ಪಂತ್ ಈ ಸರಣಿಗೂ ಮುನ್ನ, ಅಕ್ಟೋಬರ್ 25 ರಿಂದ ತವರಿನಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ವಿರುದ್ಧದ ರಣಜಿ ಟ್ರೋಫಿಯಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಬಹುದು ಎಂದು ನಂಬಲಾಗಿತ್ತು. ಆದರೆ ರಣಜಿ ಪಂದ್ಯ ಮುಗಿದ ಕೇವಲ 2 ದಿನಗಳ ನಂತರ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಮೊದಲ ಪಂದ್ಯ ಪ್ರಾರಂಭವಾಗುತ್ತಿರುವುದರಿಂದ ಈಗ ಪರಿಸ್ಥಿತಿ ಬದಲಾಗಬಹುದು.
ಜುಲೈ ಅಂತ್ಯದಲ್ಲಿ ನಡೆದ ಓಲ್ಡ್ ಟ್ರಾಫರ್ಡ್ ಟೆಸ್ಟ್‌ನಲ್ಲಿ ಬಲಗಾಲಿನಲ್ಲಿ ಮೂಳೆ ಮುರಿದುಕೊಂಡ ಪಂತ್, ಅಕ್ಟೋಬರ್ ಆರಂಭದಲ್ಲಿ ಪುನಶ್ಚೇತನದ ಅಂತಿಮ ಹಂತದಲ್ಲಿದ್ದರು, ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್‌ನೆಸ್ ಮೌಲ್ಯಮಾಪನಕ್ಕೆ ಸಿದ್ಧರಾಗಿದ್ದರು. ಅವರ ಪಾದವನ್ನು ಒಂದು ತಿಂಗಳ ಹಿಂದೆ ಹಾಕಲಾಗಿದ್ದ ಬ್ಯಾಂಡೇಜ್ ತೆಗೆದುಹಾಕಲಾಗಿದ್ದು, ಅವರು ಪಾದವನ್ನು ಬಲಪಡಿಸಲು ಚಲನಶೀಲತೆ ವ್ಯಾಯಾಮ ಮತ್ತು ತೂಕ ತರಬೇತಿಯನ್ನು ಮಾಡುತ್ತಿದ್ದರು. ಇದೀಗ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.
ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅಂಡರ್ 19 ತಂಡದ ಕ್ಯಾಪ್ಟನ್ ಆಯುಷ್ ಮ್ಹಾತ್ರೆ, ಎನ್ ಜಗದೀಶನ್, ಅನ್ಶುಲ್ ಕಾಂಬೋಜ್, ಯಶ್ ಠಾಕೂರ್, ರಜತ್ ಪಾಟೀದಾರ್, ಆಯುಷ್ ಬದೋನಿ,ಸರನ್ಸ್ ಜೈನ್ ಆಡಲಿದ್ದಾರೆ. 2ನೇ ಪಂದ್ಯದಲ್ಲಿ ಇವರ ಬದಲಿಗೆ ಕೆಎಲ್ ರಾಹುಲ್, ಸಿರಾಜ್, ಜುರೆಲ್, ಖಲೀಲ್ ಅಹ್ಮದ್, ರುತುರಾಜ್ ಗಾಯಕ್ವಾಡ್, ಪ್ರಸಿದ್ ಕೃಷ್ಣ, ಆಕಾಶ್ ದೀಪ್, ಗುರ್ನೂರ್ ಬ್ರಾರ್ ಆಡಲಿದ್ದಾರೆ. ಮೊದಲ ಪಂದ್ಯದ ವೇಳೆ ಎರಡನೇ ಸುತ್ತಿನ ರಣಜಿ ಪಂದ್ಯ ಇರುವುದರಿಂದ ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡಿ, 2ನೇ ಪಂದ್ಯದಲ್ಲಿ ಆಸೀಸ್ ಪ್ರವಾಸದಿಂದ ಬಂದವರಿಗೆ ಸೇರಿ ಹಿರಿಯ ದೇಶಿ ಆಟಗಾರರಿಗೆ ಅವಕಾಶ ನೀಡಲಾಗಿದೆ.
ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಆಯುಷ್ ಮ್ಹಾತ್ರೆ, ಎನ್ ಜಗದೀಶನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸೂತರ್, ಅಂಶುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ,ಸರನ್ಸ್ ಜೈನ್
ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸೂತರ್, ಖಲೀಲ್ ಅಹ್ಮದ್, ಗುರ್ನೂರ್ ಬ್ರಾರ್, ಅಭಿಮನ್ಯು ಈಶ್ವರನ್, ಪ್ರಸಿಧ್ ಕೃಷ್ಣ,ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
October 21, 2025 1:42 PM IST
India A: ಕಮ್ಬ್ಯಾಕ್ ಮಾಡುತ್ತಿದ್ದಂತೆ ರಿಷಭ್ ಪಂತ್ಗೆ ಒಲಿದ ನಾಯಕತ್ವ! ದಕ್ಷಿಣ ಅಫ್ರಿಕಾ ಎ ವಿರುದ್ಧದ ಟೆಸ್ಟ್ ಸರಣಿ ಹೀಗಿದೆ ಭಾರತ ತಂಡ