ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 2 ರಂದು ಅಹಮದಾಬಾದ್ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 10 ರಿಂದ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಈ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಈಗಾಗಲೇ ಘೋಷಿಸಲಾಗಿದೆ.
ಭಾರತ ತಂಡವು ಪ್ರಸ್ತುತ ಬದಲಾವಣೆಯ ಅವಧಿಯನ್ನು ಎದುರಿಸುತ್ತಿದೆ. ಜೂನ್-ಜುಲೈನಲ್ಲಿ ಭಾರತದ ಯುವ ತಂಡವು ಇಂಗ್ಲೆಂಡ್‌ಗೆ ತವರಿನಲ್ಲಿ ಕಠಿಣ ಪೈಪೋಟಿ ನೀಡಿತು. ಆದಾಗ್ಯೂ, ಸರಣಿ 2-2 ಡ್ರಾದಲ್ಲಿ ಕೊನೆಗೊಂಡಿತು. ಈಗ, ವೆಸ್ಟ್ ಇಂಡೀಸ್ ತಂಡವು ಮೊದಲಿಗಿಂತ ಇನ್ನೂ ಚಿಕ್ಕದಾಗಿದೆ. ವೆಸ್ಟ್ ಇಂಡೀಸ್‌ನ ಮೂವರು ವೇಗಿಗಳನ್ನು ಕೈಬಿಡಲಾಗಿದೆ.
ವೆಸ್ಟ್ ಇಂಡೀಸ್ ತಂಡದ ಪ್ರಮುಖ ವೇಗದ ಬೌಲರ್ಸ್ ಆದ ಸಮರ್ ಜೋಸೆಫ್, ಅಲ್ಜಾರಿ ಜೋಸೆಫ್ ಮತ್ತು ಜೇಸನ್ ಹೋಲ್ಡರ್ ಎಲ್ಲರೂ ತಂಡದಿಂದ ಹೊರಗುಳಿದಿದ್ದಾರೆ. ಈ ಮೂವರು ಬೌಲರ್ಸ್ ತಮ್ಮ ಬೌಲಿಂಗ್‌ನಿಂದ ಭಾರತ ತಂಡಕ್ಕೆ ಕಾಡುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದರು. ಈಗ ವಿಂಡೀಸ್ ತಂಡ ಈ ಮೂವರು ಬೌಲರ್ಸ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಸಮರ್ ಜೋಸೆಫ್, ಜೇಸನ್ ಹೋಲ್ಡರ್ ಮತ್ತು ಅಲ್ಜಾರಿ ಜೋಸೆಫ್
ವೆಸ್ಟ್ ಇಂಡೀಸ್ ತಂಡಕ್ಕೆ ಗಾಯಗಳು ದೊಡ್ಡ ತಲೆ ನೋವಾಗಿ ಪರಿಣಮಿಸಿವೆ. ಬೆನ್ನುನೋವಿನಿಂದಾಗಿ ಅಲ್ಜಾರಿ ಜೋಸೆಫ್ ತಂಡದಲ್ಲಿಲ್ಲ. ಅವರ ಸ್ಥಾನದಲ್ಲಿ ಜೆಡಿಯಾ ಬ್ಲೇಡ್ಸ್ ಅವರನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೆ, ಸಮರ್ ಜೋಸೆಫ್ ಕೂಡ ತಂಡದ ಭಾಗವಾಗಿಲ್ಲ. ಜೊತೆಗೆ ಜೇಸನ್ ಹೋಲ್ಡರ್ ತಂಡದಿಂದ ಹೊರಗುಳಿದ್ದು, ವೆಸ್ಟ್ ಇಂಡೀಸ್ ತಂಡಕ್ಕೆ ಇದು ದೊಡ್ಡ ಹಿನ್ನಡೆಯನ್ನು ಉಂಟು ಮಾಡಿದೆ.
ಉಭಯ ತಂಡಗಳು
ಹೊಸ ವೆಸ್ಟ್ ಇಂಡೀಸ್ ತಂಡ: ರೋಸ್ಟನ್ ಚೇಸ್ (ನಾಯಕ), ಜೋಮೆಲ್ ವಾರಿಕನ್, ಕೆವೆಲನ್ ಆಂಡರ್ಸನ್, ಅಲಿಕ್ ಅಥನಾಜೆ, ಜಾನ್ ಕ್ಯಾಂಪ್ಬೆಲ್, ಟೆಗ್ನಾರಾಯಣ್ ಚಂದ್ರಪಾಲ್, ಜಸ್ಟಿನ್ ಗ್ರೀವ್ಸ್, ಶಾಯ್ ಹೋಪ್, ಟೆವಿನ್ ಇಮ್ಲಾಚ್, ಜೆಡಿಯಾ ಬ್ಲೇಡ್ಸ್, ಜೋಹಾನ್ ಲೇನ್, ಬ್ರಾಂಡನ್ ಕಿಂಗ್, ಆಂಡರ್ಸನ್ ಫಿಲಿಪ್, ಖಾರಿ ಪಿಯರೆ ಮತ್ತು ಜೇಡನ್ ಸೀಲ್ಸ್.
ಭಾರತ ತಂಡ: ಶುಭಮನ್ ಗಿಲ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಎನ್. ಜಗದೀಸನ್ (ವಿಕೆಟ್‌ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.
September 29, 2025 11:16 PM IST