India vs England: ಬುಮ್ರಾ ಔಟ್, 30 ವರ್ಷದ ಸ್ಟಾರ್ ಬೌಲರ್​ ಇನ್! ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​​ಗೆ ಹೀಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್ XI | India vs England Team India Changes Confusion in 2nd Test

India vs England: ಬುಮ್ರಾ ಔಟ್, 30 ವರ್ಷದ ಸ್ಟಾರ್ ಬೌಲರ್​ ಇನ್! ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​​ಗೆ ಹೀಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್ XI | India vs England Team India Changes Confusion in 2nd Test

ಈ ಹಿನ್ನೆಲೆಯಲ್ಲಿ ಟೀಂ ಇಂಡಿಯ ಎರಡನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಒತ್ತಡದಲ್ಲಿದೆ. ಈ ನಡುವೆ ಎರಡನೇ ಪಂದ್ಯದಲ್ಲಿ ಯಾರಿಗೆಲ್ಲ ಅವಕಾಶ ನೀಡಬೇಕು. ಯಾರಿಗೆ ಅವಕಾಶ ನೀಡಬಾರದು ಎಂಬ ಗೊಂದಲ ತಂಡದ ಮ್ಯಾನೆಜ್‌ಮೆಂಟ್‌ನಲ್ಲಿ ಕಾಡುತ್ತಿದೆ. ಆದ್ರೂ ಎರಡನೇ ಪಂದ್ಯದಿಂದ ಅನುಭವಿ ವೇಗಿ ಜಸ್ಪ್ರಿತ್ ಬುಮ್ರಾ ಹೊರಗುಳಿಯುವುದು ಬಹುತೇಖ ಖಚಿತ ಎನ್ನಲಾಗುತ್ತಿದೆ. ಹಾಗಿದ್ರೆ ಎರಡನೇ ಪಂದ್ಯದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂದು ನೋಡುವುದಾದ್ರೆ.

ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಇಲ್ಲ

ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಮೊದಲ ಪಂದ್ಯದಲ್ಲಿ ಅದ್ಭುತವಾಗಿ ಪ್ರದರ್ಶನ ತೋರಿದ್ದರಿಂದ ಯಾವುದೇ ಬದಲಾವಣೆ ಮಾಡುವುದು ಡೌಟ್ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಟೀಮಂ ಇಂಡಿಯಾಗೆ ಆಯ್ಕೆಯಾದ ಸಾಯಿ ಸುದರ್ಶನ್ ಹಾಗೂ 8 ವರ್ಷಗಳ ಬಳಿಕ ತಂಡಕ್ಕೆ ಮರಳಿದ ಕರುಣ್ ನಾಯರ್ ಬ್ಯಾಟಿಂಗ್ ವೈಫಲ್ಯ ಎದುರಿಸಿದರೂ ಕೂಡ ಅವರಿಗೆ ಇನ್ನೊಂದು ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಮಾತ್ರವಲ್, ಕರುಣ್ ನಾಯರ್‌ಗೆ 3ನೇ ಕ್ರಮಾಂಕಕ್ಕೆ ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

7ನೇ ಕ್ರಮಾಂಕ ಮತ್ತು ಅದಕ್ಕಿಂತ ಕೆಳ ಕ್ರಮಾಂಕಗಳಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಶಾರ್ದೂಲ್ ಠಾಕೂರ್ ಕೈಬಿಟ್ಟು ಅವರ ಸ್ಥಾನಕ್ಕೆ ನಿತೀಶ್ ರೆಡ್ಡಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಮೊದಲ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಠಾಕೂರ್ ಬ್ಯಾಟಿಂಗ್‌ನಲ್ಲಿ ಯಾವುದೇ ಕೊಡುಗೆ ನೀಡಿರಲಿಲ್ಲ. ಬೌಲಿಂಗ್‌ನಲ್ಲಿ ಕೂಡ ಗಮನಾರ್ಹ ಪ್ರದರ್ಶನ ತೋರುವಲ್ಲಿ ಅವರು ವಿಫಲರಾಗಿದ್ದರು.

ಇನ್ನೂ ಜಸ್ಪ್ರಿತ್ ಬುಮ್ರಾ ಸರಣಿಯ 3 ಪಂದ್ಯಗಳನ್ನು ಮಾತ್ರ ಆಡ್ತಾರೆ ಎಂದು ಹೇಳಲಾಗಿತ್ತು. ಹಾಗಾಗಿ ನಾಳೆಯಿಂದ ಆರಂಭವಾಗುವ ಟೆಸ್ಟ್ ಸರಣಿಯಿಂದ ಅವರು ದೂರು ಉಳಿಯುವ ಸಾಧ್ಯತೆ ಹೆಚ್ಚಿದೆ. ಒಂದುವೇಳೆ ಅವರು ಹೊರಗುಳಿದರೆ ಅವರ ಜಾಗದಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅಥವಾ ಅರ್ಶದೀಪ್ ಸಿಂಗ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

ಇಬ್ಬರು ಸ್ಪಿನ್ನರ್‌ ಚಾನ್ಸ್

ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಲಿದೆ ಎಂದು ಟೆನ್ ಡೋಸ್ಚೇಟ್ ಸುಳಿವು ನೀಡಿದ್ದಾರೆ. ವಾಷಿಂಗ್ಟನ್ ಸುಂದರ್ ಅವರ ಬ್ಯಾಟಿಂಗ್ ಚೆನ್ನಾಗಿರುವುದರಿಂದ ಅವರನ್ನು ಪ್ಲೇಯಿಂಗ್ 11 ನಲ್ಲಿ ತಂದರೂ ಆಶ್ಚರ್ಯವಿಲ್ಲ. ಆದ್ರೆ, ಸದ್ಯ ಬುಮ್ರಾ ಬದಲಿಗೆ ಅರ್ಶದೀಪ್ ಅಥವಾ ಕುಲ್ದೀಪ್ ಆಯ್ಕೆ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ XI: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭಮನ್ ಗಿಲ್, ರಿಷಬ್ ಪಂತ್ (ವಿಕೀ), ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್\ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

India vs England: ಬುಮ್ರಾ ಔಟ್, 30 ವರ್ಷದ ಸ್ಟಾರ್ ಬೌಲರ್​ ಇನ್! ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​​ಗೆ ಹೀಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್ XI