Last Updated:
ಭಾರತದ ವಿರುದ್ಧ ಲಾರ್ಡ್ಸ್ ಟೆಸ್ಟ್‌ನಲ್ಲಿ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ. ಈ ವೇಳೆ ಅವರು ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ಯಾವುದೇ ಬ್ಯಾಟರ್ ಮಾಡದ ದಾಖಲೆ ಒಂದನ್ನು ನಿರ್ಮಿಸಿದ್ದಾರೆ.
ಗುರುವಾರ ಜುಲೈ 10ರಿಂದ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೂರನೇ ಹಾಗೂ ಬಹುನಿರೀಕ್ಷಿತ ಲಾರ್ಡ್ಸ್ ಟೆಸ್ಟ್ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಆದ್ರೆ, ಆರಂಭದಲ್ಲೇ ನಾಯಕನ ನಿರೀಕ್ಷೆ ಉಲ್ಟಾಪಲ್ಟ ಆಯಿತು. ಆರಂಭಿಕ ಬ್ಯಾಟರ್‌ಗಳಾದ ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ ಕ್ರಮವಾಗಿ 23 ಹಾಗೂ 18 ರನ್ ಗಳಿಸಿ ನಿತಿಶ್ ರೆಡ್ಡಿಗೆ (Nitish Reddy) ವಿಕೆಟ್ ಒಪ್ಪಿಸಿ ಹೊರನಡೆದರು. ಈ ವೇಳೆ ಓಲಿ ಪೋಪ್ ಜೊತೆಯಾದ ರೂಟ್ (Joe Root) ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು.
ಈ ಸಂದರ್ಭದಲ್ಲಿ 43ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಿದ್ದು ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ಜೋ ರೂಟ್, ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು, ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ. ಈ ವೇಳೆ ಅವರು ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ಯಾವುದೇ ಬ್ಯಾಟರ್ ಮಾಡದ ದಾಖಲೆ ಒಂದನ್ನು ನಿರ್ಮಿಸಿದ್ದಾರೆ.
ಅರ್ಧಶತಕದ ಮೂಲಕ ರೂಟ್ ಇತಿಹಾಸ ನಿರ್ಮಿಸಿದರು. ಅವರು, ಭಾರತದ ಟೆಸ್ಟ್ ಕ್ರಿಕೆಟ್ ಒಂದರಲ್ಲೇ 3000 ರನ್ ಪೂರ್ಣಗೊಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. 34 ವರ್ಷದ ಅವರು ಈ ಮೈಲಿಗಲ್ಲು ಸಾಧಿಸಿದ ವಿಶ್ವದ ಮೊದಲ ಆಟಗಾರ. ಕಳೆದ ವರ್ಷ ಇಂಗ್ಲೆಂಡ್‌ನ ಭಾರತ ಪ್ರವಾಸದ ಸಮಯದಲ್ಲಿ, ಅವರು ಭಾರತದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ರನ್ಸ್
ಆಟಗಾರ | ರನ್ಸ್ | ಶತಕ | ಅರ್ಧಶತಕ |
ಜೋ ರೂಟ್ | 3001 | 10 | 13 |
ರಿಕಿ ಪಾಂಟಿಂಗ್ | 2555 | 8 | 12 |
ಅಲಾಸ್ಟೇರ್ ಕುಕ್ | 2431 | 7 | 9 |
ಸ್ಟೀವ್ ಸ್ಮಿತ್ | 2356 | 11 | 5 |
ಕ್ಲೈವ್ ಲಾಯ್ಡ್ | 2344 | 7 | 12 |
ರೂಟ್ ಭಾರತದ ವಿರುದ್ಧ ತಮ್ಮ 13 ನೇ ಅರ್ಧಶತಕ ದಾಖಲಿಸಿದ್ದಾರೆ. ಇದು ಭಾರತದ ವಿರುದ್ಧ ಬೇರೆ ಯಾವುದೇ ಆಟಗಾರ ಗಳಿಸಿದ ಅರ್ಧಶತಕಕ್ಕಿಂತ ಹೆಚ್ಚು. ಇವರ ನಂತರ ಭಾರತದ ವಿರುದ್ಧ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ 11 ಅರ್ಧಶತಕ ಸಿಡಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
July 10, 2025 9:57 PM IST