ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಮುನೀಬಾ ಅಲಿ, ಸದಾಫ್ ಶಮಾಸ್, ಸಿದ್ರಾ ಅಮೀನ್, ರಮೀನ್ ಶಮೀಮ್, ಅಲಿಯಾ ರಿಯಾಜ್, ಸಿದ್ರಾ ನವಾಜ್ (ವಿಕೀ), ಫಾತಿಮಾ ಸನಾ (ನಾಯಕಿ), ನತಾಲಿಯಾ ಪರ್ವೇಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.
ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೀ), ಸ್ನೇಹ ರಾಣಾ, ಕ್ರಾಂತಿ ಗೌಡ್, ನಲ್ಲಪುರೆಡ್ಡಿ ಚರಣಿ, ರೇಣುಕಾ ಸಿಂಗ್ ಠಾಕೂರ್.
ಭಾರತ ಮತ್ತು ಪಾಕಿಸ್ತಾನ ಇಲ್ಲಿಯವರೆಗೆ 11 ಬಾರಿ ODI ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ, ಮತ್ತು ಈ ಎಲ್ಲಾ ಸಂದರ್ಭಗಳಲ್ಲಿ, ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎಲ್ಲಾ ಪಂದ್ಯಗಳಲ್ಲಿ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಇಂದು, ಭಾರತ ಮತ್ತು ಪಾಕಿಸ್ತಾನ ನಡುವಿನ 12 ನೇ ಪಂದ್ಯ ನಡೆಯಲಿದ್ದು, ಹರ್ಮನ್ಪ್ರೀತ್ ಕೌರ್ ಮತ್ತು ತಂಡವು ಈ ಅಜೇಯ ದಾಖಲೆಯನ್ನು ಕಾಯ್ದುಕೊಳ್ಳಲು ಮತ್ತು ಪಾಕಿಸ್ತಾನ ವಿರುದ್ಧ ತಮ್ಮ 12 ನೇ ಗೆಲುವು ದಾಖಲಿಸಲು ಬಯಸುತ್ತದೆ.
2025ರ ಏಷ್ಯಾ ಕಪ್ ವೇಳೆ ಕಳೆದ ಮೂರು ಮುಖಾಮುಖಿಗಳಲ್ಲಿ (ಸೆಪ್ಟೆಂಬರ್ 14, 21 ಮತ್ತು 28), ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಬಗ್ಗುಬಡಿದಿತ್ತು. ಇದೀಗ ಹರ್ಮನ್ಪ್ರೀತ್ ಕೌರ್ ಬಳಗದ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತೊಂದು ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯವನ್ನ ವೀಕ್ಷಿಸಲಿದ್ದಾರೆ.
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದ ಹವಾಮಾನ ವರದಿಯ ಪ್ರಕಾರ, ಬೆಳಿಗ್ಗೆ ಮಳೆಯಾಗುವ ಸಾಧ್ಯತೆಗಳು ಹೆಚ್ಚಿದೆ ಎನ್ನಲಾಗಿತ್ತು. ಒಂದು ವೇಳೆ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಸಂಜೆ 5 ಗಂಟೆಯವರೆಗೆ ಮಳೆ ಬೀಳುವ ಸಾಧ್ಯತೆ ಶೇ. 20 ರಷ್ಟಿದ್ದು, ನಂತರ ಸಂಜೆ 6 ಗಂಟೆಗೆ 16%, ರಾತ್ರಿ 7 ಮತ್ತು 8 ಗಂಟೆಗೆ 7%, ರಾತ್ರಿ 9 ಗಂಟೆಗೆ 6% ಮತ್ತು ರಾತ್ರಿ 10 ಮತ್ತು 11 ಗಂಟೆಗೆ 5% ಕ್ಕೆ ಇಳಿಯುತ್ತದೆ.
October 05, 2025 2:48 PM IST
IND vs PAK: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ! ಮಹಿಳಾ ವಿಶ್ವಕಪ್ನಲ್ಲೂ ಮುಂದುವರಿದ ‘ನೋ ಹ್ಯಾಂಡ್ ಶೇಕ್’ ಸಂಪ್ರದಾಯ!