Last Updated:
ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಡಕೆಟ್ ಹಾಗೂ ಕ್ರಾಲಿ ಜೊಡಿ ಮೊದಲ ವಿಕೆಟ್‌ಗೆ 188 ರನ್‌ಗಳ ಅಮೋಘ ಜೊತೆಯಾಟ ಆಡಿದರು. ಆದ್ರೆ, ಈ ಇನ್ನಿಂಗ್ಸ್‌ನಲ್ಲೂ ಭಾರತೀಯ ಕ್ಷೇತ್ರರಕ್ಷಣೆ ನಿರಾಶಾದಾಯಕವಾಗಿತ್ತು.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು (Test) ಇಂಗ್ಲೆಂಡ್ ಗೆಲುವಿಗೆ ಕೊನೆಯ ದಿನ 350 ರನ್‌ಗಳ ಅಗತ್ಯವಿತ್ತು. ಈ ಕಠಿಣ ಸವಾಲು ಬೆನ್ನಟ್ಟಿದ ಇಂಗ್ಲೆಂಡ್‌ಗೆ ಆರಂಭಿಕರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಡಕೆಟ್ (Ben Duckett) ಹಾಗೂ ಕ್ರಾಲಿ (Zak Crawley) ಜೊಡಿ ಮೊದಲ ವಿಕೆಟ್‌ಗೆ 188 ರನ್‌ಗಳ ಅಮೋಘ ಜೊತೆಯಾಟ ಆಡಿದರು. ಆದ್ರೆ, ಈ ಇನ್ನಿಂಗ್ಸ್‌ನಲ್ಲೂ ಭಾರತೀಯ ಕ್ಷೇತ್ರರಕ್ಷಣೆ ನಿರಾಶಾದಾಯಕವಾಗಿತ್ತು.
ಐದನೇ ದಿನದಾಟದಲ್ಲಿ 97 ರನ್ ಗಳಿಸಿದ್ದ ಬೆನ್ ಡಕೆಟ್ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಬಿಗ್ ಶಾಟ್ ಹೊಡೆಯಲು ಯತ್ನಿಸಿದಾಗ ಯಶಸ್ವಿ ಜೈಸ್ವಾಲ್ ಅವರಿಗೆ ಸುಲಭ ಕ್ಯಾಚ್ ನೀಡಿದರು. ಆದ್ರೆ, ಅವರು ಸುಲಭವಾಗಿ ಹಿಡಿಯಬಹುದಾದ ಕ್ಯಾಚ್ ಅನ್ನು ಕೈಚೆಲ್ಲುವ ಮೂಲಕ ಸಿರಾಜ್ ಕೋಪಕ್ಕೆ ಗುರಿಯಾದರು. ಡಕೆಟ್ ಅಂತಿಮವಾಗಿ 149 ರನ್ ಗಳಿಸಿದರು. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 3 ಕ್ಯಾಚ್ ಡ್ರಾಪ್ ಮಾಡಿದ್ದ ಜೈಸ್ವಾಲ್ ಇಂದು ಕೂಡ ಸುಲಭದ ಕ್ಯಾಚ್ ಕೈಚೆಲ್ಲಿದರು.
ಬೇಡದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಡಕೆಟ್ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ಗೆ ಪುಲ್ ಮಾಡಲು ಯತ್ನಿಸಿದರು. ಅದು ಟಾಪ್-ಎಡ್ಜ್ ಆಗುವ ಮೂಲಕ ಜೈಸ್ವಾಲ್ ಕೈಗೆ ಹೋಯಿರು. ಆದ್ರೆ, ಮುಂದಕ್ಕೆ ಡೈವ್ ಮಾಡಿದ ಜೈಸ್ವಾಲ್ ಸುಲಭದ ಕ್ಯಾಚ್ ಕೈಚೆಲ್ಲಿದರು. ಈ ದುಬಾರಿ ತಪ್ಪಿನಿಂದಾಗಿ ಜೈಸ್ವಾಲ್ ಒಂದೇ ಪಂದ್ಯದಲ್ಲಿ 4 ಕ್ಯಾಚ್ ಕೈಬಿಟ್ಟರು. ವರದಿಯ ಪ್ರಕಾರ, ಭಾರತೀಯ ಆಟಗಾರನೊಬ್ಬನ ಜೊತೆ ಜಂಟಿಯಾಗಿ ಕೈಚೆಲ್ಲಿದ ಅತಿ ಹೆಚ್ಚು ಕ್ಯಾಚ್‌ಗಳಾಗಿದೆ.
ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯವು ಭಾರತದ ಫೀಲ್ಡಿಂಗ್ ಕುರಿತು ಪ್ರಶ್ನೆಗಳು ಏಳುವಂತೆ ಮಾಡಿದೆ. ಕ್ಯಾಚ್ ಪಡೆಯುವುದು ಕಡಿಮೆಯಾಗುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದಲೇ ಭಾರತ ಪಂದ್ಯ ಗೆಲ್ಲಲು ಪರದಾಡುವಂತಾಗಿದೆ.
ಇನ್ನೂ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಘಟನೆಯಿಂದಾಗಿ ತೀವ್ರ ನಿರಾಶೆಗೊಂಡಂತೆ ಕಾಣುತ್ತಿದ್ದರು. ಕೋಪದ ಸ್ವಭಾವಕ್ಕೆ ಹೆಸರಾಗಿರುವ ಗಂಭೀರ್ ಜೈಸ್ವಾಲ್ ವಿರುದ್ಧ ತೀವ್ರ ಕೋಪಗೊಂಡಂತೆ ಕಂಡುಬಂದರು.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 24, 2025 9:28 PM IST
India vs England: ಕೆಟ್ಟ ದಾಖಲೆ ಬರೆದ ಜೈಸ್ವಾಲ್! ಮೈದಾನದಲ್ಲಿ ಹೀಗಿದ್ರೆ ಬ್ಯಾಟಿಂಗ್‌ನಲ್ಲಿ ಎಷ್ಟು ರನ್ ಗಳಿಸಿದ್ರು ವೇಸ್ಟ್ ಅಂತಿದ್ದಾರೆ ಫ್ಯಾನ್ಸ್