India vs England: ಕರುಣ್, ಸಾಯಿ ಅಲ್ವೇ ಅಲ್ಲ, ವಿರಾಟ್ ಕೊಹ್ಲಿ ಪ್ಲೇಸ್‌ನಲ್ಲಿ ಆಡುವುದು 25 ವರ್ಷದ ಈ ಸ್ಟಾರ್ ಪ್ಲೇಯರ್! ಪಂತ್ ಸ್ಪಷ್ಟನೆ | Shubman Gill at number 4 for Team India confirms Pant vs England

India vs England: ಕರುಣ್, ಸಾಯಿ ಅಲ್ವೇ ಅಲ್ಲ, ವಿರಾಟ್ ಕೊಹ್ಲಿ ಪ್ಲೇಸ್‌ನಲ್ಲಿ ಆಡುವುದು 25 ವರ್ಷದ ಈ ಸ್ಟಾರ್ ಪ್ಲೇಯರ್! ಪಂತ್ ಸ್ಪಷ್ಟನೆ | Shubman Gill at number 4 for Team India confirms Pant vs England

Last Updated:

ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಕೊಹ್ಲಿಯಿಂದ ತೆರವಾಗಿರುವ ನಾಲ್ಕನೇ ಕ್ರಮಾಂಕದಲ್ಲಿ ಯಾವ ಆಟಗಾರ ಆಡ್ತಾರೆ ಎಂಬ ಪ್ರಶ್ನೆಗೆ ಉಪನಾಯಕ ರಿಷಬ್ ಪಂತ್ ಉತ್ತರಿಸಿದ್ದಾರೆ.

ರಿಷಬ್ ಪಂತ್ರಿಷಬ್ ಪಂತ್
ರಿಷಬ್ ಪಂತ್

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌  (WTC)ಅಭಿಯಾನವನ್ನು ಟೀಂ ಇಂಡಿಯಾ (Team India) ಇದೇ ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಅಭಿಯಾನ ಆರಂಭಿಸಲಿದೆ. ಸದ್ಯ ವಿರಾಟ್ ಕೊಹ್ಲಿ, (Virat Kohli) ರೋಹಿತ್ ಶರ್ಮಾ (Rohit Sharma) ಬಳಿಕ ಟೀಂ ಇಂಡಿಯಾ ಮಾಡುತ್ತಿರುವ ಮೊದಲ ಸರಣಿ ಇದಾಗಿದೆ. ಹಾಗಾಗಿ ಈ ಸರಣಿಯಲ್ಲಿ ಯುವ ಆಟಗಾರರ ಪ್ರದರ್ಶನದ ಮೇಲೆ ನಿಂತಿದೆ. ಸದ್ಯ ವಿರಾಟ್ ಕೊಹ್ಲಿಯಿಂದ ತೆರವಾಗಿರುವ ನಾಲ್ಕನೇ ಕ್ರಮಾಂಕದಲ್ಲಿ ಯಾವ ಆಟಗಾರ ಆಡ್ತಾರೆ ಎಂಬ ಪ್ರಶ್ನೆಗೆ ಉಪನಾಯಕ ರಿಷಬ್ ಪಂತ್ (Rishabh Pant) ಉತ್ತರಿಸಿದ್ದಾರೆ.

