IND vs PAK: 6-0 ಸನ್ನೆ ಮಾಡಿದ್ದ ಪಾಕಿ ಕ್ರಿಕೆಟರ್​ಗೆ ಮೈದಾನದಲ್ಲೇ ಅರ್ಶ್ದೀಪ್ ಸಿಂಗ್ ಸಖತ್ ಕೌಂಟರ್! ವಿಡಿಯೋ ವೈರಲ್ | Arshdeep Singh’s Savage Reply to Haris Rauf’s Plane Crash Gesture Goes Viral: Watch the Video | ಕ್ರೀಡೆ

IND vs PAK: 6-0 ಸನ್ನೆ ಮಾಡಿದ್ದ ಪಾಕಿ ಕ್ರಿಕೆಟರ್​ಗೆ ಮೈದಾನದಲ್ಲೇ ಅರ್ಶ್ದೀಪ್ ಸಿಂಗ್ ಸಖತ್ ಕೌಂಟರ್! ವಿಡಿಯೋ ವೈರಲ್ | Arshdeep Singh’s Savage Reply to Haris Rauf’s Plane Crash Gesture Goes Viral: Watch the Video | ಕ್ರೀಡೆ

Last Updated:


ಇನ್ನು ಸದಾ ಭಾರತೀಯ ಬ್ಯಾಟರ್​ ಕೈಯಲ್ಲಿ ಚಚ್ಚಿಸಿಕೊಳ್ಳುವ ಹಾರಿಸ್ ರೌಫ್ ಪದೇ ಪದೇ ಇದೇ ರೀತಿ ವರ್ತಿಸಿದರು. ಸಂಜು ಸ್ಯಾಮ್ಸನ್ ವಿಕೆಟ್ ಪಡೆದ ನಂತರವೂ ಅವರು ಜೆಟ್ ಧ್ವಂಸಗೊಳಿಸುವಂತಹ ಸನ್ನೆ ಮಾಡಿದರು. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಟೀಕೆಗಳು ಬಂದವು.

ಹಾರಿಸ್ ರೌಫ್​ಗೆ ಅರ್ಶದೀಪ್ ಸಿಂಗ್ ತಿರುಗೇಟುಹಾರಿಸ್ ರೌಫ್​ಗೆ ಅರ್ಶದೀಪ್ ಸಿಂಗ್ ತಿರುಗೇಟು
ಹಾರಿಸ್ ರೌಫ್​ಗೆ ಅರ್ಶದೀಪ್ ಸಿಂಗ್ ತಿರುಗೇಟು

ಏಷ್ಯಾ ಕಪ್ 2025ರ (Asia Cup) ಸೂಪರ್-4 ಹಂತದ ಭಾರತ-ಪಾಕಿಸ್ತಾನ ಪಂದ್ಯವು ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ, ಎರಡೂ ದೇಶಗಳ ನಡುವಿನ ರಾಜಕೀಯ ಘಟನೆಗಳನ್ನ ಮಧ್ಯೆ ತಂದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಕಳೆದ ಭಾನುವಾರ (ಸೆಪ್ಟೆಂಬರ್ 21) ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿ ಗೆಲುವು ದಾಖಲಿಸಿತು. ಆದರೆ, ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಅವರ ವರ್ತನೆಯು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆತನ ‘6-0’ ಸನ್ನೆಗಳು ಮತ್ತು ಜೆಟ್ ವಿಮಾನ ಧ್ವಂಸಗೊಳಿಸುವಂತಹ ಪ್ರಕ್ರಿಯೆಗಳು ಭಾರತೀಯ ಆಟಗಾರರು ಮತ್ತು ಅಭಿಮಾನಿಗಳನ್ನು ಕೆರಳಿಸಿದ್ದವು. ಆದರೆ, ಭಾರತದ ವೇಗಿ ಅರ್ಶ್ದೀಪ್ ಸಿಂಗ್ ಅವರು ಅದಕ್ಕೆ ಅದ್ಭುತ ಕೌಂಟರ್ ನೀಡಿದ್ದು, ಈಗ ಆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

‘6-0’ ಸನ್ನೆಯ ವಿಡಿಯೋ ವೈರಲ್

ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳು ‘ವಿರಾಟ್ ಕೊಹ್ಲಿ’ ಎಂದು ಕೂಗುತ್ತಿದ್ದರು, ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಾರಿಸ್ ರೌಫ್ ಇದರಿಂದ ಬಾಲ ಸುಟ್ಟ ಬೆಂಕಿನಂತಾದ ರೌಫ್​ ಕೋಪದಲ್ಲಿ ‘6-0’ ಸನ್ನೆ ಮಾಡಿ, ಭಾರತದ 6 ರಫೇಲ್ ಜೆಟ್ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಸೂಚಿಸಿದರು. ಇದು ‘ಆಪರೇಷನ್ ಸಿಂಧೂರ್’ನಲ್ಲಿ ಭಾರತದ ರಫೇಲ್ ಜೆಟ್‌ಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ತಪ್ಪು ಸುದ್ದಿಗಳನ್ನು ಉಲ್ಲೇಖಿಸುತ್ತದೆ. ಆದರೆ, ಇದಕ್ಕೆ ಇಲ್ಲಿಯವರೆಗೆ ಪಾಕಿಸ್ತಾನ ಸರ್ಕಾರ ಯಾವುದೇ ಪುರಾವೆ ನೀಡಿಲ್ಲ. ಆದರೆ ತಮ್ಮ ಕಳಪೆ ಪ್ರದರ್ಶನವನ್ನಮುಚ್ಚಿ ಹಾಕಿಕೊಳ್ಳುವುದಕ್ಕೆ ಪಾಕಿಸ್ತಾನದ ಆಟಗಾರರು ಪದೇ ಪದೇ ಈ ರೀತಿ ವರ್ತಿಸಿ ತಮ್ಮ ಅಭಿಮಾನಿಗಳನ್ನ ಸಂತೈಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Haris Rauf: ಸ್ವಲ್ಪನೂ ನಾಚಿಕೆಯಿಲ್ಲ; 6-0 ಅಂತ ಸಿಗ್ನಲ್​ ಮಾಡಿ ಅನುಭವಿಸಿದ ಪಾಕ್ ಆಟಗಾರ, ಇದರ ಅರ್ಥವೇನು ಗೊತ್ತಾ?

