IND vs ENG: 5 ವಿಕೆಟ್ ಪಡೆದು ಮಿಂಚಿದ ಜಸ್ಪ್ರೀತ್ ಬುಮ್ರಾ! ಇಂಗ್ಲೆಂಡ್ 465ಕ್ಕೆ ಆಲೌಟ್ | Bumrah Brilliance India Leads by Just 6 Runs After England Bowled Out for 465

IND vs ENG: 5 ವಿಕೆಟ್ ಪಡೆದು ಮಿಂಚಿದ ಜಸ್ಪ್ರೀತ್ ಬುಮ್ರಾ! ಇಂಗ್ಲೆಂಡ್ 465ಕ್ಕೆ ಆಲೌಟ್ | Bumrah Brilliance India Leads by Just 6 Runs After England Bowled Out for 465

Last Updated:

ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ 465ಕ್ಕೆ ಆಲೌಟ್ ಆಗಿದೆ. ಭಾರತ 6 ರನ್ಗಳ ಮುನ್ನಡೆ ಸಾಧಿಸಿದೆ. ಈ ಇನ್ನಿಂಗ್ಸ್ನಲ್ಲಿ ಬುಮ್ರಾ 5 ವಿಕೆಟ್ ಪಡೆದರೆ, ಪ್ರಸಿಧ್ ಕೃಷ್ಣ 3 ಹಾಗೂ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ಪರ ಒಲಿ ಪೋಪ್ (106) ಶತಕ ಸಿಡಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಹ್ಯಾರಿ ಬ್ರೂಕ್ 99, ಜೇಮೀ ಸ್ಮಿತ್ 40, ಕ್ರಿಸ್ ವೋಕ್ಸ್ 38 ರನ್​ಗಳಿಸಿದರು.

ಟೀಮ್ ಇಂಡಿಯಾಟೀಮ್ ಇಂಡಿಯಾ
ಟೀಮ್ ಇಂಡಿಯಾ

ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ 465ಕ್ಕೆ ಆಲೌಟ್ ಆಗಿದೆ. ಭಾರತ 6 ರನ್ಗಳ ಮುನ್ನಡೆ ಸಾಧಿಸಿದೆ. ಈ ಇನ್ನಿಂಗ್ಸ್ನಲ್ಲಿ ಬುಮ್ರಾ 5 ವಿಕೆಟ್ ಪಡೆದರೆ, ಪ್ರಸಿಧ್ ಕೃಷ್ಣ 3 ಹಾಗೂ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ಪರ ಒಲಿ ಪೋಪ್ (106) ಶತಕ ಸಿಡಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಹ್ಯಾರಿ ಬ್ರೂಕ್ 99, ಜೇಮೀ ಸ್ಮಿತ್ 40, ಕ್ರಿಸ್ ವೋಕ್ಸ್ 38 ರನ್​ಗಳಿಸಿದರು.

ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಆಂಗ್ಲರು

2ನೇ ದಿನ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 209 ರನ್​ಗಳಿಸಿತ್ತು. ಒಲಿ ಪೋಪ್ 131 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರೆ, ಹ್ಯಾರಿ ಬ್ರೂಕ್ 12 ಎಸೆತಗಳನ್ನು ಖಾತೆ ಇನ್ನೂ ತೆರೆದಿರಲಿಲ್ಲ. 3ನೇ ದಿನ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಇಂದು ಕೇವಲ 19 ರನ್​ಗಳಾಗುವಷ್ಟರಲ್ಲಿ ಪೋಪ್ ವಿಕೆಟ್ ಕಳೆದುಕೊಂಡಿತು. ನಂತರ ಹ್ಯಾರಿ ಬ್ರೂಕ್ ಜೊತೆ ಸೇರಿದ ನಾಯಕ ಬೆನ್ ಸ್ಟೋಕ್ಸ್ (20) ಜೊತೆ ಸೇರಿ 51 ರನ್​ಗಳ ಜೊತೆಯಾಟ ನೀಡಿದರು. ಬೆನ್​ ಸ್ಟೋಕ್ಸ್ ಸಿರಾಜ್ ಬೌಲಿಂಗ್​​ನಲ್ಲಿ ಪಂತ್​ಗೆ ಕ್ಯಾಚ್ ನೀಡಿ ಔಟ್ ಆದರು.

