Last Updated:
ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಶತಕ ಹಾಗೂ ಸಾಯಿ ಸುದರ್ಶನ್ 87 ರನ್ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ 518 ರನ್ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಘೋಷಿಸಿದೆ.
ಭಾರತ ತಂಡ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ 518 ರನ್ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಘೋಷಿಸಿದೆ. ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಶತಕ ಹಾಗೂ ಸಾಯಿ ಸುದರ್ಶನ್ 87 ರನ್ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ 518 ರನ್ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಘೋಷಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿಕೊಂಡಿದ್ದ ಭಾರತ ತಂಡ ಮೊದಲ ದಿನವೇ 2 ವಿಕೆಟ್ ಕಳೆದುಕೊಂಡು 318 ರನ್ಗಳಿಸಿತ್ತು. ರಾಹುಲ್ 38 ರನ್ ಹಾಗೂ ಸಾಯಿ ಸುದರ್ಶನ್ 87 ರನ್ಗಳಿಸಿ ಔಟ್ ಆದರೆ, ಜೈಸ್ವಾಲ್ ಮೊದಲ ದಿನ 173 ರನ್ ಹಾಗೂ ಗಿಲ್ 20 ರನ್ಗಳಿಸಿ ಅಜೇಯರಾಗಿ ಉಳಿದಿದ್ದರು.
2ನೇ ದಿನ ಆರಂಭದಲ್ಲೇ ಜೈಸ್ವಾಲ್ ನಿನ್ನೆಯ ಮೊತ್ತಕ್ಕೆ ಕೇವಲ 2 ರನ್ಗಳಿಸಿ ರನ್ ಔಟ್ ಆಗಿ ದ್ವಿಶತಕ ಮಿಸ್ ಮಾಡಿಕೊಂಡರು. ಜೈಸ್ವಾಲ್ 258 ಎಸೆತಗಳಲ್ಲಿ 22 ಬೌಂಡರಿಗಳ ಸಹಿತ 175 ರನ್ಗಳಿಸಿದರು. ನಂತರ ಗಿಲ್ ಜೊತೆಗೂಡಿದ ನಿತೀಶ್ ಕುಮಾರ್ ರೆಡ್ಡಿ 4ನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಸೇರಿಸಿದರು. ರೆಡ್ಡಿ 54 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ 43 ರನ್ಗಳಿಸಿ ಔಟ್ ಆದರು. ನಂತರ ಬಂದ ಧ್ರುವ್ ಜುರೆಲ್ 5ನೇ ವಿಕೆಟ್ ಜೊತೆಯಾಟದಲ್ಲಿ 155 ಎಸೆತಗಳಲ್ಲಿ 102 ರನ್ಗಳಿಸಿದರು.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಗಿಲ್ 196 ಎಸೆತಗಳಲ್ಲಿ 16 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 129 ರನ್ಗಳಿಸಿದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜುರೆಲ್ 79 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 44 ರನ್ಗಳಿಸಿ ಔಟ್ ಆದರು. ಜುರೆಲ್ ವಿಕೆಟ್ ಬಳಿಕ ಟೀಮ್ ಇಂಡಿಯಾ 518-5ಕ್ಕೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು.
ವೆಸ್ಟ್ ಇಂಡೀಸ್ ಪರ ಜೊಮೆಲ್ ವಾರಿಕನ್ 98ಕ್ಕೆ3, ನಾಯಕ ರೋಸ್ಟನ್ ಚೇಸ್ 83ಕ್ಕೆ1 ವಿಕೆಟ್ ಪಡೆದರು.
October 11, 2025 1:25 PM IST