IND vs PAK: ಪಾಕ್ ಸೋಲಿಗೆ ಈತನೇ ಹೊಣೆ; ಛೀಮಾರಿ ಹಾಕಿದ ವಾಸಿಮ್ ಆಕ್ರಮ್! / Wasim Akram has lashed out at fast bowler Harris Rauf who led to Pakistan defeat against India in Asia Cup 2025 final | ಕ್ರೀಡೆ

IND vs PAK: ಪಾಕ್ ಸೋಲಿಗೆ ಈತನೇ ಹೊಣೆ; ಛೀಮಾರಿ ಹಾಕಿದ ವಾಸಿಮ್ ಆಕ್ರಮ್! / Wasim Akram has lashed out at fast bowler Harris Rauf who led to Pakistan defeat against India in Asia Cup 2025 final | ಕ್ರೀಡೆ

Last Updated:

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೋಲಿಗೆ ಕಾರಣವಾದ ವೇಗದ ಬೌಲರ್ ವಿರುದ್ಧ ಮಾಜಿ ಕ್ರಿಕೆಟಿಗ್ ವಾಸಿಮ್ ಆಕ್ರಮ್ ಗರಂ ಆಗಿದ್ದಾರೆ.

 ವಾಸಿಮ್ ಆಕ್ರಮ್ ವಾಸಿಮ್ ಆಕ್ರಮ್
ವಾಸಿಮ್ ಆಕ್ರಮ್

ವಿಶ್ವ ಕ್ರಿಕೆಟ್​ನಲ್ಲಿ (Cricket) ಮತ್ತೊಮ್ಮೆ ಪಾಕಿಸ್ತಾನ ತಂಡ ಜೋಕರ್ ಆಗಿದೆ. ಭಾನುವಾರ ದುಬೈನಲ್ಲಿ ನಡೆದ ಏಷ್ಯಾಕಪ್ 2025 ರ ಫೈನಲ್ (Asia Cup Final) 2025 ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ (India vs Pakistan) 5 ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಇದರೊಂದಿಗೆ ಭಾರತ ತಂಡ 9ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ (Asia Cup Champion) ಪಟ್ಟಕ್ಕೇರಿತು. ಭಾರತ ಎದುರು ಬ್ಯಾಟಿಂಗ್​ನಲ್ಲಿ ಮಂಕಾಗಿದ್ದ ಪಾಕಿಸ್ತಾನ ಬೌಲಿಂಗ್​ನಲ್ಲಿ ಪ್ರಬಲ ಪೈಪೋಟಿ ನೀಡಿತು. ಆದರೆ, ಈ ಒಬ್ಬ ಬೌಲರ್ ಎಡವಟ್ಟಿನಿಂದ ಪಾಕಿಸ್ತಾನ ತಂಡ ಸೋಲನ್ನು ಎದುರಿಸಬೇಕಾಯಿತು.

ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ತಂಡಕ್ಕೆ ವಿಲನ್ ಅಗಿ ಕಾಣಿಸಿಕೊಂಡರು. ಸೂಪರ್ 4 ರ ಪಂದ್ಯದ ವೇಳೆ ಬೌಂಡರಿ ಲೈನ್‌ನಲ್ಲಿ ನಿಂತು ಫೈಟರ್ ಜೆಟ್ ಪತನದ ಸನ್ನೆ ಮಾಡಿ ಭಾರತವನ್ನು ಕೆಣಕಿದ ಹ್ಯಾರಿಸ್ ರೌಫ್ ಫೈನಲ್​ನಲ್ಲಿ ನಗೆಪಾಟಲಿಗೆ ಕಾರಣವಾದರು. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ಅಬ್ಬರಕ್ಕೆ ವೇಗಿ ಹ್ಯಾರಿಸ್ ರೌಫ್ ಧೂಳಿಪಟವಾದರು.

ಭಾರತ ವಿರುದ್ಧದ ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಹ್ಯಾರಿಸ್ ರೌಫ್ ದುಬಾರಿ ಬೌಲರ್ ಎನಿಸಿಕೊಂಡರು. ರೌಫ್ ಕೇವಲ 3.4 ಓವರ್‌ಗಳಲ್ಲಿ ಬರೋಬ್ಬರಿ 50 ರನ್‌ಗಳನ್ನು ಬಿಟ್ಟುಕೊಟ್ಟರು. ಈ ಸಮಯದಲ್ಲಿ, ಹ್ಯಾರಿಸ್ ರೌಫ್ ಅವರ ಬೌಲಿಂಗ್ ಎಕಾನಮಿ 13.60 ಆಗಿತ್ತು.

