತ್ತವನ್ನ ಚೇಸ್ ಮಾಡುವುದು ಇಂಗ್ಲೆಂಡ್ ಕಷ್ಟಸಾಧ್ಯವಾಗಿರುವುದರಿಂದ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬಹುದು.
ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಭಾರತ ತಂಡ ನಾಯಕ ಶುಭ್ಮನ್ ಗಿಲ್ ಶತಕ ಹಾಗೂ ರವೀಂದ್ರ ಜಡೇಜಾ, ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರ ಅರ್ಧಶತಕಗಳ ನೆರವಿನಿಂದ 2ನೇ ಇನ್ನಿಂಗ್ಸ್ನಲ್ಲಿ 427 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿದೆ. ಮೊದಲ ಇನ್ನಿಂಗ್ಸ್ 180 ರನ್ಗಳ ಮುನ್ನಡೆ ಸೇರಿ ಇಂಗ್ಲೆಂಡ್ಗೆ ಗೆಲ್ಲಲು 608 ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ. ಈ ಮೈದಾನದಲ್ಲಿ 378 ರನ್ಗಳೇ ಅತ್ಯಂತ ಯಶಸ್ವಿ ಚೇಸ್ ಆಗಿದೆ. ಹಾಗಾಗಿ ಈ ಮೊತ್ತವನ್ನ ಚೇಸ್ ಮಾಡುವುದು ಇಂಗ್ಲೆಂಡ್ ಕಷ್ಟಸಾಧ್ಯವಾಗಿರುವುದರಿಂದ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಇತ್ತ ಭಾರತ ಇಂಗ್ಲೆಂಡ್ನ ಎಲ್ಲಾ 10 ವಿಕೆಟ್ ಪಡೆದು ಐತಿಹಾಸಿಕ ಗೆಲುವು ಸಾಧಿಸುವುದಕ್ಕೆ ಎದುರು ನೋಡುತ್ತಿದೆ.
ಮೂರನೇ ದಿನದ 64ಕ್ಕೆ1 ಸ್ಕೋರ್ನೊಂದಿಗೆ ನಾಲ್ಕನೇ ದಿನ ಆರಂಭಿಸಿದ ಟೀಮ್ ಇಂಡಿಯಾ 96 ರನ್ಗಳಾಗುವಷ್ಟರಲ್ಲಿ ಕರುಣ್ (26) ನಾಯರ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ 84 ಎಸೆತಗಳಲ್ಲಿ 55 ರನ್ ಸಿಡಿಸಿ ಔಟಾದರು. ನಂತರ ಬಂದ ರಿಷಭ್ ಪಂತ್ ಟಿ20 ಮಾದರಿಯಂತೆ ಬ್ಯಾಟಿಂಗ್ ಮಾಡಿ ಕೇವಲ 58 ಎಸೆಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳೊಂದಿಗೆ 65 ರನ್ ಸಿಡಿಸಿ ಮತ್ತೆ ಬಶೀರ್ಗೆ ವಿಕೆಟ್ ಒಪ್ಪಿಸಿದರು.
ನಂತರ ಒಂದಾದ ರವೀಂದ್ರ ಜಡೇಜಾ ಮತ್ತು ಶುಭ್ಮನ್ ಗಿಲ್ 5ನೇ ವಿಕೆಟ್ ಜೊತೆಯಾಟದಲ್ಲಿ 175 ರನ್ಗಳ ಜೊತೆಯಾಟ ನಡೆಸಿದರು. ಶುಭ್ಮನ್ ಗಿಲ್ 2ನೇ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದರು. 162 ಎಸೆತಗಳನ್ನ ಎದುರಿಸಿದ ಶುಭ್ಮನ್ ಗಿಲ್ 13 ಬೌಂಡರಿ, 8 ಸಿಕ್ಸರ್ಗಳ ಸಹಿತ 161 ರನ್ಗಳಿಸಿದರು. ಒಟ್ಟಾರೆ ಭಾರತ ತಂಡ 83 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 427 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು.
July 05, 2025 9:37 PM IST
IND vs ENG: 2ನೇ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದ ಗಿಲ್! 427ಕ್ಕೆ ಭಾರತ ಡಿಕ್ಲೇರ್; ಇಂಗ್ಲೆಂಡ್ಗೆ 608 ರನ್ಗಳ ಬೃಹತ್ ಗುರಿ ನೀಡಿದ ಟೀಮ್ ಇಂಡಿಯಾ