ಇನ್ನು ಸದಾ ಭಾರತೀಯ ಬ್ಯಾಟರ್​ ಕೈಯಲ್ಲಿ ಚಚ್ಚಿಸಿಕೊಳ್ಳುವ ಹಾರಿಸ್ ರೌಫ್ ಪದೇ ಪದೇ ಇದೇ ರೀತಿ ವರ್ತಿಸಿದರು. ಸಂಜು ಸ್ಯಾಮ್ಸನ್ ವಿಕೆಟ್ ಪಡೆದ ನಂತರವೂ ಅವರು ಜೆಟ್ ಧ್ವಂಸಗೊಳಿಸುವಂತಹ ಸನ್ನೆ ಮಾಡಿದರು. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಟೀಕೆಗಳು ಬಂದವು. ನೆಟಿಜನ್‌ಗಳು ಅವರನ್ನು “ಅಸಭ್ಯ” ಮತ್ತು “ಅಸಮರ್ಥ” ಎಂದು ಕರೆದರು. ಇದಲ್ಲದೆ, ಅಭಿಷೇಕ್ ಶರ್ಮಾ ಅವರೊಂದಿಗೂ ಕಾಲುಕೆರೆದು ಜಗಳವಾಡಿದರು, ಇದು ಪಂದ್ಯದಲ್ಲಿ ಒತ್ತಡವನ್ನು ಹೆಚ್ಚಿಸಿತು.

ಅರ್ಶ್ದೀಪ್ ಸಿಂಗ್ ಅವರ ಕೌಂಟರ್

ಹ್ಯಾರಿಸ್ ರೌಫ್ ಸನ್ನೆಗಳಿಗೆ ಅರ್ಶ್ದೀಪ್ ಸಿಂಗ್ ಅವರು ತಕ್ಕುತ್ತ ನೀಡಿದರು. ಪಂದ್ಯದ ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಅಥವಾ ನಂತರವೇ ಇರಬಹುದಾದ ಈ ಘಟನೆಯಲ್ಲಿ, ಅರ್ಶ್ದೀಪ್ ಅವರು ಹ್ಯಾರಿಸ್ ರೌಫ್ ಜೆಟ್ ಹಾರಿಸುವಂತೆ ಹಾರಿಸಿ, ಅದು, ಬ್ಯಾಕ್ ಫೈರ್ ಆಗಿ ಅವರ ಹಿಂದಕ್ಕೆ ಬಂದಪ್ಪಳಿಸುವಂತೆ ಸನ್ನೆ ಮಾಡಿದ್ದಾರೆ. ಈ ವಿಡಿಯೋ ತಕ್ಷಣ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಪಾಕಿಗೆ “ಅದ್ಭುತ ಕೌಂಟರ್!” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ಅಭಿಮಾನಿಗಳು ಹ್ಯಾರಿಸ್ ರೌಫ್ ಅವರ ಸನ್ನೆಗಳನ್ನು ಎಡಿಟ್ ಮಾಡಿ, ಅರ್ಶ್ದೀಪ್ ಅವರ ಕೌಂಟರ್‌ನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪುರಾವೆ ಇಲ್ಲದೆ ರಫೇಲ್ ಹೊಡೆದಿದ್ದೇವೆ ಎಂದು ಸುಳ್ಳು ಸುದ್ದಿ

‘ಆಪರೇಷನ್ ಸಿಂಧೂರ್’ಗೆ ಸಂಬಂಧಿಸಿವೆ. ಈ ಆಪರೇಷನ್‌ನಲ್ಲಿ ಭಾರತ 6 ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಲೇ ಬರುತ್ತಿದೆ. ಆದರೆ ಪಾಕಿಸ್ತಾನ ಅದನ್ನು ಹೊಡೆದುರುಳಿಸಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಪಾಕ್ ಆಟಗಾರರು ಇದನ್ನು ನಿಜವೆಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಯುದ್ದದಲ್ಲಿ ಮುಖಭಂಗಕ್ಕೆ ಒಳಗಾಗಿ ತಮ್ಮ ಜನರನ್ನ ತಣ್ಣಗಾಹಿಸಲು ಸುಳ್ಳು ಸುದ್ದಿ ಹಬ್ಬಿಸಿದ್ದ ಪಾಕ್, ಇದು ಕ್ರಿಕೆಟ್​ನಲ್ಲಿ ಭಾರತದೆದುರು ಮಣ್ಣುಮುಕ್ಕಿ ಮತ್ತೆ ಅದೇ ಸುಳ್ಳನ್ನ ಮುಂದುವರಿಸಿ ಆಟವನ್ನ ರಾಜಕೀಯಕ್ಕೆ ತಿರುಗಿಸಿದೆ.