India vs England: ಇಬ್ಬರು ಲೆಜೆಂಡರಿ ಆಟಗಾರರ ಹೆಸರಿನಲ್ಲಿ ನಡೆಯಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸೀರಿಸ್! ಯಾರು ಅಂತ ಗೊತ್ತಾದ್ರೆ ನೀವು ಖುಷಿ ಪಡ್ತೀರಾ | India-England Test series named Sachin Tendulkar James Anderson Trophy

India vs England: ಇಬ್ಬರು ಲೆಜೆಂಡರಿ ಆಟಗಾರರ ಹೆಸರಿನಲ್ಲಿ ನಡೆಯಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸೀರಿಸ್! ಯಾರು ಅಂತ ಗೊತ್ತಾದ್ರೆ ನೀವು ಖುಷಿ ಪಡ್ತೀರಾ | India-England Test series named Sachin Tendulkar James Anderson Trophy

Last Updated:

ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಜೂನ್ 20ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ. ಈ ನಡುವೆ ಈ ಟೆಸ್ಟ್‌ ಸರಣಿಯ ಟ್ರೋಫಿಗೆ ಹೆಸರು ಸೂಚಿಸಲಾಗಿದೆ. ಆ ಇಬ್ಬರು ಯಾರು ಎಂದು ನೋಡೋಣ ಬನ್ನಿ.

ಸಚಿನ್-ಆಂಡರ್ಸನ್ಸಚಿನ್-ಆಂಡರ್ಸನ್
ಸಚಿನ್-ಆಂಡರ್ಸನ್

ಭಾರತ-ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಇದೇ ಜೂನ್ 20ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಶುಭ್‌ಮನ್ ಗಿಲ್ (Shubhman Gill) ನಾಯಕತ್ವದ ಟೀಂ ಇಂಡಿಯಾವನ್ನು (Team India) ಕೂಡ ಪ್ರಕಟಿಸಲಾಗಿದೆ. ಸದ್ಯ ಸರಣಿಯು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಅಶ್ವಿನ್‌ರಂತಹ ಹಿರಿಯ ಆಟಗಾರರಿಲ್ಲದೆ ನಡೆಯುತ್ತಿದ್ದು, ಯಂಗ್ ಆಟಗಾರರ ಮೇಲೆ ಒತ್ತಡ ಹೆಚ್ಚಿದೆ. ಈ ನಡುವೆ ಈ ಟೆಸ್ಟ್‌ ಸರಣಿಯ ಟ್ರೋಫಿಗೆ ಹೆಸರು ಸೂಚಿಸಲಾಗಿದೆ. ಆ ಇಬ್ಬರು ಯಾರು ಎಂದು ನೋಡೋಣ ಬನ್ನಿ.

ಹೌದು, ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಸಚಿನ್ ತೆಂಡೂಲ್ಕರ್- ಜೇಮ್ಸ್ ಆಂಡರ್ಸನ್ (Sachin-Anderson Trophy) ಟ್ರೋಫಿಯಾಗಿ ಆಡಲಾಗುವುದು. ಇದು ಇಬ್ಬರು ಶ್ರೇಷ್ಠ ಟೆಸ್ಟ್ ಕ್ರಿಕೆಟರ್‌ಗಳಿಗೆ ನೀಡಲಾಗುವ ಗೌರವವಾಗಿದೆ. ಜೂನ್ 20 ರಂದು ಹೆಡಿಂಗ್ಲಿಯಲ್ಲಿ ಪ್ರಾರಂಭವಾಗುವ 5 ಪಂದ್ಯಗಳ ಸರಣಿಗೆ ಮುಂಚಿತವಾಗಿ ತೆಂಡೂಲ್ಕರ್-ಆಂಡರ್ಸನ್ ಟ್ರೋಫಿಯನ್ನು ಅನಾವರಣಗೊಳಿಸಲಾಗುತ್ತದೆ.

ಭಾರತ ಕಂಡಂತಹ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ 15,921 ರನ್ ಗಳಿಸಿ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮುಂದುವರೆದಿದ್ದಾರೆ. ಬರೋಬ್ಬರಿ 22 ವರ್ಷಗಳ ಕಾಲ 1989 ರಿಂದ 2013 ರವರೆಗೆ 200 ಟೆಸ್ಟ್ ಪಂದ್ಯಗಳನ್ನು ಸಚಿನ್ ತೆಂಡೂಲ್ಕರ್ ಅವರು ಆಡಿದ್ದಾರೆ.

ಇಂಗ್ಲೆಂಡ್‌ನ ಸಾರ್ವಕಾಲಿಕ ಪ್ರಮುಖ ವಿಕೆಟ್ ಟೇಕರ್ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಿರುವ ಜೇಮ್ಸ್ ಆಂಡರ್ಸನ್ ಅವರು 704 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ಬೇಸಿಗೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅವರು ನಿವೃತ್ತರಾಗಿದ್ದಾರೆ. ಅವರು ತಮ್ಮ 42 ವರ್ಷ ವಯಸ್ಸಿನಲ್ಲಿ ನಿವೃತ್ತರಾಗಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

India vs England: ಇಬ್ಬರು ಲೆಜೆಂಡರಿ ಆಟಗಾರರ ಹೆಸರಿನಲ್ಲಿ ನಡೆಯಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸೀರಿಸ್! ಯಾರು ಅಂತ ಗೊತ್ತಾದ್ರೆ ನೀವು ಖುಷಿ ಪಡ್ತೀರಾ