IND vs PAK: ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಭಾರತ! ಬುಮ್ರಾ ಕಮ್​ಬ್ಯಾಕ್, ಪ್ಲೇಯಿಂಗ್ XI ಇಲ್ಲಿದೆ | India vs Pakistan Live Score: Suryakumar Yadav Wins Toss, Opts to Bowl First in Asia Cup 2025 Super 4 Match | ಕ್ರೀಡೆ

IND vs PAK: ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಭಾರತ! ಬುಮ್ರಾ ಕಮ್​ಬ್ಯಾಕ್, ಪ್ಲೇಯಿಂಗ್ XI ಇಲ್ಲಿದೆ | India vs Pakistan Live Score: Suryakumar Yadav Wins Toss, Opts to Bowl First in Asia Cup 2025 Super 4 Match | ಕ್ರೀಡೆ

Last Updated:

ಏಷ್ಯಾಕಪ್​ನ ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ vs ಪಾಕಿಸ್ತಾನಭಾರತ vs ಪಾಕಿಸ್ತಾನ
ಭಾರತ vs ಪಾಕಿಸ್ತಾನ

ಏಷ್ಯಾ ಕಪ್ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸತತ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಲೀಗ್ ಹಂತದಲ್ಲಿ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಭಾರತದ ವಿರುದ್ಧ ಒಂದು ಪಂದ್ಯವನ್ನು ಸೋತಿದೆ. ಉಳಿದ ಎರಡಲ್ಲಿ ಗೆದ್ದ ಸೂಪರ್ 4 ಪ್ರವೇಶಿಸಿದೆ.

ಟೀಮ್ ಇಂಡಿಯಾ ಲೀಗ್​ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೊದಲೆರಡು ಪಂದ್ಯಗಳಲ್ಲಿ ಚೇಸಿಂಗ್ ಮಾಡಿ ಸುಲಭವಾಗಿ ಗೆಲುವು ಸಾಧಿಸಿದೆ. ಇದೇ ಕಾರಣದಿಂದ ಟಾಸ್ ಗೆದ್ದ ತಕ್ಷಣ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡುವುದಕ್ಕಿಂತ ಚೇಸಿಂಗ್ ಮಾಡುವುದು ಸುಲಭವಾಗಿದೆ. ಬಹುತೇಕ ತಂಡಗಳು ಟಾಸ್ ಗೆದ್ದ ತಕ್ಷಣ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತವೆ.

ಚೇಸಿಂಗ್ ಏಕೆ ಬೆಸ್ಟ್? 

ದುಬೈ ಸ್ಟೇಡಿಯಂನ ಟಿ20 ದಾಖಲೆಗಳು ಸಹ ಚೇಸ್‌ಗೆ ಸ್ವಲ್ಪ ಒಲವು ತೋರುತ್ತವೆ.  ಇಲ್ಲಿ ನಡೆದಿರುವ 99 ಟಿ20 ಪಂದ್ಯಗಳಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ತಂಡಗಳು 48 (48.48%), ಚೇಸಿಂಗ್ ಮಾಡಿದ ತಂಡಗಳು 51 (51.52%) ಪಂದ್ಯಗಳನ್ನ ಗೆದ್ದಿವೆ.  ಟಾಸ್ ಗೆದ್ದ ತಂಡಗಳು 57 ಪಂದ್ಯಗಳಲ್ಲಿ ಗೆಲುವು (57.58%) ಪಡೆದಿವೆ. ಈ ಮೈದಾದಲ್ಲಿ ಗರಿಷ್ಠ ಸ್ಕೋರ್ 212/2, ಅತ್ಯಂತ ಕಡಿಮೆ 55 ರನ್ ಆಗಿದೆ. ಮೊದಲ ಬ್ಯಾಟಿಂಗ್ ಸರಾಸರಿ ಸ್ಕೋರ್ 145 ರನ್, ಈ ದಾಖಲೆಗಳು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆಯನ್ನು ಸೂಚಿಸುತ್ತವೆ.

ಪಾಕ್ ತಂಡದಲ್ಲೂ ಬದಲಾವಣೆ

ಪಾಕಿಸ್ತಾನ ತಂಡದಲ್ಲಿ ಎರಡೂ ಬದಲಾವಣೆಗಳಾಗಿವೆ. ಯುಎಇ ವಿರುದ್ಧ ಕಣಕ್ಕಿಳಿದಿದ್ದ ಕುಶ್ದಿಲ್ ಶಾ ಹಾಗೂ ಹಸನ್ ನವಾಜ್​ ಬದಲಿಗೆ ಫಹೀಮ್ ಅಶ್ರಫ್ ಮತ್ತು ಹುಸೇನ್ ತಲಾತ್ ತಂಡಕ್ಕೆ ಸೇರಿಕೊಂಡಿದ್ದಾರೆ.

ಭಾರತ-ಪಾಕ್ ಮುಖಾಮುಖಿ

ಎರಡೂ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಇದುವರೆದ್ದು 14 ಪಂದ್ಯಗಳು ನಡೆದಿದ್ದು, ಭಾರತ 11 ಗೆಲುವುಗಳೊಂದಿಗೆ ಮುಂದಿದೆ. ಪಾಕಿಸ್ತಾನ ಕೇವಲ 3ರಲ್ಲಿ ಗೆಲುವು ಪಡೆದಿದೆ. ಅವುಗಳಲ್ಲಿ 2022 ಏಷ್ಯಾ ಕಪ್‌ನಲ್ಲಿ ಒಂದಾಗಿದೆ. ಕಳೆದ 5 ವರ್ಷಗಳಲ್ಲಿ (2020-2025) 6 ಪಂದ್ಯಗಳಲ್ಲಿ ಭಾರತ 4-2ರಿಂದ ಮುಂದಿದೆ.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಪಾಕಿಸ್ತಾನ (ಪ್ಲೇಯಿಂಗ್ XI): ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಸಲ್ಮಾನ್ ಅಘಾ(ನಾಯಕ), ಹುಸೇನ್ ತಲಾತ್, ಮೊಹಮ್ಮದ್ ಹ್ಯಾರಿಸ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್

ಭಾರತ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