ಪಂದ್ಯಾವಳಿಯ ನಡುವೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ, ‘ಆಪರೇಷನ್ ಸಿಂಧೂರ್’, ಆಟಗಾರರ ನಡುವಿನ ‘ನೋ ಹ್ಯಾಂಡ್‌ಶೇಕ್’ ಮತ್ತು ಹ್ಯಾರಿಸ್ ರೌಫ್ ಸಂಜ್ಞೆಯಂತಹ ಘಟನೆಗಳು ಪಂದ್ಯದ ಮೇಲಿನ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿವೆ. ಈ ಘಟನೆಗಳೆಲ್ಲವೂ ಸೇರಿ ಫೈನಲ್ ಪಂದ್ಯವನ್ನು ಕೇವಲ ಆಟವಾಗಿ ಉಳಿಸದೆ, ಒಂದು ಪ್ರತಿಷ್ಠೆಯ ಕಣವನ್ನಾಗಿ ಮಾಡಿವೆ. ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ, “ಈ ಸಲ ಪಾಕಿಸ್ತಾನವನ್ನು ಬರೀ ಸೋಲಿಸಿದರೆ ಸಾಲದು, ಹೀನಾಯವಾಗಿ ಸೋಲಿಸಬೇಕು,” ಎಂದು ಹಂಬಲಿಸುತ್ತಿದ್ದಾರೆ.