IND vs PAK: ಪಾಕಿಸ್ತಾನ ಬೌಲರ್​ಗಳನ್ನ ಧೂಳೀಪಟ ಮಾಡಿದ ಅಭಿಷೇಕ್! ಭಾರತಕ್ಕೆ 6 ವಿಕೆಟ್​ಗಳ ಭರ್ಜರಿ ಜಯ | Abhishek Sharma and Shubman Gill Storm India to 6-Wicket Victory Over Pakistan in Asia Cup 2025 | ಕ್ರೀಡೆ

IND vs PAK: ಪಾಕಿಸ್ತಾನ ಬೌಲರ್​ಗಳನ್ನ ಧೂಳೀಪಟ ಮಾಡಿದ ಅಭಿಷೇಕ್! ಭಾರತಕ್ಕೆ 6 ವಿಕೆಟ್​ಗಳ ಭರ್ಜರಿ ಜಯ | Abhishek Sharma and Shubman Gill Storm India to 6-Wicket Victory Over Pakistan in Asia Cup 2025 | ಕ್ರೀಡೆ

Last Updated:

ಅಭಿಷೇಕ್ ಶರ್ಮಾ ಹಾಗೂ ಶುಭ್​​ಮನ್ ಗಿಲ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಪಾಕಿಸ್ತಾನ ನೀಡಿದ್ದ 172 ರನ್​ಗಳ ಗುರಿಯನ್ನ 4 ವಿಕೆಟ್ ಕಳೆದುಕೊಂಡು ತಲುಪಿದೆ.

ಅಭಿಷೇಕ್ ಶರ್ಮಾ-ಶುಭ್​ಮನ್ ಗಿಲ್ಅಭಿಷೇಕ್ ಶರ್ಮಾ-ಶುಭ್​ಮನ್ ಗಿಲ್
ಅಭಿಷೇಕ್ ಶರ್ಮಾ-ಶುಭ್​ಮನ್ ಗಿಲ್

ಏಷ್ಯಾಕಪ್​ 2025ರ ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಭಾರತ ತಂಡ ಬದ್ಧ ಎದುರಾಳಿ ಪಾಕಿಸ್ತಾನವನ್ನ ಧೂಳೀಪಟ ಮಾಡಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 172 ರನ್​ಗಳ ಸವಾಲಿನ ಗುರಿಯನ್ನ  ಅಭಿಷೇಕ್ ಶರ್ಮಾ ಸಿಡಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ ಇನ್ನು 7 ಎಸೆತಗಳಿರುವಂತೆ 4 ವಿಕೆಟ್ ಕಳೆದುಕೊಂಡು  ಗೆಲುವು ಸಾಧಿಸಿತು. ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 72 ರನ್​ ಸಿಡಿಸಿದರೆ, ಅವರ ಆರಂಭಿಕ ಜೊತೆಗಾರ ಶುಭ್​ಮನ್ ಗಿಲ್ 47 ರನ್​ಗಳಿಸಿ ಭಾರತಕ್ಕೆ ಸುಲಭ ಗೆಲುವು ಸಿಗಲು ನೆರವಾದರು. ಭ

172 ರನ್​ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಅಮೋಘ ಆರಂಭ ಪಡೆದುಕೊಂಡಿತು. ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಇಬ್ಬರು ಮೊದಲ 10 ಓವರ್​ಗಳಲ್ಲಿ ಪಾಕಿಸ್ತಾನ ಬೌಲರ್​ಗಳನ್ನ ಧೂಳೀಪಟ ಮಾಡಿದರು. ಈ ಇಬ್ಬರು 59 ಎಸೆತಗಳಲ್ಲಿ 105 ರನ್​ಗಳ ಜೊತೆಯಾಟ ನೀಡಿದರು. ಗಿಲ್​ 28 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 47 ರನ್​ಗಳಿಸಿ ಫಹೀಮ್ ಅಶ್ರಫ್​ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ 3 ಎಸೆತಗಳನ್ನಾಡಿ ಖಾತೆ ತೆರೆಯದೇ ಹಾರಿಸ್ ರೌಫ್​ ಬೌಲಿಂಗ್​​ನಲ್ಲಿ ಅಬ್ರಾರ್ ಅಹ್ಮದ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಸೂರ್ಯ ಔಟ್ ಆದ 17 ರನ್​ಗಳ ಅಂತರದಲ್ಲಿ ಅಭಿಷೇಕ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್​ಗಳ ಸಹಿತ 74 ರನ್​ಗಳಿಸಿ ಅಬ್ರಾರ್​ಗೆ ವಿಕೆಟ್ ಒಪ್ಪಿಸಿದರು. ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಹೊಡೆಯಲು ಯತ್ನಿಸಿ ಕ್ಯಾಚ್ ಔಟ್ ಆದರು. ಅಭಿಷೇಕ್ ನಂತರ ಭಾರತ ರನ್​ಗಳಿಸುವ ವೇಗಕ್ಕೆ ಕಡಿವಾಣ ಬಿದ್ದಿತು. ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ 26 ಎಸೆತಗಳನ್ನಾಡಿ ಕೇವಲ 25 ರನ್​ಗಳಿಸಿದರು. ಸಂಜು 17 ಎಸೆತಗಳನ್ನಾಡಿ 1 ಬೌಂಡರಿಯೊಂದಿಗೆ ಕೇವಲ 13 ರನ್​ಗಳಿಸಿ ರೌಫ್ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.

ಆದರೆ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಮುರಿಯದ 5ನೇ ವಿಕೆಟ್​ಗೆ ಜೊತೆಯಾಟದಲ್ಲಿ 26 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ತಿಲಕ್ ವರ್ಮಾ 19 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್​ ಸಹಿತ ಅಜೇಯ 30 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.  ಹಾರ್ದಿಕ್ ಅಜೇಯ 7 ರನ್ಗಳಿಸಿದರು.

ಪಾಕಿಸ್ತಾನದ ಪರ ಹಾರಿಸ್ ರೌಫ್ 26ಕ್ಕೆ 2, ಅಬ್ರಾರ್ ಅಹ್ಮದ್ ಹಾಗೂ ಫಹೀಮ್ ಅಶ್ರಫ್ ತಲಾ 1 ವಿಕೆಟ್ ಪಡೆದರು.