Last Updated:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆರಿಬಿಯನ್ ತಂಡದ ಅಗ್ರ ಕ್ರಮಾಂಕವನ್ನು ಸಿರಾಜ್ ಧೂಳೀಪಟ ಮಾಡಿದರೆ, ಮಧ್ಯಮ ಕ್ರಮಾಂಕವನ್ನ ಕುಲ್ದೀಪ್-ಬುಮ್ರಾ ಉಡೀಸ್ ಮಾಡಿದರು. ಭಾರತೀಯರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಓವರ್‌ಗಳಲ್ಲಿ 44.1 ಓವರ್‌ಗಳಲ್ಲಿ 162 ರನ್ಗಳಿಗೆ ಆಲೌಟ್ ಆಯಿತು.
ಅಹಮದಾಬಾದ್: ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ (Mohammed Siraj) ಮೊದಲ ದಿನವೇ ಆಕ್ರಕಣಕಾರಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆರಿಬಿಯನ್ ತಂಡದ ಅಗ್ರ ಕ್ರಮಾಂಕವನ್ನು ಸಿರಾಜ್ ಧೂಳೀಪಟ ಮಾಡಿದರೆ, ಮಧ್ಯಮ ಕ್ರಮಾಂಕವನ್ನ ಕುಲ್ದೀಪ್-ಬುಮ್ರಾ ಉಡೀಸ್ ಮಾಡಿದರು. ಭಾರತೀಯರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಓವರ್‌ಗಳಲ್ಲಿ 44.1 ಓವರ್‌ಗಳಲ್ಲಿ 162 ರನ್ಗಳಿಗೆ ಆಲೌಟ್ ಆಯಿತು.
ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ಗೆ ಸಿರಾಜ್ ಮೊದಲ ಆಘಾತ ನೀಡಿದರು. ತೇಜ್‌ನಾರಾಯಣ್ ಚಂದ್ರಪಾಲ್ ಖಾತೆ ತೆರೆಯದೇ ಜುರೆಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸಿರಾಜ್ ಬೆನ್ನಲ್ಳೇ ಬುಮ್ರಾ ವಿಂಡೀಸ್ಗೆ 2ನೇ ಆಘಾತ ನೀಡಿದರು. 7ನೇ ಓವರ್ನಲ್ಲಿ ಬುಮ್ರಾ 8 ರನ್ಗಳಿಸಿದ್ದ ಕ್ಯಾಂಪ್‌ಬೆಲ್ ವಿಕೆಟ್ ಉಡಾಯಿಸಿದರು. ಮತ್ತೆ 10 ಮತ್ತು 12 ನೇ ಓವರ್‌ಗಳಲ್ಲಿ ಸಿರಾಜ್ 2 ವಿಕೆಟ್ ಪಡೆದು ವಿಂಡೀಸ್ ಚೇತರಿಸಿಕೊಳ್ಳದಂತೆ ಮಾಡಿದರು. ಮೊದಲು ಬ್ರಾಂಡನ್ ಕಿಂಗ್ (13) ಅವರನ್ನು ಬೌಲ್ಡ್ ಮಾಡಿದ ಮಿಜಾಭಾಯ್, ನಂತರ ಅಲಿಕ್ ಅಥಾಂಜೆ 12ರನ್ಗಳಿಸಿ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು.
ನಂತರ ಬಂದ ವಿಕೆಟ್ ಕೀಪರ್ ಶಾಯ್ ಹೋಪ್ ಹಾಗೂ ನಾಯಕ ಚೇಸ್ 5ನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿದರು. ಉತ್ತಮವಾಗಿ ಜೊತೆಯಾಟ ಕಟ್ಟುತ್ತಿದ್ದ ಈ ಜೋಡಿಯನ್ನ ಕುಲ್ದೀಪ್ ಬೇರ್ಪಡಿಸಿದರು. 26 ರನ್ಗಳಿಸಿದ್ದ ಶಾಯ್ ಹೋಪರ್ರನ್ನ ಏಷ್ಯಾಕಪ್ ಹೀರೋ ಕುಲ್ದೀಪ್ ಯಾದವ್ ಬೌಲ್ಡ್ ಮಾಡಿದರು. 15 ರನ್ಗಳ ಅಂತರದಲ್ಲಿ ನಾಯಕ ರೋಸ್ಟನ್ ಚೇಸ್ 43 ಎಸೆತಗಳಲ್ಲಿ 24 ರನ್ಗಳಿಸಿ ಸಿರಾಜ್ಗೆ 4ನೇ ಬಲಿಯಾದರು.
ಈ ಹಂತದಲ್ಲಿ ಒಂದಾದ ಜಸ್ಟಿನ್ ಗ್ರೀವ್ಸ್ ಹಾಗೂ ಖಾರಿ ಪಿಯರ್ 7ನೇ ವಿಕೆಟ್ ಜೊತೆಯಾಟದಲ್ಲಿ39 ರನ್ ಸೇರಿಸಿದರು. ಈ ಹಂತದಲ್ಲಿ ಬೌಲಿಂಗ್ಗೆ ಆಗಮಿಸಿದ ವಾಷಿಂಗ್ಟನ್ ಸುಂದರ್ 34 ಎಸೆತಗಳಲ್ಲಿ 11 ರನ್ಗಳಿಸಿದ್ದ ಪಿಯರ್ರನ್ನ ಎಲ್ಬಿ ಬಲೆಗೆ ಬೀಳಿಸಿದರು. 48 ಎಸೆತಗಳಲ್ಲಿ 4 ಬೌಂಡರಿ ಸಹಿತ 32 ರನ್ಗಳಿಸಿದ ತಂಡದ ಗರಿಷ್ಠ ಸ್ಕೋರರ್ ಆಗಿದ್ದ ಗ್ರೀವ್ಸ್ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಜೊಮೆಲ್ ವಾರಿಕನ್ 8 ರನ್, ಜಹಾನ್ ಲೇನ್ 1ನರ್ಗಳಿಗೆ ಸೀಮಿತವಾದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ 42ಕ್ಕೆ3, ಮೊಹಮ್ಮದ್ ಸಿರಾಜ್ 40ಕ್ಕೆ4, ಕುಲ್ದೀಪ್ ಯಾದವ್ 25ಕ್ಕೆ2, ವಾಷಿಂಗ್ಟನ್ ಸುಂದರ್ 9ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಭಾರತದ ಆಡುವ XI: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ತೇಜ್‌ನಾರಾಯಣ್ ಚಂದ್ರಪಾಲ್, ಜಾನ್ ಕ್ಯಾಂಪ್‌ಬೆಲ್, ಅಲಿಕ್ ಅಥಾಂಜೆ, ಬ್ರಾಂಡನ್ ಕಿಂಗ್, ಶಾಯ್ ಹೋಪ್ (ವಿಕೀ), ರೋಸ್ಟನ್ ಚೇಸ್ (ನಾಉಲ), ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಜೋಹಾನ್ ಲೈನ್ ಮತ್ತು ಜೇಡನ್ ಸೀಲ್ಸ್.
Ahmedabad (Ahmedabad) [Ahmedabad],Ahmedabad,Gujarat
October 02, 2025 2:01 PM IST