ಹ್ಯಾರಿ ಬ್ರೂಕ್ ಶತಕ ಮಿಸ್

ನಂತರ ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ 6ನೇ ವಿಕೆಟ್​ 73 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಜೇಮಿ ಸ್ಮಿತ್ 52 ಎಸೆತಗಳಲ್ಲಿ 40 ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​​​ನಲ್ಲಿ ಸಾಯಿ ಸುದರ್ಶನ್​ಗೆ ಕ್ಯಾಚ್ ನೀಡಿದರು.  ಹ್ಯಾರಿ ಬ್ರೂಕ್ 112 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್​ಗಳ ಸಹಿತ 99 ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​ನಲ್ಲಿ ಶಾರ್ದೂಲ್ ಠಾಕೂರ್​ಗೆ ಕ್ಯಾಚ್ ನೀಡಿ ಔಟ್ ಆದರು. ಅವರು ಔಟಾಗುವ ಮುನ್ನ ವೋಕ್ಸ್ ಜೊತೆಗೆ 49ರನ್​ಗಳ ಜೊತೆಯಾಟ ನೀಡಿದ್ದರು.

ಕೊನೆಯಲ್ಲಿ ಅಬ್ಬರಿಸಿದ ವೋಕ್ಸ್

ಬ್ರೂಕ್ ಔಟಾದಾಗ ಇಂಗ್ಲೆಂಡ್ ತಂಡ 349ಕ್ಕೆ7 ವಿಕೆಟ್ ಕಳೆದುಕೊಂಡುತ್ತು, 10-20 ರನ್​ಗಳಿಸುವಷ್ಟರಲ್ಲಿ ಆಲೌಟ್  ಎಂದೇ ಭಾವಿಸಲಾಗಿತ್ತು. ಆದರೆ 8ನೇ ವಿಕೆಟ್​ಗೆ ಒಂದಾದ  ಕ್ರಿಸ್ ವೋಕ್ಸ್ (38) ಮತ್ತು ಬೆನ್ ಕಾರ್ಸ್​ (22) 55 ರನ್​ ಸೇರಿಸಿದರು.  ಕಾರ್ಸ್​​ರನ್ನ ಸಿರಾಜ್ ಪೆವಿಲಿಯನ್​ಗಟ್ಟಿದರೆ, ಕೊನೆಯಲ್ಲಿ ಬುಮ್ರಾ ವೋಕ್ಸ್ ಹಾಗೂ ಜೋಶ್ ಟಂಗ್​ರನ್ನ ಕ್ಲೀನ್ ಬೌಲ್ಡ್ ಮಾಡಿದರು.

ಭಾರತದ ಪರ ಜಸ್ಪ್ರೀತ್ ಬುಮ್ರಾ 83ಕ್ಕೆ 5 ವಿಕೆಟ್ ಪಡೆದರೆ, ಪ್ರಸಿಧ್ ಕೃಷ್ಣ 128ಕ್ಕೆ 3, ಸಿರಾಜ್ 122ಕ್ಕೆ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 471 ರನ್ ಗಳಿಸಿತ್ತು. ನಾಯಕ ಶುಭ್ಮ​ನ್ ಗಿಲ್ 227 ಎಸೆತಗಳಲ್ಲಿ 19 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 147 ರನ್ ಗಳಿಸಿದರು. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ 178 ಎಸೆತಗಳಲ್ಲಿ 134 ರನ್ ಗಳಿಸಿದರು. ಪಂತ್ ತಮ್ಮ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್ಗಳನ್ನು ಬಾರಿಸಿದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 159 ಎಸೆತಗಳಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 101 ರನ್ ಗಳಿಸಿದರು. ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ ಹಾಗೂ ಜೋಶ್ ಟಾಂಗ್ ತಲಾ 4 ವಿಕೆಟ್ ಪಡೆದರು.