Last Updated:
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಈಗ 11 ವರ್ಷಗಳ ನಂತರ ಹೊಸ ಆಟಗಾರ ಈ ಪಾತ್ರವನ್ನು ವಹಿಸಿಕೊಳ್ಳಬೇಕಾಗಿದೆ. ಕಳೆದ ಒಂದು ತಿಂಗಳಲ್ಲಿ 4ನೇ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಸಚಿನ್ ತೆಂಡೂಲ್ಕರ್ (Sachin Tendulkar) 2013 ರ ನವೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದಾಗಿನಿಂದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಭಾರತದ ನಂಬರ್ 4 ಬ್ಯಾಟ್ಸ್‌ಮನ್ ಪಾತ್ರವನ್ನು ಅತ್ಯಂತ ಯಶಸ್ವಿಯಗಿ ನಿರ್ವಹಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಈಗ 11 ವರ್ಷಗಳ ನಂತರ ಹೊಸ ಆಟಗಾರ ಈ ಪಾತ್ರವನ್ನು ವಹಿಸಿಕೊಳ್ಳಬೇಕಾಗಿದೆ. ಕಳೆದ ಒಂದು ತಿಂಗಳಲ್ಲಿ 4ನೇ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಟೆಸ್ಟ್ ತಂಡದ ಹೊಸ ನಾಯಕ ಶುಭಮನ್ ಗಿಲ್ (Shubhman Gill) ಈ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕೊಹ್ಲಿ ಅವರ ಉತ್ತರಾಧಿಕಾರಿಯಾಗಿ ಕರುಣ್ ನಾಯರ್, ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರನ್ನು ಅನೇಕ ಮಾಜಿ ಆಟಗಾರರು ಮತ್ತು ತಜ್ಞರು ಬೆಂಬಲಿಸಿದ್ದಾರೆ. ಇನ್ನೂ ಅಧಿಕೃತವಾಗಿ ಯಾವುದನ್ನೂ ನಿರ್ಧರಿಸಲಾಗಿಲ್ಲ. ಜೂನ್ 20 ರಂದು ಹೆಡಿಂಗ್ಲಿಯಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 4 ನೇ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಭಾರತದ ಟೆಸ್ಟ್ ತಂಡದ ನೂತನ ನಾಯಕ ಗಿಲ್, ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರೊಂದಿಗಿನ ಸಂದರ್ಶನದಲ್ಲಿ ಸ್ಕೈ ಸ್ಪೋರ್ಟ್ಸ್‌ನ ಪ್ರಶ್ನೆಗಗೆ ಉತ್ತರಿಸಿದರು. ಈ ಸಂದರ್ಭದಲ್ಲಿ, ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ನೇರವಾಗಿ ಕೇಳಲಾಯಿತು ಆದರೆ ಗಿಲ್ ಏನನ್ನೂ ಸ್ಪಷ್ಟಪಡಿಸಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಕಳೆದ ಟೆಸ್ಟ್ ಸರಣಿಯಲ್ಲಿ ಗಿಲ್ ಭಾರತದ ಪರ ನಂಬರ್ 3 ಬ್ಯಾಟ್ಸ್‌ಮನ್ ಆಗಿದ್ದರು. ಗಿಲ್ ಪ್ರಕಾರ, ಭಾರತ ತಂಡವು ಅಭ್ಯಾಸ ಪಂದ್ಯವನ್ನು ಆಡುತ್ತಿದೆ ಮತ್ತು ಅದರ ನಂತರ ತಂಡದ ಮ್ಯಾನೇಜ್‌ಮೆಂಟ್ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸುತ್ತದೆ ಎಂದಿದ್ದಾರೆ.
ಇದು ಅಭ್ಯಾಸ ಪಂದ್ಯದ ರೀತಿ ಆಡುತ್ತಿದ್ದೇವೆ
“ಈಗ ಅಲ್ಲ, ಅಭ್ಯಾಸ ಪಂದ್ಯ ಆಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾನು ಬಹುಶಃ ಅದರಲ್ಲಿ ಪ್ರಯೋಗ ಮಾಡಿ ಯಾವ ಬ್ಯಾಟಿಂಗ್ ಕ್ರಮಾಂಕ ಯಾರಿಗೆ ಸರಿಹೊಂದುತ್ತದೆ ಎಂದು ನೋಡುತ್ತೇನೆ” ಎಂದು ಗಿಲ್ ಹೇಳಿದರು. ಗಿಲ್ 2023-25ರ ಡಬ್ಲ್ಯೂಟಿಸಿ ಸರ್ಕಲ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಅದಕ್ಕೂ ಮೊದಲು ಅವರು ಆರಂಭಿಕ ಆಟಗಾರನಾಗಿ ಆಡಿದ್ದಾರೆ.
ಗಿಲ್ ಇಲ್ಲಿಯವರೆಗೆ ಯಾವುದೇ ಸ್ವರೂಪದಲ್ಲಿ ಭಾರತ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಲ್ಲ. ಆದರೆ, ಇಂಗ್ಲೆಂಡ್ ಸರಣಿಯು ಹೊಸ ಯುಗದ ಆರಂಭವನ್ನು ಗುರುತಿಸಬಹುದು. ರಾಹುಲ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತದ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಆದರೆ ಕರ್ನಾಟಕದ 33 ವರ್ಷದ ಬಲಗೈ ಬ್ಯಾಟ್ಸ್‌ಮನ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುವ ನಿರೀಕ್ಷೆಯಿದೆ. ಜೂನ್ 6 ರಿಂದ 9 ರವರೆಗೆ ನಾರ್ಥಾಂಪ್ಟನ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆದ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ಪರ ಶತಕ ಗಳಿಸುವ ಮೂಲಕ ಅವರು ಆರಂಭಿಕ ಆಟಗಾರನಾಗಿ ತಮ್ಮ ಅವಕಾಶಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ, ವಿರಾಟ್ ಕೊಹ್ಲಿ ಅವರ ಜಾಗದಲ್ಲಿ ಯುವ ಬ್ಯಾಟರ್ ಸಾಯಿ ಸುದರ್ಶನ್ ಅಥವಾ ಸ್ವತಃ ಶುಭ್‌ಮನ್ ಗಿಲ್ ಆಡುವ ನಿರೀಕ್ಷೆ ಇದೆ.
June 15, 2025 7:59 PM IST