India vs England: ಲೀಡ್ಸ್​ ಮೈದಾನದಲ್ಲಿ ಗರಿಷ್ಠ ಚೇಸಿಂಗ್ ಎಷ್ಟು? ಭಾರತ ಇನ್ನೂ ಎಷ್ಟು ರನ್​ಗಳಿಸಿದ್ರೆ ಸೇಫ್​? ಇಲ್ಲಿದೆ ಮಾಹಿತಿ | India vs England 2025 Headingley Test Chasing Records how much score to india to fix good target

India vs England: ಲೀಡ್ಸ್​ ಮೈದಾನದಲ್ಲಿ ಗರಿಷ್ಠ ಚೇಸಿಂಗ್ ಎಷ್ಟು? ಭಾರತ ಇನ್ನೂ ಎಷ್ಟು ರನ್​ಗಳಿಸಿದ್ರೆ ಸೇಫ್​? ಇಲ್ಲಿದೆ ಮಾಹಿತಿ | India vs England 2025 Headingley Test Chasing Records how much score to india to fix good target

ಈ ಸಂದರ್ಭದಲ್ಲಿ ಭಾರತ ಹೆಡಿಂಗ್ಲೆಯಲ್ಲಿ ಟೆಸ್ಟ್ ಪಂದ್ಯ ಗೆಲ್ಲಲು ಎಷ್ಟು ರನ್​ಗಳಿಸಿದರೆ ಉತ್ತಮ, ಹಾಗೂ ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಚೇಸ್ ಎಷ್ಟು ಎಂಬುದನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

ಹೆಡಿಂಗ್ಲೆಯ ಚೇಸಿಂಗ್ ಇತಿಹಾಸ

ಹೆಡಿಂಗ್ಲೆ ಕ್ರೀಡಾಂಗಣವು ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಚೇಸಿಂಗ್‌ಗಳಿಗೆ ಹೆಸರಾಗಿದೆ. 1948ರಲ್ಲಿ ಆಸ್ಟ್ರೇಲಿಯಾ ತಂಡವು 404 ರನ್‌ಗಳ ಗುರಿಯನ್ನು 7 ವಿಕೆಟ್‌ಗಳಿಗೆ ಯಶಸ್ವಿಯಾಗಿ ಬೆನ್ನಟ್ಟಿತ್ತು, ಇದು ಈ ಕ್ರೀಡಾಂಗಣದ ಗರಿಷ್ಠ ಚೇಸಿಂಗ್ ದಾಖಲೆಯಾಗಿದೆ. ಆ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​​ನಲ್ಲಿ 496ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 458 ರನ್​ಗಳಿಸಿತ್ತು. ನಂತರ ಇಂಗ್ಲೆಂಡ್ 38 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​​ನಲ್ಲಿ 365 ರನ್​ಗಳಿಸಿ ಡಿಕ್ಲೇರ್ ಘೋಷಿಸಿ ಆಸೀಸ್​ಗೆ 404 ರನ್​ಗಳ ಗುರಿ ನೀಡಿತ್ತು. ಈ ಮೊತ್ತವನ್ನ ಚೇಸ್ ಮಾಡಿದ ಕಾಂಗರೂ ಪಡೆ ಡೊನಾಲ್ಡ್ ಬ್ರಾಡ್ಮನ್​ (ಅಜೇಯ 173) ಹಾಗೂ ಆರ್ಥರ್ ಮೋರಿಸ್(182) ಶತಕಗಳ ನೆರವಿನಿಂದ 6 ವಿಕೆಟ್​ಗಳ ಜಯ ಸಾಧಿಸಿತ್ತು. ಇದು 77 ವರ್ಷಗಳಿಂದ ಈ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿಯೇ ಇದೆ.

