Last Updated:
ಭಾರತವು ತನ್ನ ಮೊದಲ ಇನಿಂಗ್ಸ್‌ನಲ್ಲಿ 518/5 ರನ್ಸ್‌ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡವು 2ನೇ ದಿನ 4 ವಿಕೆಟ್ ಕಳೆದುಕೊಂಡಿದ್ದು, 140 ರನ್ಗಳಿಸಿದೆ. ಇನ್ನೂ 378 ರನ್ಸ್‌ಗಳ ಹಿನ್ನಡೆಯಲ್ಲಿದೆ.
ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಅಂತಿಮ ಮತ್ತು ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದ ಕೊನೆಗೆ ಭಾರತ ತಂಡ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದೆ. ಭಾರತವು ತನ್ನ ಮೊದಲ ಇನಿಂಗ್ಸ್‌ನಲ್ಲಿ 518/5 ರನ್ಸ್‌ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡವು 2ನೇ ದಿನ 4 ವಿಕೆಟ್ ಕಳೆದುಕೊಂಡಿದ್ದು, 140 ರನ್ಗಳಿಸಿದೆ. ಇನ್ನೂ 378 ರನ್ಸ್‌ಗಳ ಹಿನ್ನಡೆಯಲ್ಲಿದೆ.
ಭಾರತ ತಂಡ 2ನೇ ದಿನ 318ರನ್ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದತು. ಆದರೆ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ನಿನ್ನೆ 173 ರನ್ಗಳಿಸಿದ್ದ ಜೈಸ್ವಾಲ್ ಇಂದು 175 ರನ್ಗಳಿಸಿ ರನ್ಔಟ್ ಆದರು. ನಿನ್ನೆ 20 ರನ್ಗಳಿಸಿದ್ದ ಶುಭ್ಮನ್ ಗಿಲ್ ಇಂದು ತಮ್ಮ 10ನೇ ಶತಕ ಪೂರ್ಣಗೊಳಿಸಿದರು. 196 ಎಸೆತಗಳಲ್ಲಿ16 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನೊಂದಿಗೆ ಅಜೇಯ 129 ರನ್ಗಳಿಸಿದರು. ಇವರಿಬ್ಬರಿಗೆ ಸಾಥ್ ನೀಡಿದ ಸಾಯಿ ಸುದರ್ಶನ್ 87, ಧ್ರುವ್ ಜುರೆಲ್ 44, ನಿತೀಶ್ ರೆಡ್ಡಿ 43 ರನ್ಗಳಿಸಿ ತಂಡದ ಮೊತ್ತ 500 ರ ಗಡಿದಾಟಲು ನೆರವಾದರು. ಮೊದಲ ದಿನ 318 ರನ್ಗಳಿಸಿದ್ದ ಭಾರತ ಎರಡನೇ ದಿನ ಆ ಮೊತ್ತವನ್ನ 518ಕ್ಕೆ ಏರಿಸಿ ಡಿಕ್ಲೇರ್ ಘೋಷಿಸಿತು.
ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ನಾಯಕ ಶುಭ್ಮನ್ ಗಿಲ್ ಅವರೊಂದಿಗಿನ ಮಿಕ್ಸ್-ಅಪ್‌ನಿಂದಾಗಿ ಜೈಸ್ವಾಲ್ ರನ್ಔಟ್ ಆದರು. ಈ ಇನಿಂಗ್ಸ್‌ನಲ್ಲಿ ಜೈಸ್ವಾಲ್ ಸಂಯಮ ಮತ್ತು ಆಕ್ರಮಣಕಾರಿ ಆಟದ ಮೂಲಕ ಭಾರತದ ಇನಿಂಗ್ಸ್ ಅನ್ನು ಬಲಿಷ್ಠ ಮಾಡಿದ್ದರು. ಜೈಸ್ವಾಲ್‌ರ ನಂತರ ನಿತೀಶ್ ಕುಮಾರ್ ರೆಡ್ಡಿ ಅವರು 54 ಎಸೆತಗಳಲ್ಲಿ 43 ರನ್ಸ್‌ಗಳ ತ್ವರಿತ ಇನಿಂಗ್ಸ್ ಆಡಿದ ಅವರು, ಭಾರತದ ರನ್ ಗತಿ ಹೆಚ್ಚಿಸಿದರು. ಸರಣಿಯಲ್ಲಿ ತಮ್ಮ ಮೊದಲ ಶತಕ ಸಿಡಿಸಿದ ಗಿಲ್, ಭಾರತದ ಇನಿಂಗ್ಸ್ ಅನ್ನು ಸುರಕ್ಷಿತಗೊಳಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಕೂಡ 44 ರನ್ ಸಿಡಿಸಿ ಭಾರತದ ಸ್ಕೋರ್ ಅನ್ನು 500ಕ್ಕೆ ತಲುಪಿಸಲು ಸಹಾಯ ಮಾಡಿದರು.
