ಏಷ್ಯಾದ ಕ್ರಿಕೆಟ್ ಹಬ್ಬ, ಏಷ್ಯಾ ಕಪ್ 2025ರ ಅಸಲಿ ನಿನ್ನೆಯಿಂದ ಶುರುವಾಗಿದೆ. ನಿನ್ನೆ (ಸೆಪ್ಟೆಂಬರ್ 9) ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ಸಿಕ್ಕಿದ್ದರೂ, ಹಾಲಿ ಚಾಂಪಿಯನ್ ಭಾರತ ತನ್ನ ಅಭಿಯಾನವನ್ನು ಇಂದು ಆರಂಭಿಸಲಿದೆ. ಗ್ರೂಪ್ ‘ಎ’ಯ ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ, ಯುಎಇ ತಂಡವನ್ನು ಎದುರಿಸಲಿದ್ದು, ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.