Last Updated:
ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯ ಸೋತ ಬಳಿಕ ಭಾರತದ ಇಬ್ಬರು ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ 4ನೇ ಪಂದ್ಯ ಆಡ್ತಾರಾ ಇಲ್ವಾ ಎಂಬ ಕುರಿತು ಅಭಿಮಾನಿಗಳಲ್ಲಿ ಆತಂಕ ಉಂಟಾಗಿದೆ.
ಸಚಿನ್–ಆಂಡರ್ಸನ್ (Anderson-Sachin) ಸರಣಿಯ ಮೂರನೇ ಪಂದ್ಯವನ್ನು ಸೋತ ಬಳಿಕ ಜುಲೈ 23 ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಸರಣಿಗೆ ಟೀಂ ಇಂಡಿಯಾ (Team India) ಸಜ್ಜಾಗುತ್ತಿವೆ. ಈ ನಡುವೆ, ಭಾರತದ ಇಬ್ಬರು ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ರಿಷಭ್ ಪಂತ್ (Rishabh Pant) 4ನೇ ಪಂದ್ಯ ಆಡ್ತಾರಾ ಇಲ್ವಾ ಎಂಬ ಕುರಿತು ಅಭಿಮಾನಿಗಳಲ್ಲಿ ಆತಂಕ ಉಂಟಾಗಿದೆ.
ಸರಣಿ ಆರಂಭಕ್ಕೆ ಮುನ್ನವೇ ಬುಮ್ರಾ ಅವರು ಕೇವಲ 3 ಪಂದ್ಯಗಳಲ್ಲಿ ಆಡುವುದಾಗಿ ತಿಳಿಸಿದ್ದರು. ಈಗಾಗಲೇ 2 ಪಂದ್ಯಗಳಲ್ಲಿ ಆಡಿದ್ದಾರೆ. ಆ ನಿಟ್ಟಿನಲ್ಲಿ ನಾಲ್ಕನೇ ಪಂದ್ಯವನ್ನು ಆಡ್ತಾರ ಇಲ್ವಾ ಎಂಬ ಗೊಂದಲ ಉಂಟಾಗಿದೆ. ಮಾತ್ರವಲ್ಲ, ಕಳೆದ ಪಂದ್ಯದಲ್ಲಿ ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದ ರಿಷಭ್ ಪಂತ್ ಮುಂದಿನ ಪಂದ್ಯಕ್ಕೆ ಲಭ್ಯರಿರುವ ಸಾಧ್ಯತೆ ಇದೆ.
ಲಾರ್ಡ್ಸ್ ಪಂದ್ಯ ಸೋತ ಬಳಿಕ ಟೀಂ ಇಂಡಿಯಾ ಸರಣಿಯಲ್ಲಿ 1-2 ರ ಹಿನ್ನಡೆ ಅನುಭವಿಸುತ್ತಿದೆ. ಲಾರ್ಡ್ಸ್ ಪಂದ್ಯದ ಬಳಿಕ ಶುಭ್ಮನ್ ಗಿಲ್ ಅವರಿಗೆ ಮುಂದಿನ ಪಂದ್ಯಕ್ಕೆ ಬುಮ್ರಾ ಲಭ್ಯತೆಯ ಕುರಿತು ಪ್ರಶ್ನೆ ಕೇಳಲಾಯಿತು. ಆದ್ರೆ, ಶುಭ್ಮನ್ ಗಿಲ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಿಲ್ಲ.
ಲಾರ್ಡ್ಸ್ ಪಂದ್ಯದಲ್ಲಿ ಕೀಪಿಂಗ್ ಮಾಡುವಾಗ ರಿಷಭ್ ಪಂತ್ ಗಾಯಗೊಂಡಿದ್ದರು. ಆದ್ರೆ, ಎರಡೂ ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ಪಂತ್ ಕೀಪಿಂಗ್ನಿಂದ ದೂರ ಉಳಿದಿದ್ದರು. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಧ್ರುವ್ ಜುರೆಲ್ ಅವರ ಸ್ಥಾನದಲ್ಲಿ ಕೀಪಿಂಗ್ ಮಾಡಿದ್ದರು. ಆದ್ರೆ, ಪಂತ್ ಮೊದಲ ಇನ್ನಿಂಗ್ಸ್ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿ ಗಮನಸೆಳೆದಿದ್ದರು.
ಭಾರತ 4ನೇ ಟೆಸ್ಟ್‌ನಲ್ಲಿ 22 ರನ್‌ಗಳಿಂದ ಸೋತ ಬಳಿಕ ಸತತ ಎರಡನೇ ಟೆಸ್ಟ್‌ಗೆ ಬುಮ್ರಾ ಅವರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆ ಇದೆಯೇ ಎಂದು ಕೇಳಿದಾಗ, ಗಿಲ್ ನಿಗೂಢ ಪ್ರತಿಕ್ರಿಯೆ ನೀಡಿದರು. “ನೀವು ಶೀಘ್ರದಲ್ಲೇ ಅದರ ಬಗ್ಗೆ ತಿಳಿದುಕೊಳ್ಳುವಿರಿ” ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಗಿಲ್ ಉತ್ತರಿಸಿದರು. ಆದಾಗ್ಯೂ, ಪಂತ್ ಲಭ್ಯತೆಯ ಬಗ್ಗೆ ಅವರಿಗೆ ಸಾಕಷ್ಟು ವಿಶ್ವಾಸವಿತ್ತು. “ರಿಷಭ್ ಸ್ಕ್ಯಾನ್‌ಗೆ ಒಳಗಾಗಿದ್ದರು. ಯಾವುದೇ ದೊಡ್ಡ ಗಾಯವಾಗಿಲ್ಲ, ಆದ್ದರಿಂದ ಅವರು ಮ್ಯಾಂಚೆಸ್ಟರ್‌ನಲ್ಲಿ ನಾಲ್ಕನೇ ಟೆಸ್ಟ್ ಆಡಲಿದ್ದಾರೆ” ಎಂದು ಗಿಲ್ ಹೇಳಿದ್ದರು.
July 16, 2025 6:09 PM IST