Last Updated:
ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾದ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವೆ 5 ಪಂದ್ಯಗಳ ಸಚಿನ್ ತೆಂಡುಲ್ಕರ್ ಹಾಗೂ ಜೇಮ್ಸ್ ಆಂಡರ್ಸನ್ ಟ್ರೋಫಿ (Sachin-Anderson Trophy) ಇಂಗ್ಲೆಂಡ್‌ನಲ್ಲಿ ನಡೆಯುತ್ತಿದೆ. ಈಗಾಗಲೇ 4 ಪಂದ್ಯಗಳು ಮುಕ್ತಾಯಗೊಂಡಿದ್ದು, ಇದರಲ್ಲಿ ಆತಿಥೇಯ ಇಂಗ್ಲೆಂಡ್ 2-1 ರ ಮುನ್ನಡೆ ಸಾಧಿಸಿದೆ. ಈ ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅದು ಕೂಡ 131 ವರ್ಷಗಳ ಹಳೆಯ ದಾಖಲೆ ಬ್ರೇಕ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್ ಅನ್ನು ಡ್ರಾ ಮಾಡಿಕೊಳ್ಳಲು ಭಾರತ ನಡೆಸಿದ ಕಠಿಣ ಪ್ರಯತ್ನದಲ್ಲಿ ರವೀಂದ್ರ ಜಡೇಜಾ ಅವರ ಪಾತ್ರ ಮಹತ್ವದ್ದಾಗಿತ್ತು. ಅವರು ತಮ್ಮ ಆಲ್-ರೌಂಡರ್ ಆಟ ಪ್ರದರ್ಶಿಸುವ ಮೂಲಕ ಸರಣಿಯನ್ನು ಇನ್ನೂ ಜೀವಂತವಾಗಿರಿಸುವಲ್ಲಿ ಪಾತ್ರ ವಹಿಸಿದರು. ಸರಣಿಯಲ್ಲಿ ಅವರು ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಸತತ 4 ಅರ್ಧಶತಕಗಳು, ವಾಷಿಂಗ್ಟನ್ ಸುಂದರ್ ಜೊತೆಗೆ 203 ಬೃಹತ್ ಜೊತೆಯಾಟ ಹೀಗೆ ಹಲವು ದಾಖಲೆಯ ಇನ್ನಿಂಗ್ಸ ಆಡಿದ್ದಾರೆ. ಇದೆಲ್ಲದ ನಡುವೆ ಅವರು ಆಸ್ಟ್ರೇಲಿಯಾದ ಸ್ಟಾರ್ ಹೆಸರಿನಲ್ಲಿದ್ದ 131 ವರ್ಷಗಳ ಹಳೆಯ ದಾಖಲೆ ಬ್ರೇಕ್ ಮಾಡಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು. ಈ ವೇಳೆ ಜಡೇಜಾ ಅವರು ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಜಡೇಜಾ ಬೌಲಿಂಗ್ ಮೋಡಿಗೆ ಸ್ಟಾರ್ ಆಲ್-ರೌಂಡರ್ ಜ್ಯಾಕ್ ಕ್ರಾಲಿ, ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಬ್ರೈಡನ್ ಕಾರ್ಸೆ ಫೆವಿಲಿಯನ್ ಸೇರಿದರು.
ಜಡೇಜಾ ತಮ್ಮ 36 ನೇ ಹುಟ್ಟುಹಬ್ಬದ ನಂತರ ಇಂಗ್ಲೆಂಡ್ ವಿರುದ್ಧದ 4ನೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದರು ಹಾಗೂ ಅದ್ವಿತೀಯ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ಇಂಗ್ಲೆಂಡ್ ವಿರುದ್ಧದ ಪಂದ್ಯವೊಂದರಲ್ಲಿ 4 ವಿಕೆಟ್ ಹಾಗೂ ಶತಕ ಸಿಡಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ದಾಖಲೆ ಆಸ್ಟ್ರೇಲಿಯಾದ ಜಾರ್ಜ್ ಗಿಫೆನ್ ಅವರ ಹೆಸರಿನಲ್ಲಿತ್ತು.
ಆಟಗಾರ | ತಂಡ | ವಯಸ್ಸು | ವರ್ಷ | ಸ್ಥಳ |
ರವೀಂದ್ರ ಜಡೇಜಾ | ಭಾರತ | 36 ವರ್ಷಗಳು, 229 ದಿನಗಳು | 2025 | ಮ್ಯಾಂಚೆಸ್ಟರ್ |
ಜಾರ್ಜ್ ಗಿಫೆನ್ | ಆಸ್ಟ್ರೇಲಿಯಾ | 35 ವರ್ಷಗಳು, 269 ದಿನಗಳು | 1894 | ಸಿಡ್ನಿ |
ರವೀಂದ್ರ ಜಡೇಜಾ | ಭಾರತ | 35 ವರ್ಷಗಳು, 71 ದಿನಗಳು | 2024 | ಲಾರ್ಡ್ಸ್ |
ಇದರ ಜೊತೆಗೆ ಸ್ಟಾರ್ ಆಲ್ರೌಂಡರ್ ಇಂಗ್ಲೆಂಡ್ ನೆಲದಲ್ಲಿ 4 ವಿಕೆಟ್ ಜೊತೆಗೆ ಶತಕ ಸಿಡಿಸಿದ ಅತ್ಯಂತ ಹಿರಿಯ ವಿದೇಶಿ ಆಟಗಾರ ಎಂಬ ದಾಖಲೆಯನ್ನೂ ಮಾಡಿದರು. ಇದಕ್ಕೂ ಮೊದಲು ಈ ದಾಖಲೆ ವಿನೂ ಮಂಕಡ್ ಅವರ ಹೆಸರಿನಲ್ಲಿತ್ತು. ಅವರು 1952 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಈ ದಾಖಲೆ ಮಾಡಿದ್ದರು. ಮಾತ್ರವಲ್ಲ, ಇಂಗ್ಲೆಂಡ್ ನ ನಾಯಕ ಬೆನ್ ಸ್ಟೋಕ್ಸ್ ಕೂಡ ಮ್ಯಾಂಚೆಸ್ಟರ್ ಪಂದ್ಯದಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ತವರು ನೆಲದಲ್ಲಿ ಈ ಸಾಧನೆ ಮಾಡಿದರು.
ಆಟಗಾರ | ತಂಡ | ಎದುರಾಳಿ | ವಯಸ್ಸು | ನೆಲ | ವರ್ಷ |
ರವೀಂದ್ರ ಜಡೇಜಾ | ಭಾರತ | ಇಂಗ್ಲೆಂಡ್ | 36 ವರ್ಷಗಳು, 229 ದಿನಗಳು | ಮ್ಯಾಂಚೆಸ್ಟರ್ | 2025 |
ವಿನೂ ಮಂಕಡ್ | ಭಾರತ | ಇಂಗ್ಲೆಂಡ್ | 35 ವರ್ಷಗಳು, 68 ದಿನಗಳು | ಲಾರ್ಡ್ಸ್ | 1952 |
ಬೆನ್ ಸ್ಟೋಕ್ಸ್ | ಇಂಗ್ಲೆಂಡ್ | ಭಾರತ | 34 ವರ್ಷಗಳು, 59 ದಿನಗಳು | ಮ್ಯಾಂಚೆಸ್ಟರ್ | 2025 |
ಜಡೇಜಾ ತವರಿನಿಂದಾಚೆಗೆ ಒಂದೇ ಪಂದ್ಯದಲ್ಲಿ ಶತಕ ಹಾಗೂ ನಾಲ್ಕು ವಿಕೆಟ್ ಪಡೆದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ವಿಶ್ವ ದಾಖಲೆಯು 6 ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಆಟಗಾರ ಪಾಲಿ ಉಮ್ರಿಗರ್ ಹೆಸರಿನಲ್ಲಿತ್ತು.
ತವರಿನಿಂದ ಹೊರಗೆ ಒಂದೇ ಪಂದ್ಯದಲ್ಲಿ 4 ವಿಕೆಟ್ ಪಡೆದು ಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರರು
ಆಟಗಾರ | ತಂಡ | ಎದುರಾಳಿ | ವಯಸ್ಸು | ನೆಲ | ವರ್ಷ |
ರವೀಂದ್ರ ಜಡೇಜಾ | ಭಾರತ | ಇಂಗ್ಲೆಂಡ್ | 36 ವರ್ಷಗಳು, 229 ದಿನಗಳು | ಲಾರ್ಡ್ಸ್ | 2025 |
ಪಾಲಿ ಉಮ್ರಿಗರ್ | ಭಾರತ | ವೆಸ್ಟ್ ಇಂಡೀಸ್ | 36 ವರ್ಷಗಳು, 7 ದಿನಗಳು | ಪೋರ್ಟ್ ಆಫ್ ಸ್ಪೇನ್ | 1962 |
ಸರ್ ರಿಚರ್ಡ್ ಹ್ಯಾಡ್ಲೀ | ನ್ಯೂಜಿಲೆಂಡ್ | ಶ್ರೀಲಂಕಾ | 35 ವರ್ಷಗಳು, 287 ದಿನಗಳು | ಕೊಲಂಬೊ | 1987 |
July 30, 2025 4:53 PM IST