Last Updated:
ಮೊದಲ ಪಂದ್ಯವನ್ನು ಸೋತಿರುವ ಯಂಗ್ ಇಂಡಿಯಾ ಇಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಮಾತ್ರವಲ್ಲ, ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿರಿಸಿಕೊಂಡಿದೆ.
ಗುರುವಾರ (ಜುಲೈ 5) ಶುಭಮನ್ ಗಿಲ್ (Shubhman Gill) 162 ಎಸೆತಗಳಲ್ಲಿ 161 ರನ್ ಗಳಿಸುವ ಮೂಲಕ ಭಾರತ 83 ಓವರ್ಗಳಲ್ಲಿ 427/6 ಕ್ಕೆ ಗಳಿಸಿದ್ದಾಗ ಟೀಂ ಇಂಡಿಯಾ (Team India) ಎರಡನೇ ಇನ್ನಿಂಗ್ಸ್ನಲ್ಲಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಪಂದ್ಯವನ್ನು ಸೋತಿರುವ ಯಂಗ್ ಇಂಡಿಯಾ (Young India) ಇಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಮಾತ್ರವಲ್ಲ, ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿರಿಸಿಕೊಂಡಿದೆ.
ಸದ್ಯ ಟೀಂ ಇಂಡಿಯಾ 93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಮಾಡಲಾಗದ ಹೊಸ ದಾಖಲೆಯೊಂದನ್ನು ಮಾಡಿದೆ. ಅದು ಕೂಡ ಘಟಾನುಘಟಿ ಆಟಗಾರರು. ಲೆಜೆಂಡರಿ ಆಟಗಾರರು ತಂಡದಲ್ಲಿ ಇದ್ದಾಗಲು ಕೂಡ ಈ ಸಾಧನೆ ಮಾಡಲಾಗಿರಲಿಲ್ಲ. ಆ ದಾಖಲೆ ಬೇರೆ ಯಾವುದು ಅಲ್ಲ, ಟೀಂ ಇಂಡಿಯಾ ಒಂದೇ ಪಂದ್ಯದಲ್ಲಿ ಬರೋಬ್ಬರಿ 1000 ರನ್ ಗಳಿಸಿರುವುದು. ಹೌದು, ಮೊದಲ ಇನ್ನಿಂಗ್ಸ್ನ್ಲಲಿ 587 ರನ್ ಎರಡನೇ ಇನ್ನಿಂಗ್ಸ್ನಲ್ಲಿ 427 ರನ್ಗಳು ಸಿಡಿಸುವ ಮೂಲಕ 1000ರನ್ ಪೂರ್ಣಗೊಳಿಸಿತು.
ಭಾರತ ಟೆಸ್ಟ್ ಪಂದ್ಯದಲ್ಲಿ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವುದಕ್ಕೆ ಮೊದಲು ಇದುವರೆಗೂ ವಿಶ್ವದ 5 ತಂಡಗಳು ಮಾತ್ರ ಈ ದಾಖಲೆ ಮಾಡವೆ. ಟೆಸ್ಟ್ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಒಟ್ಟಾರೆ ದಾಖಲೆ ಇಂಗ್ಲೆಂಡ್ ಹೆಸರಲ್ಲಿದೆ. 1930 ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಕಿಂಗ್ಸ್ಟನ್ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಒಟ್ಟು 1121 ರನ್ ಗಳಿಸಿತ್ತು.
ಆ ದಿನದ ರೆಡ್-ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 849 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಒಂಬತ್ತು ವಿಕೆಟ್ಗಳ ನಷ್ಟಕ್ಕೆ 272 ರನ್ಗಳನ್ನು ಗಳಿಸಿ ನಂತರ ಡಿಕ್ಲೇರ್ ಮಾಡಿಕೊಂಡಿತ್ತು.
ತಂಡ | ರನ್ಗಳು (ಮೊದಲ ಇನ್ನಿಂಗ್ಸ್) | ರನ್ಗಳು (2ನೇ ಇನ್ನಿಂಗ್ಸ್) | ಒಟ್ಟು ರನ್ಗಳು | ವಿರೋಧ | ಸ್ಥಳ | ವರ್ಷ |
ಇಂಗ್ಲೆಂಡ್ | 849 | 272/9 | 1121 | ವೆಸ್ಟ್ ಇಂಡೀಸ್ | ಕಿಂಗ್ಸ್ಟನ್ | 1930 |
ಪಾಕಿಸ್ತಾನ | 588 | 490/8 | 1078 | ಭಾರತ | ಫೈಸಲಾಬಾದ್ | 2006 |
ಆಸ್ಟ್ರೇಲಿಯಾ | 701 | 327 | 1028 | ಇಂಗ್ಲೆಂಡ್ | ದಿ ಓವಲ್ | 1934 |
ಭಾರತ | 587 | 427/6 | 1014 | ಇಂಗ್ಲೆಂಡ್ | ಎಡ್ಜ್ಬಾಸ್ಟನ್ | 2025 |
ಆಸ್ಟ್ರೇಲಿಯಾ | 619 | 394/8 | 1013 | ವೆಸ್ಟ್ ಇಂಡೀಸ್ | ಸಿಡ್ನಿ | 1969 |
ದಕ್ಷಿಣ ಆಫ್ರಿಕಾ | 530 | 481 | 1011 | ಇಂಗ್ಲೆಂಡ್ | ಡರ್ಬನ್ | 1939 |
ಇದಕ್ಕೂ ಮೊದಲು ಟೀಂ ಇಂಡಿಯಾ 2004 ರ ಜನವರಿಯಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ್ದ 916 ರನ್ಗಳು ಟೆಸ್ಟ್ನಲ್ಲಿ ಭಾರತದ ಹಿಂದಿನ ಅತ್ಯಧಿಕ ಸ್ಕೋರ್ ಆಗಿತ್ತು.
ನಂತರ ಒಂದಾದ ರವೀಂದ್ರ ಜಡೇಜಾ ಮತ್ತು ಶುಭ್ಮನ್ ಗಿಲ್ 5ನೇ ವಿಕೆಟ್ ಜೊತೆಯಾಟದಲ್ಲಿ 175 ರನ್ಗಳ ಜೊತೆಯಾಟ ನಡೆಸಿದರು. ಶುಭ್ಮನ್ ಗಿಲ್ 2ನೇ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದರು. 162 ಎಸೆತಗಳನ್ನ ಎದುರಿಸಿದ ಶುಭ್ಮನ್ ಗಿಲ್ 13 ಬೌಂಡರಿ, 8 ಸಿಕ್ಸರ್ಗಳ ಸಹಿತ 161 ರನ್ಗಳಿಸಿದರು. ರವೀಂದ್ರ ಜಡೇಜಾ 118 ಎಸೆತಗಳಲ್ಲಿ ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 69 ರನ್ಗಳಿಸಿದರು. ವಾಷಿಂಗ್ಟನ್ ಸುಂದರ್ ಅಜೇಯ 12 ರನ್ಗಳಿಸಿದರು.
July 05, 2025 11:09 PM IST