Last Updated:
3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 9 ವಿಕೆಟ್ ಕಳೆದುಕೊಂಡು 136ರನ್ಗಳಿಸಿತು. ಆದರೆ DLS ಕಾರಣದಿಂದಾಗಿ ಆಸ್ಟ್ರೇಲಿಯಾಕ್ಕೆ 5 ರನ್ ಕಡಿತಗೊಳಿಸಿ 131 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಈ ಸಾಧಾರಣ ಗುರಿಯನ್ನ ಕಾಂಗರೂ ಪಡೆ 21.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಪರ್ತ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ (ODI Match) ಭಾರತದ ವಿರುದ್ಧ ಆಸ್ಟ್ರೇಲಿಯಾ (India vs Australia) ತಂಡ 7 ವಿಕೆಟ್ಗಳ ಸುಲಭ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಮಳೆಯಿಂದಾಗಿ ಪಂದ್ಯವನ್ನು ತಲಾ 26 ಓವರ್‌ಗಳಿಗೆ ಇಳಿಸಲಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 9 ವಿಕೆಟ್ ಕಳೆದುಕೊಂಡು 136ರನ್ಗಳಿಸಿತು. ಆದರೆ DLS ಕಾರಣದಿಂದಾಗಿ ಆಸ್ಟ್ರೇಲಿಯಾಕ್ಕೆ 5 ರನ್ ಕಡಿತಗೊಳಿಸಿ 131 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಈ ಸಾಧಾರಣ ಗುರಿಯನ್ನ ಕಾಂಗರೂ ಪಡೆ 21.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
131 ರನ್‌ಗಳ ಸಣ್ಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಎಡವಿತು. ಅರ್ಷದೀಪ್ ಬೌಲಿಂಗ್ನಲ್ಲಿ ಟ್ರಾವಿಸ್ ಹೆಡ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕೇವಲ 8 ರನ್ಗಳಿಸಿ ಔಟಾದರು. ಆದರೆ ನಾಯಕ ಮಿಚೆಲ್ ಮಾರ್ಷ್ ಮಾತ್ರ ಆರಂಭದಿಂದಲೇ ಅಬ್ಬರದ ಆಟ ಪ್ರದರ್ಶನ ನೀಡಿದರು. ಮ್ಯಾಥ್ಯೂ ಶಾರ್ಟ್ ಜೊತೆಗೆ 34 ರನ್‌ಗಳ ಜೊತೆಯಾಟ ನೀಡಿದರು. ಆದರೆ ಶಾರ್ಟ್ ಕೂಡ ಕೇವಲ 8 ರನ್ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ಹಂತದಲ್ಲಿ ನಾಯಕನ ಜೊತೆಗೂಡಿದ ವಿಕೆಟ್ ಕೀಪರ್ ಜೋಶ್ ಫಿಲಪ್ 3ನೇ ವಿಕೆಟ್ಗೆ 45 ಎಸೆತಗಳಲ್ಲಿ 55 ರನ್‌ಗಳ ಜೊತೆಯಾಟ ನೀಡಿದರು. ಟಿ20 ಯಂತೆ ಬ್ಯಾಟ್ ಬೀಸಿದ ಫಿಲಿಪ್ 29 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಹಿತ 37 ರನ್ಗಳಿಸಿ ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್ಗೆ ಕ್ಯಾಚ್ ನೀಡಿ ಔಟ್ ಆದರು.
ನಾಲ್ಕನೇ ವಿಕೆಟ್ಗೆ ಒಂದಾದ ಮಿಚೆಲ್ ಮಾರ್ಷ್ ಹಾಗೂ ಮ್ಯಾಟ್ ರೆನ್ಶಾ ಮುರಿಯದ 4ನೇ ವಿಕೆಟ್ಗೆ 33 ರನ್ ಸಿಡಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿರು. ಮಾರ್ಷ್ 52 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸೇರಿದಂತೆ ಅಜೇಯ 46 ರನ್ ಹಾಗೂ ರೆನ್ಶಾ 24 ಎಸೆತಗಳಲ್ಲಿ ಅಜೇಯ 21 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.
ಭಾರತದ ಪರ ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.
October 19, 2025 4:47 PM IST