Last Updated:
ಕೊನೆಯ ದಿನ ಇಂಗ್ಲೆಂಡ್ ಗೆಲ್ಲಲು ಕೇವಲ 35 ರನ್ಗಳಿಸಬೇಕಿತ್ತು. ಸ್ಫೋಟಕ ಬ್ಯಾಟರ್ ಜೇಮಿ ಸ್ಮಿತ್ ಹಾಗೂ ಜೇಮಿ ಓವರ್ಟನ್ ಕ್ರೀಸ್ನಲ್ಲಿದ್ದರು. ಆದರೆ ಭಾರತೀಯ ಬೌಲರ್‌ಗಳಾದ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕೊನೆಯ ದಿನದಂದು ಅದ್ಭುತ ಬೌಲಿಂಗ್ ಮಾಡಿ 35 ರನ್‌ಗಳನ್ನು ಯಶಸ್ವಿ ಡಿಫೆಂಡ್ ಮಾಡಿಕೊಂಡು 6 ರನ್‌ಗಳ ಗೆಲುವಿಗೆ ಕಾರಣರಾದರು.
ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಸ್ಮರಣೀಯ ಗೆಲುವು ಸಾಧಿಸಿತು. ಸೋಮವಾರ ನಡೆದ ಇಂಗ್ಲೆಂಡ್ (India vs England) ವಿರುದ್ಧದ ಕೊನೆಯ ಟೆಸ್ಟ್ ಅನ್ನು 6 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಐದು ಟೆಸ್ಟ್ ಸರಣಿಯನ್ನು 2-2 ರಲ್ಲಿ ಸಮಬಲಗೊಳಿಸಿತು. ಕೊನೆಯ ದಿನದಾಟವನ್ನು 339/6 ಸ್ಕೋರ್‌ನೊಂದಿಗೆ ಆರಂಭಿಸಿದ ಇಂಗ್ಲೆಂಡ್ 367 ರನ್‌ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಸಿರಾಜ್ (5/104) (Mohammed Siraj) ಐದು ವಿಕೆಟ್ ಪಡೆಯುವರೊಂದಿಗೆ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಸಿರಾಜ್ ಜೊತೆಗೆ ಪ್ರಸಿದ್ಧ್ ಕೃಷ್ಣ (4/126) ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಆಕಾಶ್ ದೀಪ್ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಕೊನೆಯ ದಿನ ಇಂಗ್ಲೆಂಡ್ ಗೆಲ್ಲಲು ಕೇವಲ 35 ರನ್ಗಳಿಸಬೇಕಿತ್ತು. ಸ್ಫೋಟಕ ಬ್ಯಾಟರ್ ಜೇಮಿ ಸ್ಮಿತ್ ಹಾಗೂ ಜೇಮಿ ಓವರ್ಟನ್ ಕ್ರೀಸ್ನಲ್ಲಿದ್ದರು. ಆದರೆ ಭಾರತೀಯ ಬೌಲರ್‌ಗಳಾದ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕೊನೆಯ ದಿನದಂದು ಅದ್ಭುತ ಬೌಲಿಂಗ್ ಮಾಡಿ 35 ರನ್‌ಗಳನ್ನು ಯಶಸ್ವಿ ಡಿಫೆಂಡ್ ಮಾಡಿಕೊಂಡು 6 ರನ್‌ಗಳ ಗೆಲುವಿಗೆ ಕಾರಣರಾದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 224 ರನ್‌ಗಳನ್ನು ಗಳಿಸಿತು. ಇಂಗ್ಲೆಂಡ್ 247 ರನ್‌ಗಳಿಗೆ ಆಲೌಟ್ ಆಯಿತು. ನಂತರ, ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 396 ರನ್‌ಗಳ ಬೃಹತ್ ಸ್ಕೋರ್ ಗಳಿಸಿ 374 ರನ್‌ಗಳ ಗುರಿಯನ್ನು ನೀಡಿತ್ತು.
ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಗೆಲುವಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅವರು ಟೀಮ್ ಇಂಡಿಯಾವನ್ನು ಹೊಗಳಿ ಟ್ವೀಟ್ ಮಾಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ‘ನಾವು ಕೆಲವನ್ನು(ಪಂದ್ಯ) ಗೆಲ್ಲುತ್ತೇವೆ.. ಕೆಲವನ್ನು ಸೋಲುತ್ತೇವೆ.. ಆದರೆ ಎಂದಿಗೂ ಸೋಲಿಗೆ ಶರಣಾಗಲಿಲ್ಲ. ವೆಲ್ಡನ್ ಬಾಯ್ಸ್’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗೌತಮ್ ಗಂಭೀರ್ ಕೋಚ್ ಆದ ನಂತರ, ಭಾರತವು ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 0-3 ಅಂತರದ ಸೋಲನ್ನು ಎದುರಿಸಬೇಕಾಯಿತು, ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು 1-3 ಅಂತರದಿಂದ ಕಳೆದುಕೊಂಡಿತು. ಅಂತಹ ಪರಿಸ್ಥಿತಿಯಲ್ಲಿ, ಗಂಭೀರ್ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದವು, ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪ್ರದರ್ಶನವು ನಿರಾಶಾದಾಯಕವಾಗಿದ್ದರೆ, ಬಹುಶಃ ಬಿಸಿಸಿಐ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ, ಯಂಗ್ ಇಂಡಿಯಾ ನಿರೀಕ್ಷೆಗಳಿಗೆ ಹುಸಿಗೊಳಿಸಿದೆ. ಹೊಸದಾಗಿ ನೇಮಕಗೊಂಡ ನಾಯಕ ಶುಭ್ಮನ್ ಗಿಲ್ ನೇತೃತ್ವದ ಹೊಸದಾಗಿ ನೇಮಕಗೊಂಡ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಂಡಿದೆ.
ಸರಣಿಯಲ್ಲಿ ಭಾರತದ ಪ್ರದರ್ಶನ
ಯುವ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸಗೊಂಡಿದ್ದ ಟೀಮ್ ಇಂಡಿಯಾ ಸೋಲಿನೊಂದಿಗೆ ಸರಣಿಯನ್ನಾರಂಭಿಸಿತ್ತು. ಹೆಡಿಂಗ್ಲೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 372 ರನ್‌ಗಳ ಬೃಹತ್ ಗುರಿಯನ್ನ ಚೇಸ್ ಮಾಡಿ ದಾಖಲೆ ಬರೆದಿತ್ತು. ಆದರೆ ಬರ್ಮಿಂಗ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ತಿರುಗಿಬಿದ್ದ ಭಾರತ ತಂಡ 336 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತ್ತು. ಇದು ಭಾರತಕ್ಕೆ ಆ ಮೈದಾನದಲ್ಲಿ ಸಿಕ್ಕಂತಹ ಮೊದಲ ಜಯವಾಗಿತ್ತು. ನಂತರ ಲಾರ್ಡ್ಸ್ನಲ್ಲಿ ನಡೆದ 3ನೇ ಪಂದ್ಯದಲ್ಲಿ ಕೇವಲ 22 ರನ್‌ಗಳಿಂದ ಸೋಲು 1-2ರಲ್ಲಿ ಹಿನ್ನಡೆ ಅನುಭವಿಸಿತ್ತು. ಕೇವಲ 193 ರನ್‌ಗಳ ಗುರಿ ಬೆನ್ನಟ್ಟಲಾಗದೇ ಭಾರತ ಸೋಲು ಕಂಡಿದ್ದು ನಿರಾಶೆ ಮೂಡಿಸಿತ್ತು.
ನಂತರ ನಾಲ್ಕನೇ ಪಂದ್ಯದಲ್ಲಿ ಓಲ್ಡ್ ಟ್ರಾಫರ್ಡ್ನಲ್ಲಿ ಜಡೇಜಾ, ರಾಹುಲ್, ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ ಅಮೋಘ ಆಟವಾಡಿ ಭಾರತ ತಂಡವನ್ನ ಸೋಲಿನಿಂದ ಪಾರು ಮಾಡಿದ್ದರು.
August 05, 2025 11:05 AM IST