ನಂತರ ವೆಸ್ಟ್ ಇಂಡೀಸ್ ತಂಡವು ತನ್ನ ಮೊದಲ ಇನಿಂಗ್ಸ್ ಅನ್ನು ಆರಂಭಿಸಿ, ಆರಂಭದಲ್ಲಿ ಉತ್ತಮ ಇಂಟೆಂಟ್ ತೋರಿಸಿತು. ಅಹಮದಾಬಾದ್‌ನ ಮೊದಲ ಟೆಸ್ಟ್‌ಗಿಂತಲೂ ಚೆನ್ನಾಗಿ ಬ್ಯಾಟಿಂಗ್ ಮಾಡಿದೆ. ಕೇವಲ 21ರನ್‌ಗಳಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಜಾನ್ ಕ್ಯಾಂಪ್ಬೆಲ್ 25 ಎಸೆತಗಳಲ್ಲಿ 10 ರನ್ಗಳಿಸಿ ಜಡೇಜಾ ಬೌಲಿಂಗ್ನಲ್ಲಿ ಸುದರ್ಶನ್ಗೆ ಕ್ಯಾಚ್ ನೀಡಿದರು.
ಆದರೆ 2ನೇ ವಿಕೆಟ್ ತೇಜ್ನರೈನ್ ಚಂದರ್ಪಾಲ್ ಮತ್ತು ಅಲಿಕ್ ಅಥನಾಜ್ ಅವರ ನಡುವೆ 20 ಓವರ್‌ಗಳ ಜೊತೆಯಾಟ ನಡೆಸಿದರು. ಎರಡನೇ ವಿಕೆಟ್ ಬಿದ್ದ ನಂತರ ಮೂರನೇ ಮತ್ತು ನಾಲ್ಕನೇ ವಿಕೆಟ್‌ಗಳನ್ನ ಬೇಗ ಕಳೆದುಕೊಂಡರು. 2ನೇ ದಿನದ ಕೊನೆಗೆ ಅವರು 140 ರನ್ಸ್‌ಗೆ 4 ವಿಕೆಟ್ ಕಳೆದುಕೊಂಡಿದ್ದು, ಇನ್ನೂ 378 ರನ್ಸ್ ಹಿನ್ನಡೆಯಲ್ಲಿದ್ದಾರೆ.
ಈ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಉತ್ತಮ ಸ್ಥಿತಿಯಲ್ಲಿದ್ದು, ಸರಣಿಯನ್ನು 2-0ರಿಂದ ಗೆಲ್ಲುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ತಂಡಕ್ಕೆ ಮೊದಲ ಇನಿಂಗ್ಸ್ ಅನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಭಾರತದ ಬ್ಯಾಟಿಂಗ್ ಪ್ರದರ್ಶನವು ಅಭಿಮಾನಿಗಳನ್ನು ಖುಷಿಪಡಿಸಿದ್ದು, ಮೂರನೇ ದಿನದಲ್ಲಿ ಭಾರತದ ಬೌಲರ್‌ಗಳ ಮೇಲೆ ನಿರೀಕ್ಷೆಗಳು ಹೆಚ್ಚಿದ್ದು, ಆದಷ್ಟು ಬೇಗೆ ಆಲೌಟ್ ಮಾಡಲು ಕಾಯುತ್ತಿದ್ದಾರೆ.
ಭಾರತದ ಪರ ರವೀಂದ್ರ ಜಡೇಜಾ 37ಕ್ಕೆ3 ವಿಕೆಟ್ ಪಡೆದು ಮಿಂಚಿದರೆ, ಕುಲ್ದೀಪ್ ಯಾದವ್ 45ಕ್ಕೆ1 ವಿಕೆಟ್ ಪಡೆದರು.
October 11, 2025 5:41 PM IST