ವಾಸಿಮ್ ಆಕ್ರಮ್
ಹ್ಯಾರಿಸ್ ರೌಫ್ ವಿರುದ್ಧ ವಾಸಿಮ್ ಗರಂ

ದುರದೃಷ್ಟವಶಾತ್, ರೌಫ್ ಒಬ್ಬ ಬೌಲರ್ ಆಗಿ ರನ್ ಮೆಷಿನ್. ವಿಶೇಷವಾಗಿ ಭಾರತದ ವಿರುದ್ಧ ರೌಫ್ ರನ್ ಮಷಿನ್ ಆಗಿದ್ದಾರೆ. ಅವರನ್ನು ನಾನು ಮಾತ್ರವಲ್ಲ, ಇಡೀ ದೇಶವೇ ಟೀಕಿಸುತ್ತಿದೆ. ಅವರು ರೆಡ್-ಬಾಲ್ ಕ್ರಿಕೆಟ್ ಕೂಡ ಆಡುವುದಿಲ್ಲ. ಹೀಗಾಗ ಅವರ ಬೌಲಿಂಗ್ ಸುಧಾರಿಸುವುದಿಲ್ಲ. ಟೆಸ್ಟ್ ಕ್ರಿಕೆಟ್ ಆಡಲು ನಿರಾಕರಿಸುವ ಆಟಗಾರ ತಂಡದಲ್ಲಿ ಇರಲು ಇಷ್ಟವಿಲ್ಲ ಎಂದು ವಾಸಿಮ್ ಸಂದರ್ಶನವೊಂದರಲ್ಲಿ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ಬೌಲಿಂಗ್ ಮೇಲೆ ಹಿಡಿತವಿಲ್ಲ

ರೌಫ್ ಟೆಸ್ಟ್ ಕ್ರಿಕೆಟ್ ಆಡದ ಕಾರಣ ತಮ್ಮ ಬೌಲಿಂಗ್ ಮೇಲೆ ನಿಯಂತ್ರಣವಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದನ್ನು ಪರಿಹರಿಸಬೇಕಾಗಿದೆ. ನೀವು ನಿಮ್ಮ ಬೌಲಿಂಗ್ ಅನ್ನು ಸುಧಾರಿಸಲು ಬಯಸಿದರೆ, ನಿಮ್ಮ ರನ್-ಅಪ್ ಸಹ ಸುಗಮವಾಗಿರಬೇಕು. ರೌಫ್ ರನ್-ಅಪ್ ಅಷ್ಟು ಸುಗಮವಾಗಿಲ್ಲ. ನಾನು ವಕಾರ್ ಯೂನಿಸ್ ಅವರೊಂದಿಗೆ ಮಾತನಾಡುವಾಗ, ‘ಕಳೆದ ನಾಲ್ಕು ಅಥವಾ ಐದು ವರ್ಷಗಳಿಂದ ಆಡುತ್ತಿದ್ದರೂ ರೌಫ್ ತಮ್ಮ ರನ್-ಅಪ್ ಅನ್ನು ಏಕೆ ಸುಧಾರಿಸಿಲ್ಲ ಎಂದು ಕೇಳಿದೆ. ಅವರು ರೆಡ್ ಬಾಲ್ ಕ್ರಿಕೆಟ್ ಆಡುವುದಿಲ್ಲ ಎಂದು ಹೇಳಿದರು ಎಂಬ ವಿಷಯವನ್ನು ವಾಸಿಮ್ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನ ಪರ 50 ಏಕದಿನ ಮತ್ತು 94 ಟಿ20 ಪಂದ್ಯಗಳನ್ನು ಆಡಿರುವ ಹ್ಯಾರಿಸ್ ರೌಫ್ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ಆಡಿದ್ದಾರೆ. ಭಾರತ ವಿರುದ್ಧ ನಡೆದ ಪಂದ್ಯಗಳಲ್ಲಿ ರೌಫ್ ಕಳಪೆ ಪ್ರದರ್ಶನ ಮಾಡುತ್ತಿರುವ ಇದೇ ಮೊದಲಲ್ಲ. ಟಿ20 ವಿಶ್ವಕಪ್ 2022 ರಲ್ಲಿಯೂ ಭಾರತ ವಿರುದ್ಧ ಪಾಕಿಸ್ತಾನ ಸೋಲಿಗೆ ರೌಫ್ ಕಾರಣವಾಗಿದ್ದರು.