India vs England: ಆಂಗ್ಲರಿಗೆ ಶುರುವಾಗಿದೆ ಬುಮ್ರಾ ಭಯ! ಇಂಗ್ಲೆಂಡ್ ತಂಡದಿಂದ ಪಿಚ್ ಕ್ಯೂರೇಟರ್​​ಗೆ ವಿಶೇಷ ಮನವಿ | India vs England Leeds Pitch Expected to Favor Batsmen Says Curator

India vs England: ಆಂಗ್ಲರಿಗೆ ಶುರುವಾಗಿದೆ ಬುಮ್ರಾ ಭಯ! ಇಂಗ್ಲೆಂಡ್ ತಂಡದಿಂದ ಪಿಚ್ ಕ್ಯೂರೇಟರ್​​ಗೆ ವಿಶೇಷ ಮನವಿ | India vs England Leeds Pitch Expected to Favor Batsmen Says Curator

Last Updated:

ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಇದ್ದಾರೆ, ಅವರು ಅಪಾಯಕಾರಿಯಾಗಿ ಬೌಲಿಂಗ್ ಮಾಡುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ತಂಡವನ್ನು ಸಂಪೂರ್ಣವಾಗಿ ವಿನಾಶ ಮಾಡಬಹುದು. ಇದೇ ಕಾರಣದಿಂದ ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸಿಲು ತಿಳಿಸಿದೆ ಎಂಬ ಚರ್ಚೆ ನಡೆಯುತ್ತಿದೆ.

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ

IND vs ENG: ಟೀಮ್ ಇಂಡಿಯಾ ಇಂಗ್ಲೆಂಡ್ (India vs England) ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಲೀಡ್ಸ್‌ನಲ್ಲಿ (Leads Test) ಆಡಬೇಕಾಗಿದೆ. ಈ ಟೆಸ್ಟ್ ಪಂದ್ಯ ಜೂನ್ 20 ರಿಂದ ಪ್ರಾರಂಭವಾಗಲಿದೆ. ಈ ಟೆಸ್ಟ್ ಪಂದ್ಯಕ್ಕೂ ಮೊದಲು, ಲೀಡ್ಸ್‌ನ ಗ್ರೌಂಡ್ ಹೆಡ್ ರಿಚರ್ಡ್ ರಾಬಿನ್ಸನ್ (Richard Robinson) ಪಿಚ್ ಬಗ್ಗೆ ಮಹತ್ವದ ಅಂಶಗಳನ್ನ ಬಹಿರಂಗಪಡಿಸಿದ್ದಾರೆ. ಇಂಗ್ಲೆಂಡ್ ಲೀಡ್ಸ್‌ನಲ್ಲಿ ಬ್ಯಾಟ್ಸ್‌ಮನ್ ಸ್ನೇಹಿ ಪಿಚ್ ಬಯಸುತ್ತಿದೆ ಎಂದು ಹೇಳಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಗ್ರೀನ್ ಪಿಚ್ ಬದಲಿ ಬ್ಯಾಟಿಂಗ್ ಸ್ನೇಹಿ ವಿಕೆಟ್

ಇಂಗ್ಲೆಂಡ್ ತಂಡದ ಈ ನಿರ್ಧಾರವು ಭಾರತದ ಬೌಲಿಂಗ್ ಘಟಕಕ್ಕೆ ಹೆದರುತ್ತಿದೆಯೇ ಎಂಬ ದೊಡ್ಡ ಪ್ರಶ್ನೆಯನ್ನ ಹುಟ್ಟುಹಾಕಿದೆ. ಸದಾ ಹಸಿರು ಪಿಚ್‌ನಲ್ಲಿ ಆಡುವ ಇಂಗ್ಲೆಂಡ್ ತಂಡವು ಲೀಡ್ಸ್‌ನ ಫ್ಲಾಟ್ ಪಿಚ್‌ನಲ್ಲಿ ಆಡಲು ಏಕೆ ಬಯಸುತ್ತಿದೆ? ಎಂಬು ಕುತೂಹಲ ಕೆರಳಿಸಿದೆ. ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾವು ಉತ್ತಮ ವೇಗದ ಬೌಲಿಂಗ್ ತಂಡವನ್ನು ಹೊಂದಿದೆ ಎಂದು ತಿಳಿದಿದೆ, ಇದು ಹಸಿರು ಪಿಚ್‌ನಲ್ಲಿ ನಮ್ಮ ವೇಗಿಗಳು ಆಂಗ್ಲರಿಗೆ ಸಮಸ್ಯೆಯನ್ನುಂಟು ಮಾಡಬಹುದು ಎಂದು ಮನವರಿಕೆ ಮಾಡಿಕೊಂಡಿದೆ.

