Last Updated:
ಇಂಗ್ಲೆಂಡ್ ಹಾಗೂ ಭಾರತ ನಡುವಿನ ಆ್ಯಂಡರ್ಸನ್-ಸಚಿನ್ ಟೆಸ್ಟ್ ಸರಣಿ ಜೂನ್ 20ರಿಂದ ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದೆ.
ಇಂಗ್ಲೆಂಡ್ ಹಾಗೂ ಭಾರತ (India vs England) ನಡುವಿನ ಆ್ಯಂಡರ್ಸನ್-ಸಚಿನ್ ಟೆಸ್ಟ್ ಸರಣಿ ಜೂನ್ 20ರಿಂದ ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದೆ. ಆರಂಭಿಕರು 92 ರನ್ಗಳ ಜೊತೆಯಾಟ ಆಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಜೈಸ್ವಾಲ್ 101 ರನ್ ಗಳಿಸಿ (Jaiswal) ಔಟ್ ಆದ್ರೆ, ಗಿಲ್ (Gill) ಶತಕ ಹಾಗೂ ರಿಷಬ್ ಪಂತ್ (Rishabh Pant) ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದುಕೊಂಡರು.
ಜೈಸ್ವಾಲ್ ವಿಕೆಟೆ ಪತನದ ಬಳಿಕ ಕ್ರೀಸ್ಗೆ ಎಂಟ್ರಿ ಕೊಟ್ಟ ಪಂತ್, ತಾವು ಎದುರಿಸಿದ ಎರಡನೇ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಮಾತ್ರವಲ್ಲ, ಅವರು ಮೊದಲ ದಿನದ ಕೊನೆಯ ಓವರ್ನಲ್ಲಿ ಕ್ರಿಸ್ ವೋಕ್ಸ್ ಅವರ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಬಾರಿಸಿ ತಮ್ಮ ಉಗ್ರ ರೂಪ ಪ್ರದರ್ಶಿಸಿದರು. ಗಿಲ್ ಮತ್ತು ಪಂತ್ ಅವರ ಅಜೇಯ ಬ್ಯಾಟಿಂಗ್ನಿಂದಾಗಿ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 359/3 ಕ್ಕೆ ಕೊನೆಗೊಳಿಸಿತು.
ಕೆಎಲ್ ರಾಹುಲ್ ವಿಡಿಯೋ ವೈರಲ್
ಅಜೇಯ ಪ್ರದರ್ಶನ ನೀಡಿದ ಬಳಿಕ ಡ್ರೆಸ್ಸಿಂಗ್ ರೂಮ್ನತ್ತ ಬಂದ ಆಟಗಾರರನ್ನು ತಂಡದ ಸಹ ಆಟಗಾರರು ಸ್ವಾಗತಿಸಿದರು. ಇಡೀ ತಂಡ ಈ ಆಟಗಾರರ ಅದ್ಭುತ ಇನ್ನಿಂಗ್ಸ್ ಅನ್ನು ಶ್ಲಾಘಿಸಿತು. ಆದರೆ, ಪಂತ್ ಮೆಟ್ಟಿಲುಗಳನ್ನು ಹತ್ತಿ ಬರುತ್ತಿದ್ದಂತೆ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ ಕೈ ಮುಗಿದು ಮಡಚಿ ನಮಸ್ಕರಿಸಿದರು. ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರ ಧೈರ್ಯಶಾಲಿ ಆಟವನ್ನು ಶ್ಲಾಘಿಸುತ್ತಿರುವುದು ಕಂಡುಬಂದಿತು. ಈ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಗುರುವಾರ ನಡೆದ ಪಂದ್ಯದಲ್ಲಿ ಪಂತ್ 65 ರನ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 3000 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಭಾರತದ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಹಿಂದಿಕ್ಕಿದರು. ಸದ್ಯ, ಪಂತ್ ಸೆನಾದಲ್ಲಿ ಆಡಿದ 27 ಪಂದ್ಯಗಳಲ್ಲಿ 38.80 ಸರಾಸರಿಯಲ್ಲಿ 1746 ರನ್ ಗಳಿಸಿದ್ದಾರೆ. ಮಾತ್ರವಲ್ಲ, ಅವರ ಹೆಸರಿನಲ್ಲಿ 4 ಶತಕಗಳು ಮತ್ತು 6 ಅರ್ಧಶತಕಗಳಿವೆ.
ಮಾತ್ರವಲ್ಲ, ನಿನ್ನೆಯಿಡೀ ಭಾರತೀಯ ಆಟಗಾರರು ಅಬ್ಬರಿಸಿದರು. ರೋಹಿತ್ ಶರ್ಮಾ ನಿವೃತ್ತಿ ಬಳಿಕ ನಾಯಕತ್ವ ವಹಿಸಿಕೊಂಡಿರುವ ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಅದ್ಭುತ ಶತಕ ಮತ್ತು ಉಪನಾಯಕ ರಿಷಭ್ ಪಂತ್ ಅವರು ಅರ್ಧಶತಕ ಸಿಡಿಸಿದರು. ದಿನದಾಟದ ಅಂತ್ಯಕ್ಕೆ ಭಾರತ ತಂಡ 359/3 ಸ್ಕೋರ್ ಗಳಿಸಿತ್ತು.
ಜೈಸ್ವಾಲ್ 159 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಂತೆ 101 ರನ್ ಗಳಿಸಿದರು. ನಂತರ ಗಿಲ್ ಅಜೇಯ 127 ರನ್ ಗಳಿಸಿ ಪ್ರಬುದ್ಧತೆ ಮತ್ತು ಸಮತೋಲನ ಆಟ ಪ್ರದರ್ಶಿಸಿದರು. ಸ್ಟೈಲಿಶ್ ಬಲಗೈ ಬ್ಯಾಟ್ಸ್ಮನ್ 175 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸ್ ಬಾರಿಸಿ ಭಾರತವನ್ನು ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ದಿನದ ಅತ್ಯಧಿಕ ಮೊತ್ತಕ್ಕೆ ಮುನ್ನಡೆಸಿದರು.
June 21, 2025 3:41 PM IST