Last Updated:
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 2 ರಂದು ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತವನ್ನು ಸೋಲಿಸುವುದು ಹೇಗೆ ಎಂಬುದರ ಬಗ್ಗೆ ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಬಹಿರಂಗಪಡಿಸಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಅಕ್ಟೋಬರ್ 2 ರಂದು ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿದೆ. ನಾಯಕ ಶುಭ್‌ಮನ್ ಗಿಲ್ (Shubman Gill) ನೇತೃತ್ವದ ಟೀಮ್ ಇಂಡಿಯಾ (Team India) ಮೊದಲ ಟೆಸ್ಟ್ ಸರಣಿ (Test series) ಮೇಲೆ ಕಣ್ಣಿಟ್ಟಿದೆ. ಇತ್ತ ವೆಸ್ಟ್ ಇಂಡೀಸ್ ತನ್ನ ದಾಖಲೆಯನ್ನು ಸುಧಾರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇದೆಲ್ಲದರ ನಡುವೆ, ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ (Roston Chase) ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಬಹಳಷ್ಟು ಹೇಳಿದ್ದಾರೆ.
ತವರಿನಲ್ಲಿ ಭಾರತವನ್ನು ಸೋಲಿಸುವುದು ಹೇಗೆ ಎಂಬುದರ ಬಗ್ಗೆ ರೋಸ್ಟನ್ ಚೇಸ್ ಬಹಿರಂಗಪಡಿಸಿದ್ದಾರೆ. ನ್ಯೂಜಿಲೆಂಡ್‌ನ ಭಾರತ ಪ್ರವಾಸದ ಬಗ್ಗೆ ಚರ್ಚಿಸುವಾಗ, ಅವರು ಟೀಮ್ ಇಂಡಿಯಾದ ಹೀನಾಯ ಸೋಲಿನ ಬಗ್ಗೆ ಪ್ರಸ್ತಪಿಸಿ ವ್ಯಾಪಕವಾಗಿ ಮಾತನಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತವನ್ನು ಕಟ್ಟಿ ಹಾಕಲು ತಮ್ಮ ಬಳಿ ಇರುವ ಮಾಸ್ಟರ್ ಪ್ಲಾನ್ ಬಗ್ಗೆ ರೋಸ್ಟನ್ ಚೇಸ್ ತಿಳಿಸಿದ್ದಾರೆ. ನಾವು ಡಬ್ಲ್ಯೂಟಿಸಿ ಶ್ರೇಯಾಂಕದಲ್ಲಿ ಕೆಳಮಟ್ಟದಲ್ಲಿದ್ದರೂ, ಅದನ್ನು ಬಿಟ್ಟು ಮುಂದುವರಿಯುತ್ತೇವೆ. ಅಲ್ಲದೆ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯನ್ನು ಪ್ರಸ್ತಾಪಿಸುತ್ತಾ, ‘ಕಳೆದ ವರ್ಷ ಭಾರತಕ್ಕೆ ನ್ಯೂಜಿಲೆಂಡ್ ಬಂದಾಗ ಅವರು ನೀಡಿದ ಪ್ರದರ್ಶನದಿಂದ ಕಲಿಯಲು ಬಹಳಷ್ಟು ಇದೆ. ನಾವು ಅವರಿಂದ ಕಲಿಯಲು ಪ್ರಯತ್ನಿಸುತ್ತೇವೆ. ನಮ್ಮ ಕ್ರಿಕೆಟ್ ತಜ್ಞರು ನ್ಯೂಜಿಲೆಂಡ್ ತಂಡದ ವಿಡಿಯೋಗಳನ್ನು ಕಳುಹಿಸಿದ್ದಾರೆ. ನಾವು ಅದರಲ್ಲಿರುವ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸಿದ್ದು, ಅವುಗಳನ್ನು ನಮ್ಮ ಆಟದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ತಮ್ಮ ಪ್ಲಾನ್ ಬಗ್ಗೆ ಹೇಳಿದ್ದಾರೆ.
ನಾನು ಮೊದಲು ಭಾರತದ ಪಿಚ್‌ಗಳಲ್ಲಿ ಆಡಿದ್ದೇನೆ. ಆದ್ದರಿಂದ ಪಿಚ್ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗಿರುತ್ತದೆ ಎಂದು ನನಗೆ ತಿಳಿದಿದೆ. ಅಂತಹ ಪರಿಸ್ಥಿತಿಯಲ್ಲಿ ಸ್ಪಿನ್ನರ್‌ಗಳು ಹೆಚ್ಚು ಹೆಚ್ಚು ಬೌಲಿಂಗ್ ಮಾಡಬೇಕಾಗುತ್ತದೆ. ನಾವು ಅದಕ್ಕೂ ಸಿದ್ಧರಿದ್ದೇವೆ ಎಂದು ತಮ್ಮ ಬೌಲಿಂಗ್ ಸಾಮರ್ಥ್ಯದ ಬಗ್ಗೆ ವಿಂಡೀಸ್ ನಾಯಕ ತಿಳಿಸಿದ್ದಾರೆ.
ಭಾರತಕ್ಕೆ ನಾವು ದುರ್ಬಲ ತಂಡವಾಗಿ ಬಂದಿದ್ದೇವೆ. ಆದರೆ ನಾವು ಕಳೆದುಕೊಳ್ಳಲು ಏನೂ ಇಲ್ಲ. ಇದು ನಮ್ಮ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಟೆಸ್ಟ್ ಸರಣಿಯಲ್ಲಿ ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ. ಕಳೆದುಕೊಳ್ಳಲು ಏನೂ ಇಲ್ಲದಿರುವಾಗ ನೀವು ಅತ್ಯಂತ ಅಪಾಯಕಾರಿ ಎಂದು ನಾನು ಅಂದುಕೊಂಡಿದ್ದೇನೆ. ಅದು ನಮ್ಮ ಪರಿಸ್ಥಿತಿ. ಅಂತಹ ಪರಿಸ್ಥಿತಿಯಲ್ಲಿ, ನಾವು ಮೈದಾನದಲ್ಲಿ ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಆಡುತ್ತೇವೆ. ಏಕೆಂದರೆ ಎಲ್ಲರೂ ನಾವು ಸೋಲುತ್ತೇವೆ ಎಂದು ನಿರೀಕ್ಷಿಸುತ್ತಿದ್ದಾರೆ. ಈ ಪ್ರವಾಸಕ್ಕಾಗಿ ನಾವು ಯಾವುದೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಆದರೆ ನಮ್ಮ ಆಟಗಾರರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರವೇಶಿಸಿ ಭವರಸೆಯ ಮಾತುಗಳನ್ನು ಆಡಿದ್ದಾರೆ.
ಭಾರತದ ವಿರುದ್ಧ ವೆಸ್ಟ್ ಇಂಡೀಸ್ 2002 ರಿಂದ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಅಂದಿನಿಂದ ಭಾರತ ತಂಡ ಅಜೇಯವಾಗಿ ಮುಂದುವರೆದಿದೆ. ರೋಸ್ಟನ್ ಚೇಸ್ 23 ವರ್ಷಗಳ ನಂತರ ಭಾರತವನ್ನು ಟೆಸ್ಟ್ ಸರಣಿಯಲ್ಲಿ ಸೋಲಿಸುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ. ಆದರೆ ಬಲಿಷ್ಠ ಟೀಮ್ ಇಂಡಿಯಾವನ್ನು ತವರಿನಲ್ಲಿ ಸೋಲಿಸುವುದು ಕಷ್ಟಕರವಾಗಿದೆ.
October 01, 2025 11:22 PM IST