Last Updated:
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4ನೇ ದಿನ 2ನೇ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡ 311 ರನ್ಗಳಿಸಿದ್ದ ವೇಳೆ 9ನೇ ವಿಕೆಟ್ ಕಳೆದುಕೊಂಡಿತು. ಆ ವೇಳೆ ವಿಂಡೀಸ್ ಕೇವಲ 31 ರನ್ಗಗಳ ಮುನ್ನಡೆಯಲ್ಲಿತ್ತು. ಇನ್ನೊಂದೆರಡು ಓವರ್ಗಳಲ್ಲಿ ಕೊನೆಯ ವಿಕೆಟ್ ಪಡೆದರೆ ಭಾರತ 10-15 ಓವರ್ಗಳಲ್ಲಿ ಪಂದ್ಯವನ್ನ ಮುಗಿಸಬಹುದಿತ್ತು. ಆದರೆ ಈ ಬಾಲಂಗೋಚಿ ಜೋಡಿ ಭಾರತದ ಲೆಕ್ಕಾಚಾರವನ್ನ ಉಲ್ಟಾ ಪಲ್ಟಾ ಮಾಡಿತು.
ವೆಸ್ಟ್ ಇಂಡೀಸ್ (West Indies) ವಿರುದ್ಧದ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಗೆಲುವಿನ ಹೊಸ್ತಿಲಲ್ಲಿದೆ. ಎರಡನೇ ಇನ್ನಿಂಗ್ಸ್ನಲ್ಲಿ 390ಕ್ಕೆ ಆಲೌಟ್ ಆಗಿರುವ ವೆಸ್ಟ್ ಇಂಡೀಸ್ ಭಾರತಕ್ಕೆ 121 ರನ್‌ಗಳ ಸಾಧಾರಣ ಗುರಿ ನೀಡಿದೆ. ಆದರೆ ಇನ್ನಿಂಗ್ಸ್ ಅಂತರದಿಂದ ಗೆಲ್ಲಬಹುದಾಗಿದ್ದ ಈ ಪಂದ್ಯವನ್ನ ಶಾಯ್ ಹೋಪ್ (Shai Hope) ಹಾಗೂ ಕ್ಯಾಂಪ್‌ಬೆಲ್ ಶತಕ ಅಡ್ಡವಾಯಿತು. ಆದರೆ 40-50ರ ಗುರಿ ಸಿಗಬಹುದು, ಭಾರತ ಇಂದೇ ಗೆಲ್ಲಬಹುದು ಎನ್ನುವ ಭಾರತದ ಲೆಕ್ಕಾಚಾರವನ್ನ ಜಸ್ಟಿನ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್ ಉಲ್ಟಾ ಮಾಡಿದರು. ಇವರಿಬ್ಬರು 10ನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟ ನೀಡಿ ಭಾರತೀಯ ಬೌಲರ್ಗಳನ್ನ ಹೈರಾಣ ಮಾಡಿದರು. ಅಲ್ಲದೆ 25 ವರ್ಷಗಳ ಹಿಂದಿನ ದಾಖಲೆಯನ್ನ ಬ್ರೇಕ್ ಮಾಡಿ ಭಾರತಕ್ಕೆ 100ಕ್ಕೂ ಹೆಚ್ಚಿನ ಗುರಿ ನೀಡಲು ಹಾಗೂ ಪಂದ್ಯ 5ನೇ ದಿನಕ್ಕೆ ಹೋಗುವಂತೆ ಮಾಡಿದರು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4ನೇ ದಿನ 2ನೇ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡ 311 ರನ್ಗಳಿಸಿದ್ದ ವೇಳೆ 9ನೇ ವಿಕೆಟ್ ಕಳೆದುಕೊಂಡಿತು. ಆ ವೇಳೆ ವಿಂಡೀಸ್ ಕೇವಲ 31 ರನ್ಗಗಳ ಮುನ್ನಡೆಯಲ್ಲಿತ್ತು. ಇನ್ನೊಂದೆರಡು ಓವರ್ಗಳಲ್ಲಿ ಕೊನೆಯ ವಿಕೆಟ್ ಪಡೆದರೆ ಭಾರತ 10-15 ಓವರ್ಗಳಲ್ಲಿ ಪಂದ್ಯವನ್ನ ಮುಗಿಸಬಹುದಿತ್ತು. ಆದರೆ ಈ ಬಾಲಂಗೋಚಿ ಜೋಡಿ ಭಾರತದ ಲೆಕ್ಕಾಚಾರವನ್ನ ಉಲ್ಟಾ ಪಲ್ಟಾ ಮಾಡಿತು.
