IND vs SA: ಭಾರತ vs ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ವಿಶೇಷ ರೂಲ್ಸ್; ಊಟಕ್ಕೂ ಮುನ್ನವೇ ಟೀ ಬ್ರೇಕ್​! ಕಾರಣ ಇಲ್ಲಿದೆ / Tea break before lunch for players during the second Test between India and South Africa in Guwahati | ಕ್ರೀಡೆ

IND vs SA: ಭಾರತ vs ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ವಿಶೇಷ ರೂಲ್ಸ್; ಊಟಕ್ಕೂ ಮುನ್ನವೇ ಟೀ ಬ್ರೇಕ್​! ಕಾರಣ ಇಲ್ಲಿದೆ / Tea break before lunch for players during the second Test between India and South Africa in Guwahati | ಕ್ರೀಡೆ

Last Updated:

ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನವೆಂಬರ್ 22 ರಿಂದ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ರೂಲ್ಸ್ ಜಾರಿಗೆ ತರಲಾಗಿದೆ.

guwahati stadium
guwahati stadium

ಟೆಸ್ಟ್ ಪಂದ್ಯಗಳಲ್ಲಿ ಟಾಸ್(Toss), ಊಟ(Lunch), ಟೀ(Tea), ಸ್ಟಂಪ್‌ಗಳು (ದಿನದ ಆಟದ ಅಂತ್ಯ) ಸಾಮಾನ್ಯ. ಆದರೆ, ನವೆಂಬರ್ 22 ರಿಂದ ಗುವಾಹಟಿ(Guwahati)ಯಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ(India vs South Africa) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ರೂಲ್ಸ್ ಜಾರಿಗೆ ತರಲಾಗಿದೆ. ಹೌದು, ಮೊದಲ ಬಾರಿಗೆ ಆಟಗಾರರಿಗೆ ಊಟಕ್ಕೂ ಮೊದಲು ಟೀ ಬ್ರೇಕ್(Tea break) ಸಿಗಲಿದೆ. ಈ ವಿಶೇಷ ರೂಲ್ಸ್ ಜಾರಿ ಮಾಡಲು ಕೂಡ ಒಂದು ಕಾರಣವಿದೆ.

ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ 26 ರವರೆಗೆ ನಡೆಯಲಿದೆ. ಭಾರತದ

ಪೂರ್ವ ಭಾಗದಲ್ಲಿ ಅಂದರೆ ಈಶಾನ್ಯ ರಾಜ್ಯಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ಬೇಗ ಆಗುತ್ತದೆ. ಈ ಕಾರಣಕ್ಕಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಟಗಾರರಿಗೆ ಊಟಕ್ಕೂ ಮೊದಲು ಟೀ ಬ್ರೇಕ್ ನೀಡಲು ನಿರ್ಧರಿಸಲಾಗಿದೆ.

ಟೀ ಬ್ರೇಕ್ ಯಾವಾಗ?

ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಅವಧಿ ಬೆಳಿಗ್ಗೆ 9 ರಿಂದ 11 ಗಂಟೆ ರವರೆಗೆ ನಡೆಯಲಿದೆ. ನಂತರ ಬೆಳಿಗ್ಗೆ 11 ರಿಂದ 11:20 ಗಂಟೆಗೆ ರವರೆಗೆ ಟೀ ಬ್ರೇಕ್ ಇರಲಿದೆ. ಎರಡನೇ ಅವಧಿ ಬೆಳಿಗ್ಗೆ 11:20 ರಿಂದ ಮಧ್ಯಾಹ್ನ 1:20 ರವರೆಗೆ ನಡೆಯಲಿದೆ. ಊಟದ ಬ್ರೇಕ್ ಮಧ್ಯಾಹ್ನ 1:20 ರಿಂದ ಮಧ್ಯಾಹ್ನ 2 ಗಂಟೆಗೆ ರವರೆಗೆ ಮತ್ತು ಮೂರನೇ ಅವಧಿ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಗೆ ರವರೆಗೆ ನಡೆಯಲಿದೆ.

ಬಿಸಿಸಿಐ ಹೇಳಿದ್ದೇನು?

