Last Updated:
ಮೊದಲ ದಿನವೇ ಬ್ಯಾಟಿಂಗ್ ಆರಂಭಿಸಿದ್ದ ಭಾರತ 121 ರನ್ಗಳಿಸಿತ್ತು. ರಾಹುಲ್ 53 ಹಾಗೂ ಗಿಲ್ 18 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದರು. 2ನೇ ದಿನವಾದ ಇಂದು ಗಿಲ್ 50 ರನ್ಗಳಿಸಿ ಔಟಾದರು. ರಾಹುಲ್ 197 ಎಸೆತಗಳಲ್ಲಿ 12 ಬೌಂಡರಿ ಸಹಿತ 100 ರನ್ಗಳಿಸಿದರು. ಇದು ಅವರ ವೃತ್ತಿ ಜೀವನದ 11ನೇ ಹಾಗೂ ಭಾರತದ ನೆಲದಲ್ಲಿ 2ನೇ ಶತಕವಾಗಿದೆ.
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಭಾರತ ತಂಡದ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನ 162ಕ್ಕೆ ಆಲೌಟ್ ಮಾಡಿದ್ದ ಟೀಮ್ ಇಂಡಿಯಾ, ಬ್ಯಾಟಿಂಗ್ನಲ್ಲೂ ವಿಂಡೀಸ್ ಬೌಲರ್ಗಳನ್ನ ಕಾಡಿದೆ. ಮೊದಲ ದಿನ 2 ವಿಕೆಟ್ ಕಳೆದುಕೊಂಡು 121 ರನ್ಗಳಿಸಿದ್ದ ಭಾರತ ತಂಡ, ಎರಡನೇ ದಿನ 448ರನ್ಗಳಿಸಿದೆ. ಇಡೀ ದಿನ ವೆಸ್ಟ್ ಇಂಡೀಸ್ ಬೌಲರ್ಗಳು ಕೇವಲ 3 ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ಮೂವರು ಭಾರತೀಯ ಬ್ಯಾಟರ್ಗಳು ಶತಕ ಸಿಡಿಸಿ ಮಿಂಚಿದರು.
ಮೊದಲ ದಿನವೇ ಬ್ಯಾಟಿಂಗ್ ಆರಂಭಿಸಿದ್ದ ಭಾರತ 121 ರನ್ಗಳಿಸಿತ್ತು. ರಾಹುಲ್ 53 ಹಾಗೂ ಗಿಲ್ 18 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದರು. 2ನೇ ದಿನವಾದ ಇಂದು ಗಿಲ್ 50 ರನ್ಗಳಿಸಿ ಔಟಾದರು. ರಾಹುಲ್ 197 ಎಸೆತಗಳಲ್ಲಿ 12 ಬೌಂಡರಿ ಸಹಿತ 100 ರನ್ಗಳಿಸಿದರು. ಇದು ಅವರ ವೃತ್ತಿ ಜೀವನದ 11ನೇ ಹಾಗೂ ಭಾರತದ ನೆಲದಲ್ಲಿ 2ನೇ ಶತಕವಾಗಿದೆ.
ರಾಹುಲ್ ವಿಕೆಟ್ ನಂತರ ನಂತರ ಒಂದಾದ ಜುರೆಲ್-ಜಡೇಜಾ 5ನೇ ವಿಕೆಟ್ ಜೊತೆಯಾಟದಲ್ಲಿ 206 ರನ್ಗಳ ಜೊತೆಯಾಟ ನಡೆಸಿದರು. ಈ ಇಬ್ಬರು ಬ್ಯಾಟರ್ಗಳು 55.1 ಓವರ್ಗಳ ಕಾಲ ವಿಂಡೀಸ್ ಬೌಲರ್ಗಳನ್ನ ಹೈರಾಗೊಳಿಸಿದರು. ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ಗಳೊಂದಿಗೆ 125 ರನ್ಗಳಿಸಿ ಔಟ್ ಆದರು. ಜುರೆಲ್ಗೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕವಾಗಿದೆ. ಜುರೆಲ್ ಬೆನ್ನಲ್ಲೇ ಜಡೇಜಾ ಕೂಡ ಶತಕ ಪೂರ್ಣಗೊಳಿಸಿದರು. 168 ಎಸೆತಗಳಲ್ಲಿ ಶತಕ ಪೂರೈಸಿದ ಜಡೇಜಾ ವೃತ್ತಿ ಜೀವನದ 6ನೇ ಶತಕ ದಾಖಲಿಸಿದ್ದಾರೆ.
ಜಡೇಜಾ 176 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ಗಳ ಸಹಿತ ಅಜೇಯ 104 ರನ್ಗಳಿಸಿದ್ದು 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಅಜೇಯ 9 ರನ್ಗಳಿಸಿದ್ದರು.
ರೋಸ್ಟನ್ ಚೇಸ್ 90ಕ್ಕೆ2, ಖಾರಿ ಪಿಯರ್ 91ಕ್ಕೆ1, ಜೊಮೆಲ್ ವಾರಿಕನ್ 102ಕ್ಕೆ1, ಜೇಡನ್ ಸೀಲ್ಸ್ 53ಕ್ಕೆ1 ವಿಕೆಟ್ ಪಡೆದರು.
October 03, 2025 5:17 PM IST