ಹತ್ತನೇ ವಿಕೆಟ್‌ಗೆ ಇವರಿಬ್ಬರೂ 79 ರನ್‌ಗಳ ಜೊತೆಯಾಟ ಹಂಚಿಕೊಂಡರು, ಇದು ನಾಯಕ ಶುಭ್ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಏಕೆಂದರೆ ಭಾರತೀಯ ನೆಲದಲ್ಲಿ 25 ವರ್ಷಗಳಲ್ಲಿ ಮೊದಲ ಬಾರಿಗೆ, ಟೀಮ್ ಇಂಡಿಯಾ ವಿರುದ್ಧ ಕೊನೆಯ ವಿಕೆಟ್‌ಗೆ 50 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ದಾಖಲಾಗಿದೆ. ಗ್ರೀವ್ಸ್ ಮತ್ತು ಸೀಲ್ಸ್ ಒಟ್ಟಾರೆ ಭಾರತದ ವಿರುದ್ಧ ಹತ್ತನೇ ವಿಕೆಟ್‌ಗೆ ನಾಲ್ಕನೇ ಅತ್ಯಧಿಕ ಜೊತೆಯಾಟವನ್ನ ಸಾಧಿಸಿದ್ದಾರೆ. ಜೇಡನ್ 85 ಎಸೆತಗಳಲ್ಲಿ ಮೂರು ಬೌಂಡರಿಗಳನ್ನು ಒಳಗೊಂಡಂತೆ 50 ರನ್ ಗಳಿಸಿ ಅಜೇಯರಾಗಿ ಉಳಿದರು. ಸೀಲ್ಸ್ 67 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 32 ರನ್ ಗಳಿಸಿದರು.
ಪಾಕಿಸ್ತಾನದ ಅಮೀರ್ ಇಲಾಹಿ ಮತ್ತು ಜುಲ್ಫಿಕರ್ ಅಹ್ಮದ್ ಭಾರತದಲ್ಲಿ ಭಾರತದ ವಿರುದ್ಧ 10ನೇ ವಿಕೆಟ್‌ಗೆ ಅತಿ ಹೆಚ್ಚು ಜೊತೆಯಾಟ ನೀಡಿದ ದಾಖಲೆಯನ್ನು ಹೊಂದಿದ್ದಾರೆ. 1952 ರಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಕೊನೆಯ ವಿಕೆಟ್‌ಗೆ 104 ರನ್‌ಗಳನ್ನು ಸೇರಿಸಿದ್ದರು. ಈಗಲೂ ಇದೇ ವಿಶ್ವದಾಖಲೆಯಾಗಿದೆ. ಜಿಂಬಾಬ್ವೆಯ ಮಾಜಿ ಕ್ರಿಕೆಟಿಗರಾದ ಆಂಡಿ ಫ್ಲವರ್ ಮತ್ತು ಹೆನ್ರಿ ಒಲೊಂಗಾ 2000 ರಲ್ಲಿ ಭಾರತದಲ್ಲಿ ಮುರಿಯದ 97 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು. ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಮತ್ತು ತೌಸೀಫ್ ಅಹ್ಮದ್ 1987 ರಲ್ಲಿ ಭಾರತದ ನೆಲದಲ್ಲಿ 10ನೇ ವಿಕೆಟ್‌ಗೆ ಮುರಿಯದ 81 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿರುವುದು ಮೊದಲ ಮೂರು ದಾಖಲೆಯಾಗಿದೆ.
ಇನ್ನು ಫಾಲೋ-ಆನ್ ಒಳಗಾಗಿದ್ದ ವೆಸ್ಟ್ ಇಂಡೀಸ್ 390 ರನ್ ಗಳಿಗೆ ಆಲೌಟ್ ಆಗಿ, ಭಾರತಕ್ಕೆ 121 ರನ್‌ಗಳ ಗುರಿಯನ್ನು ನೀಡಿದೆ. ಜಾನ್ ಕ್ಯಾಂಪ್‌ಬೆಲ್ (115) ಮತ್ತು ಶಾಯ್ ಹೋಪ್ (103) ಶತಕಗಳನ್ನು ಗಳಿಸಿ ಇನ್ನಿಂಗ್ಸ್ ಸೋಲು ತಪ್ಪಿಸಿದ್ದಲ್ಲದೆ, 2ನೇ ಟೆಸ್ಟ್ ಪಂದ್ಯ ನಾಲ್ಕೇ ದಿನಕ್ಕೆ ಮುಗಿಯದಂತೆ ತಡೆದರು. ಮೊದಲ ಟೆಸ್ಟ್ ಪಂದ್ಯವನ್ನ ಭಾರತ 3 ದಿನಗಳಲ್ಲಿ ಮುಗಿಸಿ, ಇನ್ನಿಂಗ್ಸ್ ಹಾಗೂ 140 ರನ್‌ಗಳಿಂದ ಗೆಲುವು ಸಾಧಿಸಿತ್ತು.
ಸೋಮವಾರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ಕೆಎಲ್ ರಾಹುಲ್ 25 ರನ್ ಮತ್ತು ಸಾಯಿ ಸುದರ್ಶನ್ 30 ರನ್ ಗಳಿಸಿ ಅಜೇಯರಾಗಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಅನ್ನು ಇನ್ನಿಂಗ್ಸ್ ಮತ್ತು 140 ರನ್‌ಗಳಿಂದ ಗೆದ್ದ ಭಾರತ, 2ನೇ ಟೆಸ್ಟ್ನಲ್ಲಿ ಟಾಸ್ ಗೆದ್ದಯ ಬ್ಯಾಟಿಂಗ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಅನ್ನು ಐದು ವಿಕೆಟ್‌ಗಳಿಗೆ 518 ರನ್‌ಗಳಿಗೆ ಡಿಕ್ಲೇರ್ ಮಾಡಿತ್ತು.
October 13, 2025 8:25 PM IST