ಬಿಸಿಸಿಐ ಮೂಲವೊಂದು ಊಟಕ್ಕೂ ಮುನ್ನವೇ ಟೀ ಬ್ರೇಕ್​ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದೆ. ಅಸ್ಸಾಂನ ಗುವಾಹಟಿಯಲ್ಲಿ ಸೂರ್ಯಾಸ್ತವು ಬೇಗನೆ ಆಗುತ್ತದೆ. ಹೀಗಾಗಿ ಪಂದ್ಯ ಬೇಗನೆ ಆರಂಭವಾಗುವುದರಿಂದ ನಾವು ಬೇಗನೆ ಟೀ ಕುಡಿಯಲು ನಿರ್ಧರಿಸಿದ್ದೇವೆ. ಮೈದಾನದಲ್ಲಿ ಹೆಚ್ಚುವರಿ ಆಟದ ಸಮಯವನ್ನು ಪಡೆಯಲು ಸಮಯ ಉಳಿತಾಯವಾಗುವುದರಿಂದ ನಾವು ಟೀ ಬ್ರೇಕ್ ಅವಧಿಯನ್ನು ಬದಲಾಯಿಸಲು ನಿರ್ಧರಿಸಿದ್ದು ಇದೇ ಮೊದಲು ಎಂದು ತಿಳಿಸಿದೆ.

ಬೇರೆ ಕಡೆ ಪಂದ್ಯ ಆರಂಭ ಯಾವಾಗ?

ಸಾಮಾನ್ಯವಾಗಿ ಭಾರತದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳು ಬೆಳಿಗ್ಗೆ 9:30 ಗಂಟೆಗೆ ಪ್ರಾರಂಭವಾಗುತ್ತವೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 11:30 ಗಂಟೆ ವರೆಗೆ ಮೊದಲ ಅವಧಿ ನಡೆದರೆ, 12:10 ಗಂಟೆ ವರೆಗೆ ಅಂದರೆ 40 ನಿಮಿಷಗಳ ಊಟದ ಬ್ರೇಕ್ ಇರಲಿದೆ. ನಂತರ ಎರಡನೇ ಅವಧಿ 12:10 ರಿಂದ 2:30 ಗಂಟೆ ವರೆಗೆ ನಡೆಯಲಿದೆ. ಮಧ್ಯಾಹ್ನ 2:10 ರಿಂದ 2:30 ಗಂಟೆ ವರೆಗೆ ಎರಡೂ ತಂಡಗಳು 20 ನಿಮಿಷಗಳ ಟೀ ಬ್ರೇಕ್ ಪಡೆಯಲಿವೆ. ನಂತರ ಮೂರನೇ ಅವಧಿ 2:30 ರಿಂದ 4:30 ಗಂಟೆ ವರೆಗೆ ನಡೆಯಲಿದೆ.

ಪಂದ್ಯದ ದಿನದಾಟ ಅಂತ್ಯದ ವೇಳೆಗೆ ತಂಡವು ದಿನಕ್ಕೆ 90 ಓವರ್‌ಗಳನ್ನು ಪೂರ್ಣಗೊಳಿಸಲು ಮ್ಯಾಚ್ ರೆಫರಿಗಳು ಅರ್ಧ ಗಂಟೆ ಹೆಚ್ಚುವರಿ ಸಮಯವನ್ನು ನೀಡಬಹುದು. ಇಂಗ್ಲೆಂಡ್ ತಮ್ಮ ಬೇಸಿಗೆಯಲ್ಲಿ ದೀರ್ಘ ಹಗಲು ಸಮಯವನ್ನು ಹೊಂದಿರುವುದರಿಂದ ಬೆಳಿಗ್ಗೆ 11 ಗಂಟೆಗೆ ತಮ್ಮ ಟೆಸ್ಟ್ ಪಂದ್ಯವನ್ನು ಪ್ರಾರಂಭಿಸುವಂತೆಯೇ ಪಂದ್ಯದ ಪ್ರಾರಂಭದ ಸಮಯವು ದೇಶದಿಂದ ದೇಶಕ್ಕೆ ಬದಲಾಗಬಹುದು. ಆದಾಗ್ಯೂ, ಹೆಚ್ಚಿನ ತಂಡಗಳು ಟೆಸ್ಟ್ ಪಂದ್ಯಗಳ ಸಮಯದಲ್ಲಿ ಸಾಮಾನ್ಯವಾಗಿ ಊಟ ಮತ್ತು ಟೀ ಬ್ರೇಕ್ ಅನ್ನು ಅನುಸರಿಸುತ್ತವೆ.