India vs England: ಪಂತ್ ಗಾಯದ ಬಗ್ಗೆ ಮಹತ್ವದ ಅಪ್​ಡೇಟ್! ಭಾರತೀಯ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಬಿಸಿಸಿಐ | BCCI Update: Rishabh Pant Can Bat Despite Toe Fracture, But Won’t Keep Wicks

India vs England: ಪಂತ್ ಗಾಯದ ಬಗ್ಗೆ ಮಹತ್ವದ ಅಪ್​ಡೇಟ್! ಭಾರತೀಯ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಬಿಸಿಸಿಐ | BCCI Update: Rishabh Pant Can Bat Despite Toe Fracture, But Won’t Keep Wicks

Last Updated:

ತಂಡದ ಫಿಸಿಯೋ ಚಿಕಿತ್ಸೆ ನೀಡಿದರೂ, ಪಂತ್ ನಡೆಯಲಾಗದೆ ಗಾಲ್ಫ್ ಕಾರ್ಟ್‌ನಲ್ಲಿ ಆಸ್ಪತ್ರೆಗೆ ಸ್ಕ್ಯಾನ್‌ಗೆ ಕರೆದೊಯ್ಯಲಾಯಿತು. ಸ್ಕ್ಯಾನ್ ವರದಿಗಳು ಐದನೇ ಮೆಟಾಟಾರ್ಸಲ್ ಮೂಳೆಯಲ್ಲಿ ಮುರಿತವನ್ನು ದೃಢಪಡಿಸಿವೆ, ಇದಕ್ಕೆ ಕನಿಷ್ಠ 6 ವಾರಗಳ ವಿಶ್ರಾಂತಿ ಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ರಿಷಭ್ ಪಂತ್ರಿಷಭ್ ಪಂತ್
ರಿಷಭ್ ಪಂತ್

ಇಂಗ್ಲೆಂಡ್ ವಿರುದ್ಧದ 5 ಪದ್ಯಗಳ ಟೆಸ್ಟ್ ಸರಣಿಯ 4ನೇ ಟೆಸ್ಟ್ ಪಂದ್ಯದ ಮೊದಲ ದಿನ (ಜುಲೈ 23, 2025) ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ (Rishabh Pant) ಚೆಂಡು ಬಿದ್ದು ಕಾಲಿಗೆ ಗಂಭೀರ ಗಾಯವಾಯಿತು. ಆದರೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಒಂದು ಪ್ರಮುಖ ಅಪ್‌ಡೇಟ್ ನೀಡಿದ್ದು, ಪಂತ್ ಗಾಯದ ಹೊರತಾಗಿಯೂ ಬ್ಯಾಟಿಂಗ್ ಮಾಡಲು ಲಭ್ಯರಿರುವುದಾಗಿ ದೃಢಪಡಿಸಿದೆ. ಗುರುವಾರ ಇದರ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ರಿಷಭ್ ಪಂತ್ 4ನೇ ಟೆಸ್ಟ್​​​ನಲ್ಲಿ ವಿಕೆಟ್‌ಕೀಪಿಂಗ್ ಮಾಡಲಾರರು. ಆದರೆ ತಂಡಕ್ಕೆ ಅಗತ್ಯವಾದರೆ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಪಂತ್ ತಿಳಿಸಿದ್ದಾರೆ.

ಕ್ರಿಸ್ ವೋಕ್ಸ್ ಬೌಲಿಂಗ್​​ನಲ್ಲಿ ಗಾಯ

4ನೇ ಟೆಸ್ಟ್‌ನ ಮೊದಲ ದಿನದ ಕೊನೆಯ ಸೆಷನ್‌ನಲ್ಲಿ, 68ನೇ ಓವರ್‌ನಲ್ಲಿ ರಿಷಭ್ ಪಂತ್, ಇಂಗ್ಲೆಂಡ್‌ನ ವೇಗದ ಬೌಲರ್ ಕ್ರಿಸ್ ವೋಕ್ಸ್‌ರ ಯಾರ್ಕರ್ ಎಸೆತಕ್ಕೆ ರಿವರ್ಸ್ ಸ್ವೀಪ್ ಆಡಲು ಯತ್ನಿಸಿದಾಗ ಚೆಂಡು ಅವರ ಬಲಗಾಲಿನ ಕಾಲ್ಬೆರಳಿಗೆ (ಐದನೇ ಮೆಟಾಟಾರ್ಸಲ್ ಮೂಳೆ) ತಾಗಿತು. ಈ ಘಟನೆಯಿಂದ ಅವರಿಗೆ ತೀವ್ರ ನೋವು ಮತ್ತು ರಕ್ತಸ್ರಾವ ಉಂಟಾಗಿತ್ತು. ಗಾಯದಿಂದ ಮೈದಾನದಿಂದ ಹೊರ ಬೀಳುವ ಮುನ್ನ 48 ಎಸೆತಗಳಲ್ಲಿ 37 ರನ್‌ಗಳೊಂದಿಗೆ (2 ಬೌಂಡರಿ, 1 ಸಿಕ್ಸರ್) ರಿಟೈರ್ಡ್ ಹರ್ಟ್ ಆಗಿ ಮೈದಾನದಿಂದ ಹೊರಗೆ ಹೋದರು.

