Last Updated:
ಭಾರತ ತಂಡ ಸೆಮಿ-ಫೈನಲ್‌ಗೆ ಅತ್ಯಂತ ಮಹತ್ವ ಎನಿಸಿದ್ದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಮೂಲಕ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅತ್ತ ಪಾಕಿಸ್ತಾನ ತಂಡ ಕೂಡ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
WCL ವರ್ಲ್ಡ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ನಿನ್ನೆ (ಜುಲೈ 29) ಭಾರತ ಚಾಂಪಿಯನ್ಸ್ (India Champions) ತಂಡಕ್ಕೆ ಸೆಮಿ-ಫೈನಲ್‌ಗೆ ಅತ್ಯಂತ ಮಹತ್ವ ಎನಿಸಿದ್ದ ವೆಸ್ಟ್ ಇಂಡೀಸ್ (West Indies) ವಿರುದ್ಧ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಮೂಲಕ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅತ್ತ ಪಾಕಿಸ್ತಾನ ಚಾಂಪಿಯನ್ಸ್ (Pakistan Champions) ತಂಡ ಕೂಡ ಸೆಮಿ ಫೈನಲ್‌ಗೆ ಬಂದಿದೆ. ಮಾತ್ರವಲ್, ಅಂಕಟ್ಟಿಯ ಪ್ರಕಾರ ಟೀಂ ಇಂಡಿಯಾ ಸೆಮಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಿದೆ. ಆದ್ರೆ, ಭಾರತೀಯ ಆಟಗಾರರು ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ ಆಟಗಾರರು ಹಾಗೂ ಶಾಹಿದ್-ಅಫ್ರಿದಿ ನೇತೃತ್ವದ ಪಾಕಿಸ್ತಾನ ಚಾಂಪಿಯನ್ಸ್ ತಂಡದ ವಿರುದ್ಧ ಮೈದಾನಕ್ಕಿಳಿಯಲು ನಿರಾಕರಿಸಿದೆ. ಆ ಮೂಲಕ ಲೀಗ್‌ನಲ್ಲಿ ಪಾಕಿಸ್ತಾನದ ವಿರುದ್ಧ ಲೀಗ್‌ನಲ್ಲಿ ಆಡುವುದನ್ನು ನಿರಾಕರಿಸಿದ್ದ ಟೀಂ ಇಂಡಿಯಾ ಆಟಗಾರರು ಈಗ ಮತ್ತೊಮ್ಮೆ ಸೆಮಿಫೈನಲ್‌ನಲ್ಲೂ ಆಡುವುದಿಲ್ಲ ಎನ್ನುವ ಮೂಲಕ ಪಾಕ್ ವಿರುದ್ಧ ನಾವು ಕ್ರಿಕೆಟ್ ಆಡಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ.
ಸುದ್ದಿ ಸಂಸ್ಥೆ IANS ವರದಿಯ ಪ್ರಕಾರ, ಭಾರತೀಯ ಆಟಗಾರರು ಪಾಕಿಸ್ತಾನದ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಆದ್ರೆ, ಈ ನಿರ್ಧಾರದ ಪರಿಣಾಮಗಳೇನು ಎಂಬುದನ್ನು ಟೂರ್ನಿಯ ಆಯೋಜಕರು ಇನ್ನಷ್ಟೆ ಧೃಡಪಡಿಸಬೇಕಿದೆ. ಮೇಲ್ನೋಟಕ್ಕೆ ಯಾವುದೇ ಸೋಲು ಕಾಣದೆ ಸೆಮಿ-ಫೈನಲ್ ಪ್ರವೇಶಿಸಿರುವ ಪಾಕಿಸ್ತಾನ ತಂಡ ಫೈನಲ್ ಟಿಕೆಟ್ ಪಡೆಯುವುದು ಬಹುತೇಖ ಖಚಿತ ಎನ್ನಲಾಗಿದೆ.
ಭಾರತವು ಟೂರ್ನಿಯ ಆರಂಭದಲ್ಲಿ ಲೀಗ್ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧದ ಆಡಲು ನಿರಾಕರಿಸಿತ್ತು. ಇದೀಗ ಅದೇ ನಿಲುವನ್ನು ನಿವೃತ್ತ ಭಾರತೀಯ ಆಟಗಾರರು ಸೆಮಿ ಫೈನಲ್ ಪಂದ್ಯಕ್ಕೂ ತೆಗೆದುಕೊಂಡಿದ್ದಾರೆ. ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ನಂತರ ಭಾರತದ ಹಲವು ಮಾಜಿ ಕ್ರಿಕೆಟಿಗರು ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದ್ದಾರೆ.
ಈ ನಡುವೆ ಬುಧವಾರ, WCL ನ ಪ್ರಮುಖ ಪ್ರಾಯೋಜಕರಲ್ಲಿ ಒಂದಾಗಿರುವ EaseMyTrip, ಭಾರತ ತಂಡ ಪಾಕಿಸ್ತಾನ ವಿರುದ್ಧದ WCL ಸೆಮಿಫೈನಲ್‌ನಿಂದ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಆಡುವ ಯಾವುದೇ ಪಂದ್ಯಾವಳಿಗಳಿಗೆ ತಾನು ಕೂಡ ಪ್ರಾಯೋಜಕತ್ವ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ EaseMyTrip, “ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ನಾವು ಟೀಮ್ ಇಂಡಿಯಾ @India_Champions ಅನ್ನು ಶ್ಲಾಘಿಸುತ್ತೇವೆ. ನೀವು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಆದಾಗ್ಯೂ, ಪಾಕಿಸ್ತಾನ ವಿರುದ್ಧದ ಮುಂಬರುವ ಸೆಮಿಫೈನಲ್ ಕೇವಲ ಮತ್ತೊಂದು ಪಂದ್ಯವಲ್ಲ, ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ. ಹಾಗಾಗಿ @EaseMyTrip ನಾವು ಭಾರತದೊಂದಿಗೆ ನಿಲ್ಲುತ್ತೇವೆ. ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶವನ್ನು ನಾವು ಬೆಂಬಲಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
July 30, 2025 5:32 PM IST