ಆದರೆ, ನಮ್ಮ ಹುಡುಗಿಯರ ಪ್ಲ್ಯಾನ್ ಬೇರೆಯೇ ಇತ್ತು. ಅದರಲ್ಲೂ ಜೆಮಿಮಾ ರೊಡ್ರಿಗಸ್ ಆಡಿದ ಆಟ ಇದೆಯಲ್ಲಾ, ಅದನ್ನು ಮರೆಯೋಕೆ ಸಾಧ್ಯವೇ ಇಲ್ಲ. 134 ಬಾಲ್ನಲ್ಲಿ 127 ರನ್, ಅದೂ ನಾಟ್ ಔಟ್! ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು, ಆಸ್ಟ್ರೇಲಿಯಾ ಬೌಲರ್ಗಳನ್ನು ಬೆಂಡೆತ್ತಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಈಗ ದೇಶದ ಮೂಲೆ ಮೂಲೆಯಲ್ಲೂ ‘ಜೆಮಿಮಾ… ಜೆಮಿಮಾ…’ ಅನ್ನೋ ಜಪ ಶುರುವಾಗಿದೆ.