ಬುಮ್ರಾ-ಸಿರಾಜ್​​ಗೆ ಬೆಚ್ಚಿದ್ರಾ ಆಂಗ್ಲರು

ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಇದ್ದಾರೆ, ಅವರು ಅಪಾಯಕಾರಿಯಾಗಿ ಬೌಲಿಂಗ್ ಮಾಡುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ತಂಡವನ್ನು ಸಂಪೂರ್ಣವಾಗಿ ವಿನಾಶ ಮಾಡಬಹುದು. ಇದೇ ಕಾರಣದಿಂದ ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸಿಲು ತಿಳಿಸಿದೆ ಎಂಬ ಚರ್ಚೆ ನಡೆಯುತ್ತಿದೆ.

ಭಾರತಕ್ಕೆ ಲಾಭ

ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪ್ರಕಾರ, ರಿಚರ್ಡ್ ರಾಬಿನ್ಸನ್, ‘ಚೆಂಡು ಸರಿಯಾಗಿ ಬ್ಯಾಟ್‌ಗೆ ಬರಲು ಉತ್ತಮ ಪಿಚ್ ಬೇಕೆಂದು ಮ್ಯಾನೇಜ್​ಮೆಂಟ್ ನಮಗೆ ತಿಳಿಸಿದೆ. ಇಲ್ಲಿ ಮೊದಲ ದಿನದಂದು ವೇಗದ ಬೌಲರ್‌ಗಳಿಗೆ ಸಾಕಷ್ಟು ಸಹಾಯ ಸಿಗುತ್ತದೆ. ಆದರೆ ಹೆಚ್ಚಿನ ಶಾಖದಿಂದಾಗಿ ಪಿಚ್ ನಂತರ ಫ್ಲಾಟ್ ಆಗಲಿದೆ. ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಉಪಯುಕ್ತವೆಂದು ಸಾಬೀತಾದರೆ, ಇಂಗ್ಲೆಂಡ್ ಕೂಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಆತಿಥೇಯ ತಂಡದ ಬೌಲಿಂಗ್ ತಂಡವು ಹೆಚ್ಚು ಅನುಭವಿಗಳಾಗಿಲ್ಲ. ಭಾರತೀಯ ಬ್ಯಾಟ್ಸ್‌ಮನ್‌ಗಳು ಇದರ ಲಾಭವನ್ನು ಪಡೆಯಬಹುದು. ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್, ಶುಭಮನ್ ಗಿಲ್ ಫ್ಲಾಟ್ ಪಿಚ್ ಪಡೆದರೆ, ಈ ಆಟಗಾರರು ರನ್‌ಗಳ ಮಳೆ ಸುರಿಸಬಹುದು ಎಂಬ ಮಾತು ಸಹಾ ಕೇಳಿಬರುತ್ತಿದೆ.

18 ವರ್ಷಗಳ ಬಳಿಕ ಸರಣಿ ಗೆಲ್ಲಲು ಭಾರತ ಚಿಂತನೆ

18 ವರ್ಷಗಳ ಹಿಂದೆ ಟೀಮ್ ಇಂಡಿಯಾ ಕೊನೆಯ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಇಂಗ್ಲೆಂಡ್‌ನಲ್ಲಿ ಈ ಎರಡೂ ತಂಡಗಳ ನಡುವೆ ನಡೆದ ಕೊನೆಯ ಟೆಸ್ಟ್ ಸರಣಿ 2-2 ಡ್ರಾದಲ್ಲಿ ಕೊನೆಗೊಂಡಿತು. ಈಗ, ಈ ಸರಣಿಯ ಆರಂಭಕ್ಕೂ ಮುನ್ನ, ಲೀಡ್ಸ್ ಪಿಚ್‌ನ ಕುರಿತಾದ ಸುದ್ದಿಗಳು ನಿಜವಾಗಿಯೂ ಸರಣಿಯನ್ನು ಗೆಲ್ಲುವ ಟೀಮ್ ಇಂಡಿಯಾದ ಭರವಸೆಯನ್ನು ಹೆಚ್ಚಿಸುತ್ತವೆ. ಲೀಡ್ಸ್‌ನಲ್ಲಿ ಟೀಮ್ ಇಂಡಿಯಾ ಯಾವ ಪವಾಡವನ್ನು ಮಾಡುತ್ತದೆ ಎಂಬುದನ್ನು ನೋಡುವುದು ಮುಖ್ಯವಾಗಿರುತ್ತದೆ.