IND vs ENG: 2ನೇ ದಿನ ಮೆರೆದಾಡಿದ ಗಿಲ್, ಕೊನೆಯಲ್ಲಿ ಆಂಗ್ಲರಿಗೆ ಶಾಕ್ ಕೊಟ್ಟ ಭಾರತೀಯ ಬೌಲರ್ಸ್! ಟೀಮ್ ಇಂಡಿಯಾಗೆ ಭಾರೀ ಮುನ್ನಡೆ | India vs England 2nd Test Day 2 Brook and Root fight back after England to 77/3 at stumps

IND vs ENG: 2ನೇ ದಿನ ಮೆರೆದಾಡಿದ ಗಿಲ್, ಕೊನೆಯಲ್ಲಿ ಆಂಗ್ಲರಿಗೆ ಶಾಕ್ ಕೊಟ್ಟ ಭಾರತೀಯ ಬೌಲರ್ಸ್! ಟೀಮ್ ಇಂಡಿಯಾಗೆ ಭಾರೀ ಮುನ್ನಡೆ | India vs England 2nd Test Day 2 Brook and Root fight back after England to 77/3 at stumps

Last Updated:

587 ರನ್​ಗಳನ್ನ ಹಿಂಬಾಲಿಸುತ್ತಿರುವ ಅತಿಥೇಯ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿದೆ. ತಂಡದ ಮೊತ್ತ 25 ರನ್ ಆಗುವಷ್ಟರಲ್ಲಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಬೆನ್ ಡಕೆಟ್ ಹಾಗೂ ಓಲಿ ಪೋಪ್ ಇಂದು ಖಾತೆಯನ್ನೇ ತೆರೆಯದೇ ಆಕಾಶ್ ದೀಪ್ ಬೌಲಿಂಗ್​​ನಲ್ಲಿ 2 ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ಔಟ್ ಆದರು

ಟೀಮ್ ಇಂಡಿಯಾಟೀಮ್ ಇಂಡಿಯಾ
ಟೀಮ್ ಇಂಡಿಯಾ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ ನ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುರುವಾರ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. 2ನೇ ದಿನ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಟೀಮ್ ಇಂಡಿಯಾ, ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 587 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ. ನಾಯಕ ಶುಭ್​ಮನ್ ಗಿಲ್ ಭಾರತ ಪರ ಅದ್ಭುತ ಪ್ರದರ್ಶನ ನೀಡಿ 269 ರನ್‌ಗಳ ದಾಖಲೆ ಇನ್ನಿಂಗ್ಸ್ ಆಡಿದರು. ಇದು ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬ್ಯಾಟರ್ ಒಬ್ಬನಿಂದ ಬಂದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ.

ಗುರುವಾರ ಭಾರತ ತಂಡ 310/5 ಸ್ಕೋರ್‌ನೊಂದಿಗೆ 2ನೇ ದಿನದ ಆಟ ಆರಂಭಿಸಿತು. ಗಿಲ್ 114 ಮತ್ತು ಜಡೇಜಾ 41 ರನ್‌ಗಳೊಂದಿಗೆ ತಮ್ಮ ಇನ್ನಿಂಗ್ಸ್ ಮುಂದುವರಿಸಿದರು. ಜಡೇಜಾ ಇಂದು 137 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 89 ರನ್​ಗಳಿಸಿ ಔಟ್ ಆಗುವ ಮೂಲಕ ಕೇವಲ 13 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡರು. ಆದರೆ ಅವರು ನಾಯಕ ಗಿಲ್​ ಜೊತೆಗೂಡಿ 203 ರನ್​ಗಳ ಜೊತೆಯಾಟ ನಡೆಸಿದರು. ಇದು ಭಾರತ ಬೃಹತ್ ಇನ್ನಿಂಗ್ಸ್ಗೆ ಕಾರಣರಾದರು.

