India vs England: ಲಾರ್ಡ್ಸ್‌ ಟೆಸ್ಟ್​ ಮೊದಲ ಇನ್ನಿಂಗ್ಸ್‌ನಲ್ಲಿ ಉಭಯ ತಂಡಗಳಿಂದ ಸಮಬಲದ ರನ್ಸ್! ಇದಕ್ಕೂ ಮೊದಲು ಈ ಘಟನೆ ನಡೆದಿದ್ದು ಯಾವಾಗ ಗೊತ್ತಾ? | lords test india england first innings tie rare event happened in test cricket

India vs England: ಲಾರ್ಡ್ಸ್‌ ಟೆಸ್ಟ್​ ಮೊದಲ ಇನ್ನಿಂಗ್ಸ್‌ನಲ್ಲಿ ಉಭಯ ತಂಡಗಳಿಂದ ಸಮಬಲದ ರನ್ಸ್! ಇದಕ್ಕೂ ಮೊದಲು ಈ ಘಟನೆ ನಡೆದಿದ್ದು ಯಾವಾಗ ಗೊತ್ತಾ? | lords test india england first innings tie rare event happened in test cricket

ಲಾರ್ಡ್ಸ್‌ನಲ್ಲಿ (Lords) ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರನೇ ಟೆಸ್ಟ್ ಪಂದ್ಯದ 3 ನೇ ದಿನದಾಟದಲ್ಲಿ ಅಪರೂಪದ ಘಟನೆಯೊಂದು ಸಂಭವಿಸಿದೆ. ಸುಮಾರು 3 ದಿನಗಳ ಆಟದ ನಂತರ ಎರಡೂ ತಂಡಗಳು ಮೊದಲ ಇನ್ನಿಂಗ್ಸ್‌ನಲ್ಲಿ ಸಮಬಲದ ರನ್ಸ್ ಗಳಿಸುವ ಮೂಲಕ ಅಚ್ಚರಿ ಉಂಟುಮಾಡಿದರು. ಅಂದಹಾಗೆ ಘಟನೆ ವಿಶ್ವ ಕ್ರಿಕೆಟ್ನಲ್ಲಿ ಇದುವರೆಗೆ 9 ಬಾರಿ ಮಾತ್ರ ಸಂಭವಿಸಿದೆ. ಸದ್ಯ, ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಉಭಯ ತಂಡಗಳು ತಲಾ 387 ರನ್ ಬಾರಿಸಿವೆ.

ರವೀಂದ್ರ ಜಡೇಜಾ ಕ್ರೀಸ್ನಲ್ಲಿ ಇರುವವರಗೂ ಟೀಂ ಇಂಡಿಯಾ ಕನಿಷ್ಠ 50 ರನ್ಗಳ ಮುನ್ನಡೆ ಸಾಧಿಸಲಿದೆ ಎಂದು ಊಹಿಸಲಾಗಿತ್ತು. ಆದ್ರೆ, ಆಗಿದ್ದೇ ಬೇರೆ, ಜಡೇಜಾ ಔಟ್ ಆಗುತ್ತಿದ್ದಂತೆ ಕೆಳ ಕ್ರಮಾಂಕದ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಸಿರಾಜ್ ಮಾತ್ರ ಉಳಿದಿದ್ದರಿಂದ ವಾಷಿಂಗ್ಟನ್ ಸುಂದರ್ ದೊಡ್ಡ ಹೊಡತಕ್ಕೆ ಕೈಹಾಕಿ ಕೊನೆಯವರಾಗಿ ಔಟ್ ಆದರು. ಸಂದರ್ಭದಲ್ಲಿ ಸ್ಕೋರ್ ಲೆವೆಲ್ ಆಗಿತ್ತು ಎಂಬುದು ವಿಶೇಷ. ಇನ್ನೂ ಘಟನೆ ಕೊನೆಯದಾಗಿ ಯಾವಾಗ ಸಂಭವಿಸಿತ್ತು ಎಂದು ನೋಡೋಣ ಬನ್ನಿ.

ಹತ್ತು ವರ್ಷದ ಹಿಂದೆ ಘಟನೆ

ಇಲ್ಲಿಗೆ ಸುಮಾರು ಹತ್ತು ವರ್ಷಗಳ ಹಿಂದೆ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್ ಸ್ಕೋರ್‌ಗಳು ಟೈ ಆಗಿತ್ತು. 2015 ರಲ್ಲಿ ಲೀಡ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದಾಗ ಘಟನೆ ಸಂಭವಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 350 ರನ್ ಗಳಿಸಿತು, ವಿಕೆಟ್ ಕೀಪರ್ ಲ್ಯೂಕ್ ರೊಂಚಿ 88 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಇತ್ತ ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ 5 ವಿಕೆಟ್ ಪಡೆದು ಮಿಂಚಿದರು.

ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಕೂಡ ಆಡಮ್ ಲಿತ್ ಅವರ ಶತಕದ ನೆರವಿನಿಂದ ಇಂಗ್ಲೆಂಡ್ ಕೂಡ 350 ರನ್ ಗಳಿಸಿತು. ಇಂಗ್ಲೆಂಡ್‌ನ ಪ್ರಸ್ತುತ ಬೌಲಿಂಗ್ ಕೋಚ್ ಆಗಿರುವ ಟಿಮ್ ಸೌಥಿ ಪಂದ್ಯದಲ್ಲಿ 4 ವಿಕೆಟ್‌ ಕಬಳಿ ಮಿಂಚಿದ್ದರು. ಪಂದ್ಯದಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 454/8 ಕ್ಕೆ ಡಿಕ್ಲೇರ್ ಮಾಡಿಕೊಂಡಿತು, ಬಿಜೆ ವ್ಯಾಟ್ಲಿಂಗ್ ಅವರ ಶತಕದ ನೆರವಿನಿಂದ. ಇಂಗ್ಲೆಂಡ್ 455 ರನ್‌ಗಳನ್ನು ಬೆನ್ನಟ್ಟಬೇಕಾಯಿತು, ಆದರೆ ಮಾರ್ಕ್ ಕ್ರೇಗ್ ಮತ್ತು ಕೇನ್ ವಿಲಿಯಮ್ಸನ್ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ 199 ರನ್‌ಗಳ ಸೋಲು ಅನುಭವಿಸಿತು.

ಇದಕ್ಕೂ ಮೊದಲು ಭಾರತ ಇನ್ನಿಂಗ್ಸ್ ಟೈ

ಇದಕ್ಕೂ ಮೊದಲು ಭಾರತ 1986 ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧವೇ ಘಟನೆ ಸಂಭವಿಸಿತ್ತು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ನಾಯಕ ಮೈಕ್ ಗ್ಯಾಟಿಂಗ್ ಅವರ ಶತಕದ ಸಹಾಯದಿಂದ 390 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ, ಭಾರತ ಕೂಡ 390 ರನ್ ಗಳಿಸಿತು. ಪಂದ್ಯದಲ್ಲಿ ಭಾರತದ ಪರ ಮೊಹಿಂದರ್ ಅಮರನಾಥ್ ಅವರ 79 ರನ್ ಸಿಡಿಸಿದ್ದು ಅತ್ಯಧಿಕ ಸ್ಕೋರ್ ಆಗಿತ್ತು.

ಇದನ್ನೂ ಓದಿ: Aayush Mhatre: ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನ ಧೂಳೀಪಟ ಮಾಡಿದ ಆಯುಷ್ ಮ್ಹಾತ್ರೆ! ಬೃಹತ್ ಮೊತ್ತದ ಭಾರತ U19

ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 235 ರನ್‌ಗಳಿಗೆ ಆಲೌಟ್ ಆಯಿತು, ಗ್ರಹಾಂ ಗೂಚ್ ಅವರ 40 ರನ್‌ ಗಳಿಸಿದ್ದು ಅತ್ಯಧಿಕ ಸ್ಕೋರ್ ಆಗಿತ್ತು. ಭಾರತದ ಪರ ಚೇತನ್ ಶರ್ಮಾ 6 ವಿಕೆಟ್‌ಗಳನ್ನು ಕಬಳಿಸಿದರು. ಭಾರತ ಗೆಲ್ಲಲು 236 ರನ್‌ಗಳನ್ನು ಬೆನ್ನಟ್ಟಬೇಕಾಗಿತ್ತು, ಆದರೆ ಸಾಕಷ್ಟು ಸಮಯವಿಲ್ಲದ ಕಾರಣ, ಪ್ರವಾಸಿ ತಂಡವು 174 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಭಾರತ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಅರ್ಧಶತಕ ಗಳಿಸಿದರು.

ಭಾರತ – ವಿಂಡೀಸ್

ಇದಕ್ಕೂ ಮೊದಲು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ 1958 ರಲ್ಲಿ ಕೂಡ ಇದೇ ಘಟನೆ ಸಂಭವಿಸಿತ್ತು. ಪಂದ್ಯದ ಮೊಲ ಇನ್ನಿಂಗ್ಸ್ನಲ್ಲಿ ಉಭಯ ತಂಡಗಳು 222 ರನ್ ಸಿಡಿಸಿದ್ದವು. ಪಂದ್ಯವನ್ನು ಭಾರತ 203 ರನ್ಗಳಿಂದ ಸೋಲು ಅನುಭವಿಸಿತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

India vs England: ಲಾರ್ಡ್ಸ್‌ ಟೆಸ್ಟ್​ ಮೊದಲ ಇನ್ನಿಂಗ್ಸ್‌ನಲ್ಲಿ ಉಭಯ ತಂಡಗಳಿಂದ ಸಮಬಲದ ರನ್ಸ್! ಇದಕ್ಕೂ ಮೊದಲು ಈ ಘಟನೆ ನಡೆದಿದ್ದು ಯಾವಾಗ ಗೊತ್ತಾ?