IND vs UAE Asia Cup: ಯುಎಇ ಮಣಿಸಿ ಏಷ್ಯಾಕಪ್​​​ನಲ್ಲಿ ಶುಭಾರಂಭ ಮಾಡಿದ ಭಾರತ! 27 ಎಸೆತಗಳಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ | India Thrash UAE by 9 Wickets in Asia Cup 2025: A Dominant Performance | ಕ್ರೀಡೆ

IND vs UAE Asia Cup: ಯುಎಇ ಮಣಿಸಿ ಏಷ್ಯಾಕಪ್​​​ನಲ್ಲಿ ಶುಭಾರಂಭ ಮಾಡಿದ ಭಾರತ! 27 ಎಸೆತಗಳಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ | India Thrash UAE by 9 Wickets in Asia Cup 2025: A Dominant Performance | ಕ್ರೀಡೆ

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ 2025ರ ಏಷ್ಯಾಕಪ್​​ನ 2ನೇ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಬ್ಯಾಟಿಂಗ್​​ಗೆ ಇಳಿದ ಯುಎಇ ತಂಡ ನಿರೇಕ್ಷೆಯಂತೆ ಭಾರತದ ಬೌಲಿಂಗ್ ದಾಳಿಯನ್ನ ಎದುರಿಸಲಾಗದೇ ತತ್ತರಿಸಿತು. ಆರಂಭಿಕರಾದ ಅಲಿಶಾನ್ ಶರಾಫು ಹಾಗೂ ನಾಯಕ ಮೊಹಮ್ಮದ್ ವಸೀಮ್​ ಹೊರೆತುಪಡಿಸಿದರೆ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಖಲಿಸಲು ವಿಫಲರಾದರು.

ಭಾರತದ ಪರ ಭಾರತದ ಪರ ಕುಲದೀಪ್ ಯಾದವ್ 2.1 ಓವರ್​ ಬೌಲಿಂಗ್ ಮಾಡಿ 7ರನ್​ ನೀಡಿ 4 ವಿಕೆಟ್ ಪಡೆದರೆ, ಶಿವಂ ದುಬೆ 2 ಓವರ್​ಗಳಲ್ಲಿ 4 ರನ್​ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 13ಕ್ಕೆ1, ಬುಮ್ರಾ 19ಕ್ಕೆ1, ವರುಣ್ ಚಕ್ರವರ್ತಿ 4ಕ್ಕೆ 1 ವಿಕೆಟ್ ಪಡೆದು ಅತಿಥೇಯ ತಂಡವನ್ನ ಸಂಪೂರ್ಣ ಕಟ್ಟಿಹಾಕಿದರು.

ಇದನ್ನೂ ಓದಿ: IND vs AFG Asia Cup: ಕುಲದೀಪ್, ದುಬೆ ದಾಳಿಗೆ ಧೂಳೀಪಟವಾದ ಯುಎಇ! ಕೇವಲ 57ಕ್ಕೆ ಸರ್ವಪತನ

58 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 4.3 ಓವರ್​ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.  ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 30 ರನ್​ಗಳಿಸಿದರೆ, ಶುಭ್​ಮನ್ ಗಿಲ್ 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 20, ನಾಯಕ ಸೂರ್ಯಕುಮಾರ್ ಯಾದವ್ 2 ಎಸೆತಗಳಲ್ಲಿ ಅಜೇಯ 7 ರನ್​ಗಳಿಸಿ ಪಂದ್ಯವನ್ನ ಮುಗಿಸಿದರು.

ಫುಲ್ ಮೆಂಬರ್ ತಂಡಗಳಿಂದ ಅತ್ಯಂತ ಹೆಚ್ಚು ಬಾಲ್‌ಗಳೊಂದಿಗೆ ಗೆಲುವುಗಳು

ಇಂಗ್ಲೆಂಡ್ vs ಒಮಾನ್ – 101 ಬಾಲ್‌ಗಳೊಂದಿಗೆ ಗೆಲುವು (ನಾಥ್ ಸೌಂಡ್, 2024)

ಭಾರತ vs ಯುಎಇ – 93 ಬಾಲ್‌ಗಳೊಂದಿಗೆ ಗೆಲುವು (ದುಬೈ, 2025)

ಶ್ರೀಲಂಕಾ vs ನೆದರ್‌ಲ್ಯಾಂಡ್ಸ್ – 90 ಬಾಲ್‌ಗಳೊಂದಿಗೆ ಗೆಲುವು (ಚಟ್ಟೋಗ್ರಾಮ್, 2014)

ಜಿಂಬಾಬ್ವೆ vs ಮೊಜಾಂಬಿಕ್ – 90 ಬಾಲ್‌ಗಳೊಂದಿಗೆ ಗೆಲುವು (ನೈರೋಬಿ, 2024)

ಭಾರತದ ಹಿಂದಿನ ದಾಖಲೆ: 81 ಬಾಲ್‌ಗಳೊಂದಿಗೆ ಗೆಲುವು vs ಸ್ಕಾಟ್‌ಲ್ಯಾಂಡ್ (ದುಬೈ, 2021)

ಪ್ಲೇಯಿಂಗ್ ಇಲೆವೆನ್

ಯುನೈಟೆಡ್ ಅರಬ್ ಎಮಿರೇಟ್ಸ್ ಪ್ಲೇಯಿಂಗ್ XI: ಮುಹಮ್ಮದ್ ವಸೀಮ್ (ನಾಯಕ), ಮೊಹಮ್ಮದ್ ಜುಹೈಬ್ ಖಾನ್, ಆಸಿಫ್ ಖಾನ್, ಅಲಿಶನ್ ಶರಾಫು, ರಾಹುಲ್ ಚೋಪ್ರಾ (WK), ಧ್ರುವ ಪರಾಶರ್, ಹೈದರ್ ಅಲಿ, ಮುಹಮ್ಮದ್ ರೋಹಿದ್ ಖಾನ್, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕ್, ಸಿಮ್ರಂಜೀತ್ ಸಿಂಗ್ ಕಾಂಗ್

ಭಾರತ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೀ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

ಪಾಕ್ ವಿರುದ್ಧ ಮುಂದಿನ ಪಂದ್ಯ

ಏಷ್ಯಾಕಪ್​​ನ ಹೈ ವೋಲ್ಟೇಜ್ ಪಂದ್ಯ ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಇದಾದ ನಂತರ ಸೆಪ್ಟೆಂಬರ್ 19ರಂದು ಒಮಾನ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದೆ.