ಇಂಗ್ಲೆಂಡ್‌ನಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್
ಜಸ್ಪ್ರಿತ್ ಬುಮ್ರಾ ಪ್ರಮುಖವಾಗಿ ಇಂಗ್ಲೆಂಡ್ ನೆಲದಲ್ಲಿ ಒಟ್ಟು 3 ಬಾರಿ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಇಂಗ್ಲೆಂಡ್ ನೆಲದಲ್ಲಿ ಅತೀ ಹೆಚ್ಚು ಐದು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಬುಮ್ರಾ ಎರಡು ಬಾರಿ 5 ವಿಕೆಟ್‌ಗಳೊಂದಿಗೆ ಲಾಲಾ ಅಮರನಾಥ್, ಕಪಿಲ್ ದೇವ್, ಬಿ ಚಂದ್ರಶೇಖರ್, ಭುವನೇಶ್ವರ್ ಕುಮಾರ್, ವಿನೂ ಮಂಕಡ್, ಚೇತನ್ ಶರ್ಮಾ, ಇಶಾಂತ್ ಶರ್ಮಾ, ಮೊಹಮ್ಮದ್ ನಿಸ್ಸಾರ್ ಮತ್ತು ಸುರೇಂದ್ರನಾಥ್ ಅವರೊಂದಿಗೆ ಸ್ಥಾನ ಪಡೆದಿದ್ದರು. ಇದೀಗ ಮೂರು ಬಾರಿ ಈ ಸಾಧನೆ ಮಾಡಿ ಅಗ್ರಸ್ಥಾನಕ್ಕೇರಿದರು.
14ನೇ ಬಾರಿ ಐದು ವಿಕೆಟ್ ಗೊಂಚಲು
ಮಾತ್ರವಲ್ಲ, ಜಸ್ಪ್ರೀತ್ ಬುಮ್ರಾ ತಮ್ಮ ಟೆಸ್ಟ್ ಕರಿಯರ್‌ನಲ್ಲಿ 14ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದುಕೊಂಡಿದ್ದು, ಅದರಲ್ಲಿ 12 ಬಾರಿ ವಿದೇಶದಲ್ಲಿಯೇ ಬಂದಿವೆ. ಲೀಡ್ಸ್‌ನಲ್ಲಿ ನಡೆದ ಪಂದ್ಯದ ಮೂಲಕ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ವಿದೇಶದಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟಗ ಪಡೆದ ಕಪಿಲ್ ದೇವ್ ಅವರ ದಾಖಲೆಯ ಸಾಲಿಗೆ ಸೇರಿದರು.
ಲೀಡ್ಸ್ ಟೆಸ್ಟ್ ಪಂದ್ಯದ ಸಮಯದಲ್ಲಿ ಬುಮ್ರಾ, SENA ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ಅತೀ ಹೆಚ್ಚು ವಿಕೆಟ್ ಪಡೆದ ಏಷ್ಯನ್ ಬೌಲರ್ ವಾಸಿಮ್ ಅಕ್ರಮ್ ಅವರನ್ನು ಹಿಂದಿಕ್ಕಿದರು. ಬುಮ್ರಾ ತಮ್ಮ ವಿಕೆಟ್‌ಗಳ ಸಂಖ್ಯೆಯನ್ನು 150 ಕ್ಕೆ ತಲುಪಿಸಿದರು. ಇದು ವಾಸಿಮ್ ಅಕ್ರಮ್ ಅವರ ವಿಕೆಟ್‌ಗಿಂತ 4 ವಿಕೆಟ್ ಹೆಚ್ಚಾಗಿದೆ.
ಭಾರತದ ಪರ ವಿದೇಶದಲ್ಲಿ ಅತೀ ಹೆಚ್ಚು 5 ವಿಕೆಟ್
ಜಸ್ಪ್ರೀತ್ ಬುಮ್ರಾ – 12
ಕಪಿಲ್ ದೇವ್ – 12
ಅನಿಲ್ ಕುಂಬ್ಳೆ – 10
ಇಶಾಂತ್ ಶರ್ಮಾ – 9
ಆರ್. ಅಶ್ವಿನ್ – 8
ಸೆನಾದಲ್ಲಿ ಏಷ್ಯನ್ನರ ಅತಿ ಹೆಚ್ಚು ವಿಕೆಟ್‌ಗಳು
ಜಸ್ಪ್ರೀತ್ ಬುಮ್ರಾ – 31 ಪಂದ್ಯಗಳಲ್ಲಿ 150 ವಿಕೆಟ್ಸ್
ವಾಸಿಮ್ ಅಕ್ರಮ್ – 32 ಪಂದ್ಯಗಳಲ್ಲಿ 146 ವಿಕೆಟ್ಸ್
ಅನಿಲ್ ಕುಂಬ್ಳೆ – 35 ಪಂದ್ಯಗಳಲ್ಲಿ 141 ವಿಕೆಟ್ಸ್
ಇಶಾಂತ್ ಶರ್ಮಾ – 40 ಪಂದ್ಯಗಳಲ್ಲಿ 127 ವಿಕೆಟ್ಸ್
ಜಹೀರ್ ಖಾನ್ – 30 ಪಂದ್ಯಗಳಲ್ಲಿ 119 ವಿಕೆಟ್ಸ್
ಪ್ರವಾಸಿ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿದ ನಂತರ, 2ನೇ ದಿನದಂದು ಬುಮ್ರಾ ಮೂರು ವಿಕೆಟ್‌ಗಳನ್ನು ಕಬಳಿಸಿ ಭಾರತದ ಪರ ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದರು. ಇತರ ಇಬ್ಬರು ಪ್ರಮುಖ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕಳಪೆ ಪ್ರದರ್ಶನ ನೀಡಿದ್ದರಿಂದ 3ನೇ ದಿನದಂದು ಪ್ರಮುಖ ವೇಗಿ ಬುಮ್ರಾ ಮೇಲೆ ಒತ್ತಡ ಹೆಚ್ಚಾಗಿತ್ತು. 3ನೇ ದಿನದಂದು ಬುಮ್ರಾ ಅದ್ಭುತ ಪ್ರದರ್ಶನ ನೀಡಿದರು. ಮೂರನೇ ದಿನ ಕೂಡ 2 ವಿಕೆಟ್ ಪಡೆಯುವ ಮೂಲಕ ಒಟ್ಟು 5 ವಿಕೆಟ್ ಪಡೆದ ಸಾಧನೆ ಮಾಡಿದರು.
June 22, 2025 10:10 PM IST