ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗಿಂತ ಶಾರ್ದೂಲ್ ಠಾಕೂರ್ ಉತ್ತಮ ಎಂದು ಆದ್ಯತೆ ನೀಡಲಾಗಿತ್ತು, ಆದರೆ ಅವರೂ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 1 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 4 ರನ್ ಗಳಿಸಿ ವಿಫಲರಾದರು. ಬೌಲಿಂಗ್ನಲ್ಲಿ, ಮೊದಲ ಇನ್ನಿಂಗ್ಸ್ನಲ್ಲಿ ಯಾವುದೇ ವಿಕೆಟ್ ಪಡೆಯದ ಅವರು, ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ಗಳನ್ನು (2-51) ಪಡೆದರೂ, ಒಟ್ಟಾರೆಯಾಗಿ ತಂಡದ ಗೆಲುವಿಗೆ ಕೊಡುಗೆ ನೀಡುವಲ್ಲಿ ವಿಫಲರಾದರು.