4ನೇ ಕ್ರಮಾಂಕದ ಗೊಂದಲಕ್ಕೆ ತೆರೆ ಎಳೆದ ಪಂತ್

ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ತಂಡದ ಹೊಸ 4ನೇ ನಂಬರ್‌ನಲ್ಲಿ ಯಾರು ಆಡಲಿದ್ದಾರೆ ಎಂಬುದರ ಕುರಿತು ಉಪನಾಯಕ ರಿಷಬ್ ಪಂತ್ ಧೃಡಪಡಿಸಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಭಾರತದ ಆರಂಭಿಕ ಜೋಡಿಯ ಬಗ್ಗೆ ಯಾವುದೇ ಸಂದೇಹಗಳಿಲ್ಲ, ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ನಾಲ್ಕನೇ ಸ್ಥಾನವು ದೊಡ್ಡ ಪ್ರಶ್ನೆಯಾಗಿತ್ತು, ವಿಂಗ್ಸ್‌ನಲ್ಲಿ ಯಾವುದೇ ಸ್ಪಷ್ಟ ಆಯ್ಕೆ ಅಥವಾ ಮಧ್ಯಮ ಕ್ರಮಾಂಕದಲ್ಲಿ ಯಾರು ಎಂಬ ಪ್ರಶ್ನೆ ಉಂಟಾಗಿತ್ತು. ಅನೇಕರು ಸಾಯಿ ಸುದರ್ಶನ್, ಕರುಣ್ ನಾಯರ್ ಆ ಸ್ಥಾನಕ್ಕೆ ಸೂಕ್ತ ಎಂದು ಹೇಳಿದ್ದರು.

ಶುಭ್‌ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡ್ತಾರೆ

ಬುಧವಾರ (ಜೂನ್ 18) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಂತ್, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶುಭ್‌ಮನ್ ಗಿಲ್ ಆಡಲಿದ್ದಾರೆ ಎಂದು ದೃಢಪಡಿಸಿದರು. ಶುಭಮನ್ ಗಿಲ್ ಸದ್ಯ 3ನೇ ಕ್ರಮಾಂಕದಲ್ಲಿ ಬ್ಯಾಟಿಗ್ ಮಾಡುತ್ತಿದ್ದು, ಅವರು 4ನೇ ಸ್ಥಾನದಲ್ಲಿ ಆಡಲಿದ್ದಾರೆ ಎಂದು ಪತ್ ಖಚಿಪಡಿಸಿದ್ದಾರೆ. ಇನ್ನೂ ಪಂತ್ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ತಾವು 5ನೇ ಕ್ರಮಾಂಕದಲ್ಲಿ ಆಡುವುದಾಗಿಯೂ ಅವರು ತಿಳಿಸಿದ್ದಾರೆ.

3ನೇ ಕ್ರಮಾಂಕದ ಕುರಿತು ಸ್ಪಷ್ಟನೆ ನೀಡದ ಪಂತ್

ಇನ್ನೂ ಗಿಲ್ ಅವರ ಸ್ಥಾನವನ್ನು ಅಂದ್ರೆ, ಮೂರನೇ ಸ್ಥಾನದಲ್ಲಿ ಯಾರು ಆಡ್ತಾರೆ ಎಂಬುದರ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅದರ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಪಂತ್ ತಿಳಿಸಿದ್ದಾರೆ. “ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದರ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ. ಶುಭ್‌ಮನ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ನಾನು ಈಗ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸುತ್ತೇನೆ” ಎಂದು ಪಂತ್ ಮಾಧ್ಯಮಗಳನ್ನುದ್ದೇಶಿಸಿ ಹೇಳಿದರು.

ಪ್ಲೇಯಿಂಗ್ 11 ಸ್ಪಷ್ಟಪಡಿಸದ ಪಂತ್

ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಡಿತ್ತು ಹಾಗೂ ಅದು ನಿಜವೆಂದು ಪಂತ್ ದೃಢಪಡಿಸಿದರು. ಆದರೆ ಟೀಂ ಇಂಡಿಯಾ ಪ್ಲೇಯಿಂಗ್ 11 ಕುರಿತು ಅವರು ಸ್ಪಷ್ಟನೆ ನೀಡಿಲ್ಲ. ಮೂರನೇ ಸ್ಥಾನವನ್ನು ಕರುಣ್ ನಾಯರ್ ಅಥವಾ ಸಾಯಿ ಸುದರ್ಶನ್ ಆಡುವ ಸಾಧ್ಯತೆ ಇದೆ. ಇದರರ್ಥ 8 ವರ್ಷಗಳ ನಂತರ ನಾಯರ್ ಭಾರತ ಪರ ಟೆಸ್ಟ್ ಪಂದ್ಯವನ್ನು ಆಡುತ್ತಾರಾ ಅಥವಾ ಸುದರ್ಶನ್ ಚೊಚ್ಚಲ ಪ್ರವೇಶ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.