ಜಡೇಜಾ ಔಟ್ ಆದ ಬಳಿಕವೂ ಗಿಲ್ ತಮ್ಮ ಸಿಡಿಸಲಬ್ಬರದ ಆಟವನ್ನು ಮುಂದುವರಿಸಿದರು. 7ನೇ ವಿಕೆಟ್ ಜೊತೆಯಾಟದಲ್ಲಿ ವಾಸಿಂಗ್ಟನ್ ಸುಂದರ್ ಜೊತೆಗೆ 144 ರನ್​ಗಳನ್ನ ಭರ್ಜರಿ ಜೊತೆಯಾಟ ನೀಡಿದರು. ವಾಸಿಂಗ್ಟನ್ ಸುಂದರ್ 103 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 42 ರನ್​ಗಳಿಸಿ ಜೋ ರೂಟ್​ಗೆ ವಿಕೆಟ್ ಒಪ್ಪಿಸಿದರು. 200 ರನ್​ಗಳ ಗಡಿ ದಾಟಿದ ತ್ರಿಶತಕ ಸಿಡಿಸುವ ಮನೋಬಲದಲ್ಲಿ ಬ್ಯಾಟಿಂಗ್ ಮಾಡಿದರಿ. 311 ಎಸೆತಗಳಿಗೆ ದ್ವಿಶತಕ ಸಿಡಿಸಿದ ಗಿಲ್, ನಂತರ 86 ಎಸೆತಗಳಲ್ಲಿ 69 ರನ್​ಗಳಿಸಿದರು. ಆದರೆ 269 ರನ್​ಗಳಿಸಿದ್ದ ವೇಳೆ ಜೋಶ್ ಟಂಗ್ ಬೌಲಿಂಗ್​​​ನಲ್ಲಿ ಕ್ರಾಲೆಗೆ ಕ್ಯಾಚ್ ನೀಡಿ ಔಟ್ ಆದರು.

ನಂತರ ಆಕಾಶ್ ದೀಪ್ 6, ಮೊಹಮ್ಮದ್ ಸಿರಾಜ್ 8 ರನ್​ಗಳಿಸಿ ಔಟ್ ಆಗುವ ಮೂಲಕ ಭಾರತದ ಇನ್ನಿಂಗ್ಸ್​ಗೆ ತೆರೆಬಿದ್ದಿತು. ಮೊದಲ ದಿನ ಯಶಸ್ವಿ ಜೈಸ್ವಾಲ್ 107 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 87 ರನ್, ಕೆಎಲ್ ರಾಹುಲ್ 2, ಕರುಣ್ ನಾಯರ್ 31, ರಿಷಭ್ ಪಂತ್ 25, ನಿತೀಶ್ ಕುಮಾರ್ 1 ರನ್​ಗಳಿಸಿದರು.

ಇಂಗ್ಲೆಂಡ್ ಪರ ಶೋಯಬ್ ಬಶೀರ್ 167ಕ್ಕೆ3, ಜೋಶ್ ಟಂಗ್ 119ಕ್ಕೆ2, ಕ್ರಿಸ್ ವೋಕ್ಸ್ 81ಕ್ಕೆ2 ಬೆನ್ ಸ್ಟೋಕ್ಸ್,ಬ್ರೈಡನ್ ಕಾರ್ಸ್ ಹಾಗೂ ಜೋ ರೂಟ್​ ತಲಾ 1 ವಿಕೆಟ್ ಪಡೆದು ಮಿಂಚಿದರು.

ಇಂಗ್ಲೆಂಡ್​ಗೆ ಆರಂಭಿಕ ಆಘಾತ

587 ರನ್​ಗಳನ್ನ ಹಿಂಬಾಲಿಸುತ್ತಿರುವ ಅತಿಥೇಯ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿದೆ. ತಂಡದ ಮೊತ್ತ 25 ರನ್ ಆಗುವಷ್ಟರಲ್ಲಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಬೆನ್ ಡಕೆಟ್ ಹಾಗೂ ಓಲಿ ಪೋಪ್ ಇಂದು ಖಾತೆಯನ್ನೇ ತೆರೆಯದೇ ಆಕಾಶ್ ದೀಪ್ ಬೌಲಿಂಗ್​​ನಲ್ಲಿ 2 ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ಔಟ್ ಆದರು. 30 ಎಸೆತಗಳಲ್ಲಿ 3 ಬೌಂಡರಿ ಸಹಿತ 19 ರನ್​ಗಳಿಸಿದ್ದ ಜಾಕ್ ಕ್ರಾಲೆ ಮೊಹಮ್ಮದ್ ಸಿರಾಜ್ ಬೌಲಿಂಗ್​​ನಲ್ಲಿ ಕರುಣ್ ನಾಯರ್​ಗೆ ಕ್ಯಾಚ್​ ನೀಡಿ ಔಟ್ ಆದರು. ಪ್ರಸ್ತುತ ಅನುಭವಿ ಜೋ ರೂಟ್ ಅಜೇಯ 18, ಹ್ಯಾರಿ ಬ್ರೂಕ್ ಅಜೇಯ 30 ರನ್​ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.