Last Updated:
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದೆ. ಆರಂಭಿಕರು 92 ರನ್ಗಳ ಜೊತೆಯಾಟ ಆಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಗಿಲ್ ಜೊತೆ ಸೇರಿದ ಉಪನಾಯಕ ರಿಷಬ್ ಪಂತ್ ಕೂಡ ಅಮೋಘ ಬ್ಯಾಟಿಂಗ್ ನಡೆಸಿದರು.
ಬಹುನಿರೀಕ್ಷಿತ ಇಂಗ್ಲೆಂಡ್ ಹಾಗೂ ಭಾರತ (India vs England) ನಡುವಿನ ಆ್ಯಂಡರ್ಸನ್-ಸಚಿನ್ ಟೆಸ್ಟ್ ಸರಣಿ ಇಂದು (ಜೂನ್ 20) ರಿಂದ ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದೆ. ಆರಂಭಿಕರು 92 ರನ್ಗಳ ಜೊತೆಯಾಟ ಆಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಗಿಲ್ (Shubhman Gill) ಜೊತೆ ಸೇರಿದ ಉಪನಾಯಕ ರಿಷಬ್ ಪಂತ್ (Rishabh Pant) ಕೂಡ ಅಮೋಘ ಬ್ಯಾಟಿಂಗ್ ನಡೆಸಿದರು.
ಭಾರತದ ಪರ ವೇಗವಾಗಿ 3 ಸಾವಿರ ರನ್ ಸಿಡಿಸಿದ ವಿಕೀ
ಮೊದಲ ದಿನದಾಟದಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಮೋಘ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ದಿನದಾಟದ ಅಂತ್ಯಕ್ಕೆ ಅವರು 65 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದಾರೆ. ಈ ಇನ್ನಿಂಗ್ಸ್ ಮೂಲಕ ಅವರು, ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 3000 ರನ್ ಕಲೆಹಾಕಿದ ಭಾರತೀಯ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಾತ್ರರಾದರು. ಅವರು ಈ ಸಾಧನೆ ಮಾಡಲು 76 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು 3000ಕ್ಕಿಂತ ಅಧಿಕ ರನ್ಸ್ ಸಿಡಿಸಿದ್ದು ಎಂ ಎಸ್ ಧೋನಿ ಮಾತ್ರ.
ವೇಗವಾಗಿ 3000 ರನ್ ಸಿಡಿಸಿದ ವಿಶ್ವದ 2ನೇ ಆಟಗಾರ
ಮಾತ್ರವಲ್ಲ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 3000 ರನ್ಸ್ ಗಡಿದಾಟಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ಕೀರ್ತಿಗೂ ಅವರು ಪಾತ್ರರಾದರು ಇವರಿಗಿಂತ ವೇಗವಾಗಿ ಆಸ್ಟ್ರೇಲಿಯಾದ ಲೆಜಂಡ್ ಆಟಗಾರ ಆ್ಯಡಂ ಗಿಲ್ಕ್ರಿಸ್ಟ್ ಮಾತ್ರ ಪೂರ್ಣಗೊಳಿಸಿದ್ದಾರೆ. ಅವರು ತಮ್ಮ 63ನೇ ಇನ್ನಿಂಗ್ಸ್ನಲ್ಲಿ 3 ಸಾವಿರ ರನ್ ಹೊಡೆದ ಸಾಧನೆ ಮಾಡಿದ್ದಾರೆ. ಇನ್ನೂ ಈ ಸಾಲಿನಲ್ಲಿ ಆಂಡಿ ಫ್ಲವರ್ ಹಾಗೂ ಕುಮಾರ ಸಂಗಾಕ್ಕರ ಕೂಡ ಇದ್ದಾರೆ.
ವೇಗವಾಗಿ 3000 ರನ್ಸ್ ಸಿಡಿಸಿದ ವಿಕೆಟ್ ಕೀಪರ್ಗಳು
- ಆ್ಯಡಂ ಗಿಲ್ಕ್ರಿಸ್ಟ್ 63 ಇನ್ನಿಂಗ್ಸ್
- ರಿಷಬ್ ಪಂತ್ 76 ಇನ್ನಿಂಗ್ಸ್
- ಆ್ಯಂಡಿ ಫ್ಲವರ್ 78 ಇನ್ನಿಂಗ್ಸ್
- ಕುಮಾರ ಸಂಗಾಕ್ಕರ 78 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಜೈಸ್ವಾಲ್ ಶತಕದ ಮಿಂಚು
ಈ ಎರಡು ತ್ವರಿತ ವಿಕೆಟ್ಗಳು ಭಾರತಕ್ಕೆ ಸಣ್ಣ ಆಘಾತವನ್ನುಂಟುಮಾಡಿದರೂ, ಯಶಸ್ವಿ ಜೈಸ್ವಾಲ್ ತಮ್ಮ ಆಕರ್ಷಕ ಶತಕದೊಂದಿಗೆ ತಂಡವನ್ನು ಭದ್ರವಾಗಿರಿಸಿದ್ದಾರೆ. ಲಂಚ್ ವೇಳೆಗೆ 44 ರನ್ಗಳೊಂದಿಗೆ (ಅಜೇಯ) ಆಡುತ್ತಿದ್ದ ಜೈಸ್ವಾಲ್, ತಮ್ಮ ಇನಿಂಗ್ಸ್ನ್ನು ಮುಂದುವರಿಸಿ ಶತಕ ಸಿಡಿಸಿದರು. 2024ರ ಭಾರತ-ಇಂಗ್ಲೆಂಡ್ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ್ದ ಜೈಸ್ವಾಲ್, ಈ ಪಂದ್ಯದಲ್ಲೂ ತಮ್ಮ ಫಾರ್ಮ್ನ್ನು ಮುಂದುವರಿಸಿದ್ದಾರೆ. ನಾಯಕ ಶುಭ್ಮನ್ ಗಿಲ್ ಜೊತೆಗೂಡಿದ ಜೈಸ್ವಾಲ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 129 ರನ್ ಸೇರಿಸಿದರು. ಜೈಸ್ವಾಲ್ 158 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಿತ 101 ರನ್ಗಳಿಸಿ ಔಟ್ ಆದರು.
ಪಂತ್-ಗಿಲ್ ಶತಕದ ಜೊತೆಯಾಟ
ನಂತರ ನಾಯಕನ ಜೊತೆಗೂಡಿದ ಉಪನಾಯಕ ಪಂತ್ 4ನೇ ವಿಕೆಟ್ಗೆ ಮುರಿಯದ 138 ರನ್ಗಳ ಜೊತೆಯಾಟ ನಡೆಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಗಿಲ್ 175 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 127, ರಿಷಭ್ ಪಂತ್ 102 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ಸಹಿತ 65 ರನ್ಗಳಿಸಿದ್ದಾರೆ.
ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 43ಕ್ಕೆ 2 ವಿಕೆಟ್ ಪಡೆದರೆ, ಬ್ರಿಡನ್ ಕಾರ್ಸ್ 70ಕ್ಕೆ 1 ವಿಕೆಟ್ ಪಡೆದರು.
June 20, 2025 11:24 PM IST