2ನೇ ಗರಿಷ್ಠ ಚೇಸಿಂಗ್

ಇತ್ತೀಚಿನ ಚೇಸ್​​ ಗಮನಿಸಿದರೆ 2019ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 359ರನ್​ಗಳನ್ನ ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದಿದ್ದಾಗಿದೆ. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​​ನಲ್ಲಿ 179ಕ್ಕೆ ಆಲೌಟ್ ಆದರೆ, ಇಂಗ್ಲೆಂಡ್ 2ನೇ ಕೇವಲ 67ಕ್ಕೆ ಆಲೌಟ್ ಆಗಿತ್ತು. ನಂತರ 2ನೇ ಇನ್ನಿಂಗ್ಸ್​​ನಲ್ಲಿ 112 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 246 ರನ್​ಗಳಿಸಿ ಅತಿಥೇಯ ತಂಡಕ್ಕೆ 359ರನ್​ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನ ಬೆನ್​ ಸ್ಟೋಕ್ಸ್ ಸಿಡಿಸಿದ ಐತಿಹಾಸಿಕ ಅಜೇಯ ಶತಕದ (135) ನೆರವಿನಿಂದ ಇಂಗ್ಲೆಂಡ್ 1 ವಿಕೆಟ್​ ಜಯ ಸಾಧಿಸಿತ್ತು. ಇದು ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದು ಐತಿಹಾಸಿಕ ಚೇಸಿಂಗ್ ಆಗಿ ಗುರುತಿಸಿಕೊಂಡಿದೆ.

ಲೀಡ್ಸ್​​ನಲ್ಲಿ ಗರಿಷ್ಠ ಚೇಸಿಂಗ್ ದಾಖಲೆ ಇಲ್ಲಿವೆ

ಆಸ್ಟ್ರೇಲಿಯಾ vs ಇಂಗ್ಲೆಂಡ್ (1948)- 404 ರನ್‌

ಇಂಗ್ಲೆಂಡ್ vs ಆಸ್ಟ್ರೇಲಿಯಾ (2019)- 359 ರನ್‌

ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (2017)- 322 ರನ್‌

ಇಂಗ್ಲೆಂಡ್ vs ಆಸ್ಟ್ರೇಲಿಯಾ (2001)- 315 ರನ್‌ಗಳು

ಇಂಗ್ಲೆಂಡ್ vs ನ್ಯೂಜಿಲೆಂಡ್ (2022)- 296 ರನ್‌ಗಳು

ಇಂಗ್ಲೆಂಡ್ vs ಆಸ್ಟ್ರೇಲಿಯಾ (2023)- 251 ರನ್‌ಗಳು

ಇಂಗ್ಲೆಂಡ್ vs ಪಾಕಿಸ್ತಾನ (1982)- 219 ರನ್‌ಗಳು

ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ (1929)- 184 ರನ್‌ಗಳು

ಪಾಕಿಸ್ತಾನ vs ಆಸ್ಟ್ರೇಲಿಯಾ (2010)- 180 ರನ್‌ಗಳು

ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (1984)- 128 ರನ್‌ಗಳು

ಭಾರತ ಎಷ್ಟು ರನ್​ಗಳಿಸಿದ್ರೆ ಸೇಫ್

ಮೇಲಿನ ಅಂಕಿ ಅಂಶಗಳನ್ನ ಗಮನಿಸಿದರೆ ಇಂಗ್ಲೆಂಡ್​ ಬ್ಯಾಟಿಂಗ್​​ ಲೈನ್​ ಅಪ್ ಬಲಿಷ್ಠವಾಗಿರುವುದರಿಂದ ಭಾರತ ತಂಡ ಈ ಪಂದ್ಯವನ್ನ ಗೆಲ್ಲಲು ಕನಿಷ್ಠ 300ರಿಂದ 320ರನ್​ಗಳ ಟಾರ್ಗೆಟ ನೀಡುವ ಅಗತ್ಯವಿದೆ. ಅಲ್ಲದೆ ಬುಮ್ರಾ ಹೊರೆತುಪಡಿಸಿ ಉಳಿದ ಬೌಲರ್​ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ಜೊತೆ ರನ್​ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 300ಕ್ಕಿಂತ ಹೆಚ್ಚಿನ ಗುರಿ ನೀಡಿದರಷ್ಠೇ ಈ ಮೈದಾನದಲ್ಲಿ ಗೆಲ್ಲಲು ಅವಕಾಶ ಸಿಗುತ್ತದೆ. ಸಧ್ಯಕ್ಕೆ ಭಾರತ ತಂಡ 92ಕ್ಕೆ3 ವಿಕೆಟ್ ಕಳೆದುಕೊಂಡಿದೆ. ಇನ್ನು 200ಕ್ಕೂ ಹೆಚ್ಚು ರನ್​ಗಳಿಸಬೇಕಿದೆ.