IND vs PAK: ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸುವವರು ಇವರೇ!; ಗವಾಸ್ಕರ್ ಭವಿಷ್ಯ, Sunil Gavaskar predicts which Team India player will score century against Pakistan in Asia Cup 2025 final | ಕ್ರೀಡೆ

IND vs PAK: ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸುವವರು ಇವರೇ!; ಗವಾಸ್ಕರ್ ಭವಿಷ್ಯ, Sunil Gavaskar predicts which Team India player will score century against Pakistan in Asia Cup 2025 final | ಕ್ರೀಡೆ

Last Updated:

ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಪರ ಶತಕ ಹೊಡೆಯಬಲ್ಲ ಸ್ಟಾರ್ ಬ್ಯಾಟರ್ ಹೆಸರನ್ನು ಮಾಜಿ ದಿಗ್ಗಜ ಬ್ಯಾಟರ್ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.

Sunil GavaskarSunil Gavaskar
Sunil Gavaskar

ಪಾಕಿಸ್ತಾನ ಮತ್ತು ಭಾರತ (India vs Pakistan) ತಂಡಗಳು ಏಷ್ಯಾಕಪ್ 2025ರ (Asia Cup 2025) ಫೈನಲ್ ಪಂದ್ಯವನ್ನು ಆಡಲು ಸಜ್ಜಾಗಿವೆ. ಭಾನುವಾರ ಅಂದರೆ 28 ರಂದು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಉಭಯ ತಂಡಗಳು ಸೆಣಸಾಡಲಿವೆ. ಏಷ್ಯಾಕಪ್ ಫೈನಲ್ (Asia Cup final) ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ? ಎಂಂಬುದು ಕ್ರಿಕೆಟ್ (Cricket) ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಏಷ್ಯಾಕಪ್ ಲೀಗ್ ಹಂತದಲ್ಲಿ ಆಡಿದ ಎರಡು ಪಂದ್ಯಗಳಲ್ಲಿಯೂ ಪಾಕಿಸ್ತಾನ ತಂಡವನ್ನು ಟೀಮ್ ಇಂಡಿಯಾ ಬಗ್ಗು ಬಡಿದಿತ್ತು. ಈಗ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಕಪ್ ಗೆಲ್ಲುವತ್ತ ಸಿದ್ಧತೆ ಮಾಡಿಕೊಂಡಿದೆ. ಇಂತಹ ಸಂದರ್ಭದಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸಬಲ್ಲ ಬ್ಯಾಟರ್ ಬಗ್ಗೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಬ್ಯಾಟರ್ ಸುನೀಲ್ ಗವಾಸ್ಕರ್ ಅವರು ಭವಿಷ್ಯ ನುಡಿದ್ದಾರೆ.

ಟೀಮ್ ಇಂಡಿಯಾ ಬಳಿ ಇರುವ ಪ್ಲಾನ್ ಬಿ

ಏಷ್ಯಾಕಪ್ 2025 ರ ಟೂರ್ನಿಯಲ್ಲಿ ಭಾರತ ತಂಡದ ಯಂಗ್ ಬ್ಯಾಟರ್ ಅಭಿಷೇಕ್ ಶರ್ಮಾ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಅಭಿಷೇಕ್ ಬ್ಯಾಟರ್ ಬಲದಿಂದ ಟೀಮ್ ಇಂಡಿಯಾ ಗೆಲುವಿನ ಓಟ ಮುಂದುವರೆಸಿದ್ದು, ಅಜೇಯವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಶತಕ ಸಿಡಿಸುವ ಅವಕಾಶವಿದೆ ಎಂದು ಸುನಿಲ್ ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಅಭಿಷೇಕ್ ಶರ್ಮಾ ದೊಡ್ಡ ಅವಕಾಶವನ್ನು ಕೈ ಚೆಲ್ಲುವುದಿಲ್ಲ. ಟೂರ್ನಿಯಲ್ಲಿ ಈಗಾಗಲೇ ಅವರು ಮೂರು ಅರ್ಧಶತಕಗಳನ್ನು ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಶ್ರೀಲಂಕಾ ವಿರುದ್ಧ ಅಭಿಷೇಕ್ ಔಟ್ ಆಗದಿದ್ದರೆ, ಶತಕವನ್ನು ಬಾರಿಸುತ್ತಿದ್ದರು. ಈಗ ಅವರು ಫೈನಲ್‌ನಲ್ಲಿ ಮತ್ತೊಂದು ಬಿಗ್ ಇನ್ನಿಂಗ್ಸ್ ಕಟ್ಟು ನಿರೀಕ್ಷೆಯಿದೆ. ಬಹುಶಃ ಅವರು ಶತಕ ಗಳಿಸಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಔಟಾದ ನಂತರ ಟೀಮ್ ಇಂಡಿಯಾದ ಇನ್ನಿಂಗ್ಸ್ ಕುಸಿಯುತ್ತಿರುತ್ತದೆ. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್‌ರಂತಹ ಇತರ ಬ್ಯಾಟರ್ಸ್ ದುಬೈ ಪಿಚ್‌ನಲ್ಲಿ ತಮ್ಮ ಲಯ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಆದಾಗ್ಯೂ, ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಭಿಷೇಕ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲವಾದರೆ ಟೀಮ್ ಇಂಡಿಯಾ ಭಯಪಡುವ ಅಗತ್ಯವಿಲ್ಲ.

ಭಾರತ ತಂಡಕ್ಕೆ ಇವರೇ ಆಸರೆ

ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಬ್ಬರಿಸಬಲ್ಲ ಹಲವಾರು ಅಟಗಾರರನ್ನು ಟೀಮ್ ಇಂಡಿಯಾದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಫಾರ್ಮ್​ಗೆ ಮರಳಿದರೆ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ರನ್ ಗಳಿಸಲು ಸಜ್ಜಾಗಿದ್ದಾರೆ. ಇದಲ್ಲದೆ, ಏಷ್ಯಾಕಪ್​ನಲ್ಲಿ ಅದ್ಭುತ ಆರಂಭ ಕಂಡಿರುವ ಶುಭಮನ್ ಗಿಲ್ ಕೂಡ ರನ್ ಹೊಳೆ ಹರಿಸಲು ಸಿದ್ಧರಾಗಿದ್ದಾರೆ. ಆದ್ದರಿಂದ, ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಏಷ್ಯಾ ಕಪ್ 2025 ರ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, 51.50 ಸರಾಸರಿಯಲ್ಲಿ 309 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಅಭಿಷೇಕ್ ಶರ್ಮಾ ತಮ್ಮ ಬ್ಯಾಟ್ ಮೂಲಕ 31 ಬೌಂಡರಿಗಳು ಮತ್ತು 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಏಷ್ಯಾ ಕಪ್ 2025 ರಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಅಭಿಷೇಕ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದಾರೆ.