IND vs WI: ಜಡೇಜಾ ದಾಳಿಗೆ ಕುಸಿದ ವಿಂಡೀಸ್! ಇನ್ನಿಂಗ್ಸ್ ಅಂತರದಿಂದ ಗೆಲ್ಲಲು ಭಾರತಕ್ಕೆ ಬೇಕು 5 ವಿಕೆಟ್ | India on Brink of Victory: Jadeja’s 3-Fer Puts West Indies on the Back Foot | ಕ್ರೀಡೆ

IND vs WI: ಜಡೇಜಾ ದಾಳಿಗೆ ಕುಸಿದ ವಿಂಡೀಸ್! ಇನ್ನಿಂಗ್ಸ್ ಅಂತರದಿಂದ ಗೆಲ್ಲಲು ಭಾರತಕ್ಕೆ ಬೇಕು 5 ವಿಕೆಟ್ | India on Brink of Victory: Jadeja’s 3-Fer Puts West Indies on the Back Foot | ಕ್ರೀಡೆ

Last Updated:

ಭಾರತ ತಂಡ ನಿನ್ನೆಯ ಮೊತ್ತವಾದ 448/5 ಡಿಕ್ಲೇರ್ ಘೋಷಿಸಿತು. 286 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಎರಡನೇ ಇನ್ನಿಂಗ್ಸ್​​ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ.

ರವೀಂದ್ರ ಜಡೇಜಾರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ (India vs West Indies)​ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಅಂತರದ ಗೆಲುವಿನತ್ತಾ ಸಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ಪಡೆ ಕೇವಲ 162ಕ್ಕೆ ಆಲೌಟ್ ಆಗಿತ್ತು. ನಂತರ ಭಾರತ ತಂಡ 448-5 ರನ್​ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇದೀಗ ಪ್ರವಾಸಿ ತಂಡದ ವಿರುದ್ಧ ಭಾರತೀಯ ಬೌಲಿಂಗ್ ಪಡೆ ಮತ್ತೆ ಪ್ರಾಬಲ್ಯ ಸಾಧಿಸಿದ್ದು, ಟೀಮ್ ಇಂಡಿಯಾ ಇನ್ನಿಂಗ್ಸ್​ ಅಂತರದ ಗೆಲುವಿಗೆ ಕೇವಲ 5 ವಿಕೆಟ್​ಗಳ ಬಾಕಿ ಉಳಿದಿದೆ.

ಭಾರತ ತಂಡ ನಿನ್ನೆಯ ಮೊತ್ತವಾದ 448/5 ಡಿಕ್ಲೇರ್ ಘೋಷಿಸಿತು. 286 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಎರಡನೇ ಇನ್ನಿಂಗ್ಸ್​​ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಡಕ್ ಔಟ್ ಆಗಿದ್ದ ತೇಜ್​ನಾರಾಯಣ್ ಚಂದ್ರಪಾಲ್ 4 ರನ್​ಗಳಿಸಿ ಮತ್ತೆ ಸಿರಾಜ್​ ಬೌಲಿಂಗ್​ನಲ್ಲಿ ನಿತೀಶ್ ರೆಡ್ಡಿಗೆ ಕ್ಯಾಚ್ ನೀಡಿ ಔಟ್ ಆದರು.

ಜಾನ್​ ಕ್ಯಾಂಪ್​ಬೆಲ್ 14 ರನ್​ಗಳಿಸಿ ಜಡೇಜಾಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಬ್ರಾಂಡನ್ ಕಿಂಗ್(5), ರೋಸ್ಟನ್ ಚೇಸ್ (1) ಹಾಗೂ ಶಾಯ್ ಹೋಪ್​ (1) ಬಂದಷ್ಟೇ ವೇಗದಾಗಿ ಪೆವಿಲಿಯನ್​ ಸೇರಿಕೊಂಡರು. ಪ್ರಸ್ತುತ ಅಲಿಕ್ ಅಥಾಂಜೆ 50 ಎಸೆತಗಳಲ್ಲಿ ಅಜೇಯ 27 ರನ್, ಜಸ್ಟಿನ್ ಗ್ರೀವ್ಸ್ 21 ಎಸೆತಗಳಲ್ಲಿ 10 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಭಾರತಕ್ಕೆ ಬೃಹತ್ ಮುನ್ನಡೆ

ವೆಸ್ಟ್ ಇಂಡೀಸ್ ತಂಡವನ್ನ 162ಕ್ಕೆ ಆಲೌಟ್ ಮಾಡಿ ಮೊದಲ ದಿನವೇ ಬ್ಯಾಟಿಂಗ್ ಆರಂಭಿಸಿದ್ದ ಭಾರತ 2 ವಿಕೆಟ್ ಕಳೆದುಕೊಂಡು 121 ರನ್​ಗಳಿಸಿತ್ತು. ರಾಹುಲ್ 53 ಹಾಗೂ ಗಿಲ್ 18 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದರು. 2ನೇ ದಿನವಾದ ಇಂದು ಗಿಲ್ 50 ರನ್​ಗಳಿಸಿ ಔಟಾದರು. ರಾಹುಲ್​ 197 ಎಸೆತಗಳಲ್ಲಿ 12 ಬೌಂಡರಿ ಸಹಿತ 100 ರನ್​ಗಳಿಸಿದರು. ಇದು ಅವರ ವೃತ್ತಿ ಜೀವನದ 11ನೇ ಹಾಗೂ ಭಾರತದ ನೆಲದಲ್ಲಿ 2ನೇ ಶತಕವಾಗಿದೆ.

ದ್ವಿಶತಕದ ಜೊತೆಯಾಟ

ರಾಹುಲ್ ವಿಕೆಟ್ ನಂತರ ನಂತರ ಒಂದಾದ ಜುರೆಲ್-ಜಡೇಜಾ 5ನೇ ವಿಕೆಟ್ ಜೊತೆಯಾಟದಲ್ಲಿ 206 ರನ್​ಗಳ ಜೊತೆಯಾಟ ನಡೆಸಿದರು. ಈ ಇಬ್ಬರು ಬ್ಯಾಟರ್​ಗಳು 55.1 ಓವರ್​ಗಳ ಕಾಲ ವಿಂಡೀಸ್ ಬೌಲರ್​ಗಳನ್ನ ಹೈರಾಗೊಳಿಸಿದರು. ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್​ಗಳೊಂದಿಗೆ 125 ರನ್​ಗಳಿಸಿ ಔಟ್ ಆದರು. ಜುರೆಲ್ಗೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕವಾಗಿದೆ. ಜುರೆಲ್ ಬೆನ್ನಲ್ಲೇ ಜಡೇಜಾ ಕೂಡ ಶತಕ ಪೂರ್ಣಗೊಳಿಸಿದರು. 168 ಎಸೆತಗಳಲ್ಲಿ ಶತಕ ಪೂರೈಸಿದ ಜಡೇಜಾ ವೃತ್ತಿ ಜೀವನದ 6ನೇ ಶತಕ ದಾಖಲಿಸಿದ್ದರು.

ಜಡೇಜಾ 176 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅಜೇಯ 104 ರನ್​ ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ 9 ರನ್​ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದರು. ಆದರೆ ಭಾರತ ತಂಡ 3ನೇ ದಿನ  ಬ್ಯಾಟಿಂಗ್ ಮಾಡದೇ ನಿನ್ನೆಯ 448ರ ಮೊತ್ತಕ್ಕೆ ಡಿಕ್ಲೇರ್ ಘೋಷಿಸಿಕೊಂಡಿತು.