India vs England: ಜೈಸ್ವಾಲ್, ಗಿಲ್ ಅಲ್ಲ! ಇಂಗ್ಲೆಂಡ್ ತಂಡಕ್ಕೆ 27 ವರ್ಷದ ಈ ಆಟಗಾರ ಮೇಲೆ ಭಯ ಇದೆ ಎಂದ ಮಂಜ್ರೇಕರ್ | anjay Manjrekar Says England Fear This 27 Year Old Batter

India vs England: ಜೈಸ್ವಾಲ್, ಗಿಲ್ ಅಲ್ಲ! ಇಂಗ್ಲೆಂಡ್ ತಂಡಕ್ಕೆ 27 ವರ್ಷದ ಈ ಆಟಗಾರ ಮೇಲೆ ಭಯ ಇದೆ ಎಂದ ಮಂಜ್ರೇಕರ್ | anjay Manjrekar Says England Fear This 27 Year Old Batter

Last Updated:

ನಾಲ್ಕನೇ ಟೆಸ್ಟ್ ಕುರಿತು ಅನೇಕ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ಯಾವ ಆಟಗಾರ ನಿರ್ಣಾಯಕರಾಗಬಲ್ಲರು ಎಂದೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಜೈಸ್ವಾಲ್-ಪಂತ್ಜೈಸ್ವಾಲ್-ಪಂತ್
ಜೈಸ್ವಾಲ್-ಪಂತ್

ಸಚಿನ್ಆಂಡರ್ಸನ್ (Sachin- Anderson) ಟ್ರೋಫಿಯ 5 ಪಂದ್ಯಗಳ ಸರಣಿಯಲ್ಲಿ 3 ಪಂದ್ಯಗಳು ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ (Team India) 1-2ರಿಂದ ಹಿನ್ನಡೆಯಲ್ಲಿದೆ. ಸರಣಿ ಜೀವಂತವಾಗಿರಿಸಿಕೊಳ್ಳಬೇಕೆಂದರೆ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ನಿಟ್ಟಿನಲ್ಲಿ ಟೀಂ ಇಂಡಿಯಾ ಈಗಾಗಲೇ ಕಠಿಣ ಅಭ್ಯಾಸ ಆರಂಭಿಸಿದೆ. ಈಗಾಗಲೇ ಅನೇಕ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ಯಾವ ಆಟಗಾರ ನಿರ್ಣಾಯಕರಾಗಬಲ್ಲರು ಎಂದೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ

ಇದೀಗ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ (Sanjay Manjrekar) ಮಾತನಾಡಿ, ರಿಷಭ್ ಪಂತ್ ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ನಿರ್ಣಾಯ ಆಟಗಾರರಾಗಬಲ್ಲರು. ಆಂಗ್ಲ ಬೌಲರ್ಗಳನ್ನು ಹೆದರಿಸು ಸಾಮರ್ಥ್ಯ ಅವರಲ್ಲಿದೆ. ಪಂತ್ ಅವರಿಗೆ ಮೈದಾನದ ಮೂಲೆ ಮೂಲೆಗೆ ಶಾಟ್ಬಾರಿಸುವ ಸಾಮರ್ಥ್ಯವಿದೆ. ಪಂತ್ ಅವರು ತಮ್ಮ ಸ್ವಾಭಾವಿಕ ಬ್ಯಾಟಿಂಗ್ ಪ್ರದರ್ಶನ ತೋರಿದರೆ, ಭಾರತದ ಗೆಲುವಿ ಸುಲಭವಾಗಲಿದೆ ಎಂದರು.

ಪಂತ್ ಸ್ವತಂತ್ರವಾಗಿ ಬ್ಯಾಟಿಂಗ್ ಮಾಡಬೇಕು

ಪಂತ್ ತಮ್ಮ ಆಕ್ರಮಣಕಾರಿ ಮತ್ತು ನಿರ್ಭೀತ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಅವರ ಆಕ್ರಮಣಕಾರಿ ಬ್ಯಾಟಿಂಗ್ ಅನೇಕ ಸಂದರ್ಭಗಳಲ್ಲಿ ಫಲ ನೀಡದೆಯೂ ಇರಬಹುದು. ಆದರೆ ಕೆಲವೊಮ್ಮೆ ಈ ನಿರ್ಭೀತ ವಿಧಾನವು ಫಲ ನೀಡಿದೆ. ಹೀಗೆ ಟೆಸ್ಟ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇರುವ ಆಟಗಾರರ ಪಟ್ಟಿಯಲ್ಲಿ ಪಂತ್ ಅಗ್ರಸ್ಥಾನದಲ್ಲಿದ್ದಾರೆ.

ಕಳಪೆ ಫಾರ್ಮ್ನಲ್ಲಿರುವ ಜೈಸ್ವಾಲ್ ತಮ್ಮ ಫಾರ್ಮ್ ಅನ್ನು ಸರಿಪಡಿಸಿಕೊಂಡು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕು. ನನ್ನ ಪ್ರಕಾರ ಪಂತ್, 5 ನೇ ಸ್ಥಾನದಲ್ಲಿ ಆಡುವ ಅತ್ಯುತ್ತಮ ಆಟಗಾರರಾಗಿದ್ದಾರೆ. ಅವರು ಇಂಗ್ಲೆಂಡ್ಬೌಲರ್ಗಳಿಗೆ ಭಯ ಹುಟ್ಟಿಸುವ ಸಾಮರ್ಥ್ಯವಿದೆ ಎಂದರು. ಪಂತ್ ಮೂರು ಪಂದ್ಯಗಳಿಂದ 70.83 ರ ಸರಾಸರಿಯಲ್ಲಿ 425 ರನ್ ಗಳಿಸಿದ್ದಾರೆ. ಹಿಂದಿನ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿಯೂ ಅವರು 74 ರನ್ ಗಳಿಸಿದ್ದರು. ಸದ್ಯ, ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಪಂತ್ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.