ಚೇತರಿಕೆಗೆ 6 ವಿಶ್ರಾಂತಿ ಅಗತ್ಯ

ತಂಡದ ಫಿಸಿಯೋ ಚಿಕಿತ್ಸೆ ನೀಡಿದರೂ, ಪಂತ್ ನಡೆಯಲಾಗದೆ ಗಾಲ್ಫ್ ಕಾರ್ಟ್‌ನಲ್ಲಿ ಆಸ್ಪತ್ರೆಗೆ ಸ್ಕ್ಯಾನ್‌ಗೆ ಕರೆದೊಯ್ಯಲಾಯಿತು. ಸ್ಕ್ಯಾನ್ ವರದಿಗಳು ಐದನೇ ಮೆಟಾಟಾರ್ಸಲ್ ಮೂಳೆಯಲ್ಲಿ ಮುರಿತವನ್ನು ದೃಢಪಡಿಸಿವೆ, ಇದಕ್ಕೆ ಕನಿಷ್ಠ 6 ವಾರಗಳ ವಿಶ್ರಾಂತಿ ಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ವಿಕೆಟ್ ಕೀಪಿಂಗ್ ಅಸಾಧ್ಯ

ಆದರೆ ಬಿಸಿಸಿಐ, ರಿಷಭ್ ಪಂತ್ 4ನೇ ಟೆಸ್ಟ್‌ನ ಉಳಿದ ದಿನಗಳಲ್ಲಿ ವಿಕೆಟ್‌ಕೀಪಿಂಗ್ ಮಾಡಲಾರರು. ಧ್ರುವ್ ಜುರೆಲ್ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಆದರೆ, ಗಾಯದ ಹೊರತಾಗಿಯೂ, ಪಂತ್ ಎರಡನೇ ದಿನ ತಂಡಕ್ಕೆ ಮರಳಿದ್ದಾರೆ ಮತ್ತು ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಲು ಲಭ್ಯರಿರಲಿದ್ದಾರೆ ಎಂದು ಶುಭಸಿದ್ದಿ ನೀಡಿದೆ. ಈ ಸುದ್ದಿ ಕೇಳಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಅವರು ತಂಡಕ್ಕೆ ಅಗತ್ಯವಾದರೆ ಮಾತ್ರ ಬ್ಯಾಟಿಂಗ್​​ ಮಾಡಲಿದ್ದಾರೆ.

ನೋವು ನಿವಾರಕ ಪಡೆದು ಬ್ಯಾಟಿಂಗ್

ಪಂದ್ಯದ ವೇಳೆ ಪಂತ್ ತಮ್ಮ ಗಾಯದ ಕಾಲಿಗೆ ರಕ್ಷಣಾತ್ಮಕ ಮೂನ್ ಬೂಟ್ ಧರಿಸಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೋಚ್ ಗೌತಮ್ ಗಂಭೀರ್‌ರೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ವೈದ್ಯಕೀಯ ತಂಡದ ಪ್ರಕಾರ, ಪಂತ್‌ಗೆ ಶೂ ಧರಿಸುವುದು ಮತ್ತು ಕಾಲಿನ ಮೇಲೆ ತೂಕವನ್ನು ಇರಿಸುವುದು ಕಷ್ಟವಾಗಿದೆ, ಇದರಿಂದ ಅವರ ಬ್ಯಾಟಿಂಗ್ ಸಾಧ್ಯತೆ ಕಡಿಮೆಯಿದೆ. BCCI ವೈದ್ಯಕೀಯ ತಂಡವು ನೋವು ನಿವಾರಕ ಔಷಧಿಗಳೊಂದಿಗೆ ಪಂತ್‌ರನ್ನು ಬ್ಯಾಟಿಂಗ್‌ಗೆ ತಯಾರು ಮಾಡಲು ಪ್ರಯತ್ನಿಸುತ್ತಿದೆ, ಆದರೆ ಅಂತಿಮ ನಿರ್ಧಾರವು ಗಾಯದ ಗಂಭೀರತೆ ಮತ್ತು ಪಂತ್‌ರ ಆರಾಮದ ಮೇಲೆ ಅವಲಂಬಿತವಾಗಿದೆ.